ಬೆಳಗಾವಿ ಜಿಲ್ಲೆ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರ ನೀಡಿದ ಕೊಡುಗೆಗಳು

Posted By:
Subscribe to Oneindia Kannada

ಬೆಳಗಾವಿ, ಡಿಸೆಂಬರ್ 21: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಗೊಂಡಿರುವ 'ನವ ಕರ್ನಾಟಕ ನಿರ್ಮಾಣ' ಯಾತ್ರೆ ಇಂದು (ಗುರುವಾರ) ಬೆಳಗಾವಿ ಜಿಲ್ಲೆಗೆ ತಲುಪಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ಗುರುವಾರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು, ಬಳಿಕ ರಾಯಬಾಗ ಸೇರಿದಂತೆ ವಿಜಯಪು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಕೈಗಾರಿಕಾ ಪ್ರಗತಿಯಲ್ಲಿ ಕರ್ನಾಟಕವೇ ನಂ.1: ಸಿದ್ದರಾಮಯ್ಯ

ರಾಜ್ಯ ಸರ್ಕಾರದ ಸಹಕಾರದಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ 11,365 ಕೃಷಿ ಹೊಂಡ ಮತ್ತು 99 ಪಾಲಿಹೌಸ್ ನಿರ್ಮಾಣವಾಗಿವೆ. ಇದರಿಂದ ಅನ್ನದಾತರಿಗೆ ಹೆಚ್ಚಿನ ಅನುಕೂಲವಾಗಿದ್ದು, ಉತ್ಸಾಹದಲ್ಲಿ ತಮ್ಮನ್ನು ಕೃಷಿಗೆ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಇಳುವರಿಯೂ ಹೆಚ್ಚಿದೆ ಎಂದು ಸಿದ್ದರಾಮಯ್ಯ ಅವರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆ ಅಭಿವೃದ್ಧಿಗೆ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಬಾಗಲಕೋಟೆ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು, ಬೆಳಗಾವಿ ಜಿಲ್ಲೆಗಾಗಿ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ. ಅಭಿವೃದ್ಧಿಗೆ ಸರ್ಕಾರದ ಕೊಡುಗೆಗಳ ಪಟ್ಟಿ ಇಂತಿದೆ.

ಜಿಲ್ಲೆಯ ಮೂರು ಹೊಸ ತಾಲೂಕುಗಳ ಘೋಷಣೆ

ಜಿಲ್ಲೆಯ ಮೂರು ಹೊಸ ತಾಲೂಕುಗಳ ಘೋಷಣೆ

1. ಜನರ ಬಹುದಿನಗಳ ಬೇಡಿಕೆಯಂತೆ "ಚೆನ್ನಮ್ಮನ ಕಿತ್ತೂರು" ತಾಲೂಕು ರಚನೆ- ಮಿನಿವಿಧಾನ ಸೌಧ ನಿರ್ಮಾಣಕ್ಕೆ 10 ಕೋಟಿ ಅನುದಾನ.

2. ಮೂರು ಹೊಸ ತಾಲೂಕುಗಳ ಘೋಷಣೆ - ಎ) ಮೂಡಲಗಿ ಬಿ) ಕಾಗವಾಡ ಸಿ) ನಿಪ್ಪಾಣಿ

3. ರೈತರ ಒಂದು ಸಾವಿರ ಕೋಟಿ ರೂಪಾಯಿ ಸಾಲಮನ್ನಾ. ಬೆಳಗಾವಿ ಜಿಲ್ಲೆಯು ರಾಜ್ಯದ ಪ್ರಮುಖ ಮತ್ತು ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಮಲೆನಾಡು, ಅರೆ 4. ಮಲೆನಾಡು ಮತ್ತು ಒಣ ಪ್ರದೇಶಗಳನ್ನು ಹೊಂದಿದ್ದು, ಒಟ್ಟು 10 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹೊಂದಿರುತ್ತದೆ. ಪ್ರಸ್ತುತ ಸರ್ಕಾರವು ಬೆಳಗಾವಿ ಜಿಲ್ಲೆಯ ಒಟ್ಟು 3,27,526 ರೈತರ ಒಟ್ಟಾರೆ 1,025 ಕೋಟಿ ರೂ. ಸಾಲ ಮನ್ನಾ ಮಾಡಿರುತ್ತದೆ.

 865 ಕೋಟಿ ರೂ. ಕೃಷಿ ಸಾಲ ವಿತರಣೆ

865 ಕೋಟಿ ರೂ. ಕೃಷಿ ಸಾಲ ವಿತರಣೆ

4. ಬೆಳಗಾವಿ ಜಿಲ್ಲೆಯ ರೈತರಿಗೆ 865 ಕೋಟಿ ಕೃಷಿ ಸಾಲ. ಬೆಳಗಾವಿ ಜಿಲ್ಲೆಯಲ್ಲಿ 2017 ರ ಅಕ್ಟೋಬರ್ ಅಂತ್ಯಕ್ಕೆ 2,61,342 ರೈತರಿಗೆ 865 ಕೋಟಿ ರೂ. ಕೃಷಿ ಸಾಲ ವಿತರಣೆ ಮಾಡಲಾಗಿರುತ್ತದೆ. ಇದುವರೆಗೆ ಜಿಲ್ಲೆಯ ಒಟ್ಟು 3.35 ಲಕ್ಷ ರೈತರಿಗೆ ರೂಪೆ ಕಾರ್ಡ್ ವಿತರಣೆ ಮಾಡಲಾಗಿದೆ.

5. ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಕುಟುಂಬಗಳಿಗೆ "ಅನ್ನಭಾಗ್ಯ" ಯೋಜನೆಯ ಲಾಭ. ಸುಮಾರು 9 ಲಕ್ಷ ಕುಟುಂಬಗಳಿಗೆ ಅನ್ನಭಾಗ್ಯ.

6. ವಸತಿ ಯೋಜನೆ - ಬಸವ ವಸತಿ ಯೋಜನೆ 2013- 14 ನೇ ಸಾಲಿನಲ್ಲಿ 7,985 ಮನೆ ನಿರ್ಮಾಣ. 2015-16ನೇ ಸಾಲಿನಲ್ಲಿ 10,525 ಮನೆ ನಿರ್ಮಾಣ.

248 ಕೋಟಿ ಮೊತ್ತದ ಯೋಜನಾ ವರದಿಗೆ ಸಂಪುಟ ಸಮ್ಮತಿ

248 ಕೋಟಿ ಮೊತ್ತದ ಯೋಜನಾ ವರದಿಗೆ ಸಂಪುಟ ಸಮ್ಮತಿ

7. ಕಿತ್ತೂರು ಮತ್ತು ಬೈಲುಹೊಂಗಲ ಭಾಗದ 64 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ 248 ಕೋಟಿ ಮೊತ್ತದ ಯೋಜನಾ ವರದಿಗೆ ಸಂಪುಟದ ಸಮ್ಮತಿ.

8. ಗೋಕಾಕ ಪಟ್ಟಣದಲ್ಲಿ ಅಂದಾಜು 18.75 ಕೋಟಿ ರೂ.ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ.

9. ಬೆಳಗಾವಿ ನಗರದ ಹೈಟೆಕ್ ಬಸ್‍ ನಿಲ್ದಾಣ ನಿರ್ಮಾಣಕ್ಕೆ 30 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ನೂತನ ಬಸ್ ನಿಲ್ದಾಣವು 30 ಫ್ಲ್ಯಾಟ್ ಫಾರ್ಮ್‍ಗಳು, 10. ಉಪಾಹಾರ ಗೃಹ, ಕುಡಿಯುವ ನೀರಿನ ಸೌಲಭ್ಯ, ನವೀನ ಮಾದರಿಯ ಶೌಚಾಲಯಗಳು, ವಿಶ್ರಾಂತಿ ಕೊಠಡಿಗಳು, ವಾಣಿಜ್ಯ ಮಳಿಗೆಗಳನ್ನು ಹೊಂದಲಿದೆ.

ರಾಣಿಚೆನ್ನಮ್ಮ ಅಧ್ಯಯನ ಪೀಠ” ಸ್ಥಾಪನೆ

ರಾಣಿಚೆನ್ನಮ್ಮ ಅಧ್ಯಯನ ಪೀಠ” ಸ್ಥಾಪನೆ

10. ಬೆಳಗಾವಿಯ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ "ರಾಣಿ ಚೆನ್ನಮ್ಮ ಅಧ್ಯಯನ ಪೀಠ" ಹಾಗೂ "ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅಧ್ಯಯನ ಪೀಠ" ಸ್ಥಾಪಿಸಲಾಗಿದೆ. ವೀರ ರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತಾದ ಸಮಗ್ರ ಶೋಧ, ದಾಖಲೀಕರಣ, ಸಾಂಸ್ಕೃತಿಕ ಅಧ್ಯಯನ, ಜಾನಪದೀಯ ಅಧ್ಯಯನ, ಆಡಳಿತಾತ್ಮಕ ಅಧ್ಯಯನ, ಜನಾಂಗೀಯ ಅಧ್ಯಯನ ಹಾಗೂ ಸಂಶೋಧನೆಗಳನ್ನು ತಲಸ್ಪರ್ಶಿಯಾಗಿ ಕೈಗೊಳ್ಳಲು ಈ ಅಧ್ಯಯನ ಪೀಠಗಳು ಸಹಕಾರಿಯಾಗಲಿವೆ. ರಾಣಿ ಚೆನ್ನಮ್ಮ ಅಧ್ಯಯನ ಪೀಠಕ್ಕಾಗಿ 2 ಕೋಟಿ ರೂಪಾಯಿ ನಿಧಿಯನ್ನು ಸರ್ಕಾರ ಒದಗಿಸಲಿದೆ.

ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ 137 ಕೋಟಿ

ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ 137 ಕೋಟಿ

11. ಕರ್ನಾಟಕದ ಸುಪ್ರಸಿದ್ಧ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ತಯಾರಿಸಲಾಗಿರುವ ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ ಅನುಷ್ಠಾನಕ್ಕೆ ಪ್ರಸ್ತುತ ಸರ್ಕಾರವು ಒಟ್ಟು 137 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿದ್ದು ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ವಾರ್ಷಿಕ ಅಂದಾಜು ಒಂದು ಕೋಟಿ ಜನರು ಯಲ್ಲಮ್ಮ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಭಕ್ತಾಧಿಗಳ ಅನುಕೂಲಕ್ಕಾಗಿ 137 ಕೋಟಿ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು, ಸಮುದಾಯ ಶವಚಾಲಯ, ಪಾರ್ಕಿಂಗ್, ರಸ್ತೆ ಹಾಗೂ ಅನ್ನ ದಾಸೊಹ ಭವನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State Tour by CM Siddaramaiah has been a huge success with a host of development projects launched across the districts of Karnataka. Continuing the tour, CM inaugurated and laid the foundation stone for various development projects in Belagavi today.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ