ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಕ್ಷ್ಮಿ ಹೆಬ್ಬಾಳ್ಕರ್ ಮರಾಠಿ ಪ್ರೀತಿ, ಕನ್ನಡಿಗರು ಮತ್ತೆ ಗರಂ

By ಸಶಿ, ಬೆಳಗಾವಿ
|
Google Oneindia Kannada News

Recommended Video

Belagavi : congress women wing leader lakshmi hebbalkar again in controversy | Oneindia Kannada

ಬೆಳಗಾವಿ, ಅಕ್ಟೋಬರ್ 13: 'ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ಮಹಾರಾಷ್ಟ್ರಕ್ಕೆ ಜೈ ಎನ್ನುತ್ತೇನೆ' ಎಂಬ ವಿವಾದಿತ ಹೇಳಿಕೆ ನೀಡಿ, ಕ್ಷಮೆಯಾಚಿಸಿದ್ದ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಲಕ್ಷ್ಮಿ ಅವರ ಮರಾಠಿ ಪ್ರೀತಿ ಕಂಡು ಕನ್ನಡಿಗರು ಗರಂ ಆಗಿದ್ದಾರೆ.

ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದ ಲಕ್ಷ್ಮಿ ಹೆಬ್ಬಾಳ್ಕರ್ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದ ಲಕ್ಷ್ಮಿ ಹೆಬ್ಬಾಳ್ಕರ್

ಕಾಂಗ್ರೆಸ್ ಸರ್ಕಾರದ 'ಮನೆ ಮನೆಗೆ ಕಾಂಗ್ರೆಸ್' ಕಾರ್ಯಕ್ರಮದ ಬಗ್ಗೆ ಮರಾಠಿ ಭಾಷೆಯಲ್ಲಿ ಪುಸ್ತಕ ಮುದ್ರಣ ಮಾಡಿರುವ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಈಗ ವಿವಾದ ಕೇಂದ್ರ ಬಿಂದುವಾಗಿದ್ದಾರೆ. ಮರಾಠಿ ಮತದಾರರನ್ನು ಓಲೈಸಲು ಎಲ್ಲಾ ರೀತಿಯಿಂದಲೂ ಸಜ್ಜಾಗಿರುವಂತೆ ತೋರುತ್ತಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಯಾರು?ಲಕ್ಷ್ಮಿ ಹೆಬ್ಬಾಳ್ಕರ್ ಯಾರು?

ಲಕ್ಷ್ಮಿ ಅವರು ತಮ್ಮ ಸ್ವಂತ ಕಾರ್ಯ ಸಾಧನೆಯ ವಿವರಗಳನ್ನು ಬೇಕಾದ ಭಾಷೆಯಲ್ಲಿ ಹಂಚುವ ಸ್ವಾತಂತ್ರ್ಯ ಹೊಂದಿರುತ್ತಾರೆ. ಆದರೆ, ಸರ್ಕಾರದ ಸಾಧನೆ ಬಗ್ಗೆ ಇರುವ ಪುಸ್ತಕವನ್ನು ಕರ್ನಾಟಕದ ಗಡಿಯಲ್ಲಿ ಬೇರೆ ಭಾಷೆಯಲ್ಲಿ ಮುದ್ರಿಸಿರುವುದೇಕೆ? ಎಂಬ ಪ್ರಶ್ನೆ ಎದ್ದಿದೆ.

ಈ ಹಿಂದೆ ಹೆಬ್ಬಾಳಕರ ಸುಪ್ರೀ ಕೋರ್ಟ್ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಿದ್ರೆ ನಾನೇ ಮೊದಲು ಜೈ ಮಹಾರಾಷ್ಟ್ರ ಎನ್ನುವೆ. ನಾನೇ ಮೊದಲು ಭಗ್ವಾಧ್ವಜ ಹಿಡಿಯುವೆ ಎಂದು ಹೇಳಿದ್ದರು.

ಮರಾಠಿ ಭಾಷೆಯ ಸಾಧನಾ ಪುಸ್ತಕ ಹಂಚಿಕೆ

ಮರಾಠಿ ಭಾಷೆಯ ಸಾಧನಾ ಪುಸ್ತಕ ಹಂಚಿಕೆ

ಕನ್ನಡ ಭಾಷೆಯಲ್ಲಿ ಮುದ್ರಿಸಿ ನೀಡಿದ್ದ ಸಾಧನಾ ಪುಸ್ತಕವನ್ನು ಮರಾಠಿಗೆ ಭಾಷಾಂತರ ಮಾಡಲಾಗಿದೆ. ಮರಾಠಿ ಮತಗಳಿಗಾಗಿ ಹೆಬ್ಬಾಳಕರ ಅವರಿಂದ ಮರಾಠಿ ಭಾಷೆಯಲ್ಲಿ ಪುಸಕ್ತ ಮುದ್ರಣ ಕಾರ್ಯ ಮುಕ್ತಾಯವಾಗಿದ್ದು, ಇನ್ನೇನು ಪ್ರಚಾರ ಕಾರ್ಯ ಆರಂಭವಾಗಬೇಕಿದೆ.

ಈಗಾಗಲೇ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಕನ್ನಡ ಬದಲಾಗಿ ಮರಾಠಿ ಭಾಷೆಯ ಸಾಧನಾ ಪುಸ್ತಕ ಹಂಚಿಕೆಯಾಗಿರುವ ಸುದ್ದಿ ಬಂದಿದೆ.

ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ

ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ

ಪುಸ್ತಕದ ಮೇಲೆ ಕಾಂಗ್ರೆಸ್ ಪ್ರಮುಖ ನಾಯಕರೊಂದಿಗೆ ಕೆಪಿಸಿಸಿ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌ ತಮ್ಮ ಭಾವಚಿತ್ರವನ್ನು ಮುದ್ರಿಸಿಕೊಂಡಿದ್ದಾರೆ. ಜೊತೆಗೆ ಈ ಪುಸ್ತಕದಲ್ಲಿ ರಾಜ್ಯ ಸರ್ಕಾರದ ಎಲ್ಲ ಸಾಧನೆಗಳನ್ನು ಸಂಪೂರ್ಣ ಮರಾಠಿ ಭಾಷೆಯಲ್ಲಿ ಮುದ್ರಿಸಲಾಗಿದೆ.

ನಾನು ಕರ್ನಾಟಕ ವಿರೋಧಿಯಲ್ಲ ಎಂದ ಲಕ್ಷ್ಮಿ

ನಾನು ಕರ್ನಾಟಕ ವಿರೋಧಿಯಲ್ಲ ಎಂದ ಲಕ್ಷ್ಮಿ

ಯಾವ ಕನ್ನಡಿಗರನ್ನೂ ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ. ನನ್ನ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ಬೆಳಗಾವಿಯಲ್ಲಿ ಶೇ. 70 ರಷ್ಟು ಮರಾಠಿಗರಿದ್ದಾರೆ. ನಾನು ಮಹಾರಾಷ್ಟ್ರಕ್ಕೆ ಜೈ ಅಂದಿದ್ದು ನಿಜ. ಆದರೆ, ಕರ್ನಾಟಕ ವಿರೋಧಿಯಲ್ಲ ಎಂದು ಕ್ಷಮೆಯಾಚಿಸಿದ್ದ ಲಕ್ಷ್ಮಿ ಈಗ ಸಾಧನಾ ಪುಸ್ತಕದ ಬಗ್ಗೆ ಪತ್ರಿಕ್ರಿಯೆ ನೀಡಿಲ್ಲ.

ಲಕ್ಷ್ಮೀ ಹೆಬ್ಬಾಳ್ಕರ್ ದುಡ್ಡು ಹಂಚುವ ಆರೋಪ

ಲಕ್ಷ್ಮೀ ಹೆಬ್ಬಾಳ್ಕರ್ ದುಡ್ಡು ಹಂಚುವ ಆರೋಪ

ಗುಂಡ್ಲುಪೇಟೆ ಉಪಚುನಾವಣೆಯ ವೇಳೆ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ದುಡ್ಡು ಹಂಚಿಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.ಲಕ್ಷ್ಮೀ ಹೆಬ್ಬಾಳ್ಕರ್ ದುಡ್ಡು ಹಂಚುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಕಾಂಗ್ರೆಸ್ಸಿಗೆ ತೀವ್ರ ಮುಖಭಂಗವಾಗಿದೆ ಎಂದು ಸಾರ್ವಜನಿಕರು ಹೇಳಿದ್ದರು. ಅದರೆ, ಕಾಂಗ್ರೆಸ್ ಆರೋಪವನ್ನು ಅಲ್ಲಗೆಳೆದಿತ್ತು.

English summary
Chief of Karnataka congress women wing Lakshmi Hebbalkar is in trouble again for wooing Marathi voters in Belagavi. Lakshmi has prepared Congress Government's progress report in Marathi language just to please the voters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X