ಕೆ.ಪಿ.ಎಂ.ಇ ಬಗ್ಗೆ ವೈದ್ಯರ ಸಲಹೆ ಪಡೆದು ನಿರ್ಧಾರ : ಸಿ.ಎಂ

Posted By:
Subscribe to Oneindia Kannada

ಬೆಳಗಾವಿ, ನವೆಂಬರ್ 14 : ವೈದ್ಯಕೀಯ ‌ನಿಯಂತ್ರಣ ವಿಧೇಯಕದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವೈದ್ಯರಿಗೆ ಅಲ್ಪ ಸಮಾಧಾನ ದೊರೆತಿದೆ. ವೈದ್ಯರ ಸಲಹೆ ನಂತರವಷ್ಟೆ ವಿಧೇಯಕ ಮಂಡಿಸುವುದಾಗಿ ಹೇಳಿದ್ದಾರೆ.

ಗಡಸುತನ, ವ್ಯಂಗ್ಯ ಬಿಟ್ಟು ಭಾವುಕರಾದ ರಮೇಶ್ ಕುಮಾರ್!

ಇಂದು (ನವೆಂಬರ್ 14) ಬೆಳಿಗ್ಗೆ ಕೂಡ ಮುಷ್ಕರಾ ನಿರತ ವೈದ್ಯರೊಂದಿಗೆ ಮಾತನಾಡಿದ ಸಿ.ಎಂ ವಿಧೇಯಕವೇನೊ ಒಂದು ದಿನದಲ್ಲಿ ಮುಗಿಯುತ್ತೆ ಎಂದುಕೊಂಡಿದ್ದೀರಾ. ನಾನು ಸಚಿವ ರಮೇಶ್ ಕುಮಾರ್ ಮತ್ತು ವಿಧೇಯಕದ ಜಂಟಿ ಪರಿಶೀಲನಾ ಸಮಿತಿಯೊಂದಿಗೆ ಮಾತನಾಡುತ್ತೇನೆ, ಅದೆಲ್ಲಾ ಆದ ನಂತರ ನಿಮ್ಮನ್ನೂ ಕರೆಯುತ್ತೇನೆ, ನೀವು ಸುಮ್ಮನೆ ಊಹಿಸಿಕೊಂಡು ಪರಿಶೀಲನೆ ಮಾಡುವುದು ಸರಿಯಲ್ಲ ಎಂದು ಬುದ್ಧಿವಾದ ಹೇಳಿದ್ದರು.

CM tells will seek opinion of doctors, CM request doctors to return to duty

ಮಧ್ಯಾಹ್ನದ ವೇಳೆಗೆ ಅದೇ ಮಾತನ್ನು ಪುನರ್ ಉಚ್ಚರಿಸಿರುವ ಸಿದ್ದರಾಮಯ್ಯ ವೈದ್ಯರ ಸಲಹೆ ಪಡಿದಬಳಿಕವಷ್ಟೆ ವಿಧೇಯಕ ಮಂಡನೆ ಮಾಡುತ್ತೇವೆ ಎಂದಿದ್ದಾರೆ. ಜೊತೆಗೆ ವೈದ್ಯರು ಮತ್ತೆ ಕರ್ತವ್ಯಕ್ಕೆ ತೆರಳಲಿ ಎಂದು ಅವರು ಮನವಿ ಮಾಡಿದ್ದಾರೆ.

ವೈದ್ಯರ ಮುಷ್ಕರವೂ ವೈದ್ಯನೇ ಹರಿಃ ಎಂಬ ತಪ್ಪು ಕಲ್ಪನೆಯೂ

ಮುಖ್ಯಮಂತ್ರಿಗಳು ನಿನ್ನೆ (ನವೆಂಬರ್ 14) ರಂದು ಕೂಡ ಮುಷ್ಕರ ನಿರತ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದರು ಆದರೆ ಆ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ವೈದ್ಯರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

ಇದೀಗ ಮುಖ್ಯಮಂತ್ರಿಗಳು ವೈದ್ಯರ ಸಲಹೆ ಪಡೆದ ಬಳಿಕವಷ್ಟೆ ವಿಧೇಯಕ ಮಂಡಿಸುವುದಾಗಿ ಹೇಳಿರುವುದು ವೈದ್ಯರಲ್ಲಿ ಆಶಾಭಾವ ಮೂಡಿಸಿ ಅವರು ಮತ್ತೆ ಕರ್ತವ್ಯಕ್ಕೆ ಮರಳುತ್ತಾರೆಯೆ ಕಾದು ನೋಡಬೇಕು. ಈ ಮಧ್ಯೆ ಸೂಕ್ತ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ತಲುಪಿದ್ದು ವೈದ್ಯರು ಬೇಗ ಕರ್ತವ್ಯಕ್ಕೆ ಮರಳಲಿ ಎಂದು ರಾಜ್ಯದ ಜನ ಆಶಯಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ramesh kumar said if the medical bill is non public friendly i will resign. he condemned eshwarappa words against him and says is not murderer if is please show the evidence.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ