• search

ಬೆಳಗಾವಿ ಒಡೆದು ಜಾರಕಿಹೊಳಿ ಸಹೋದರರ ಕಟ್ಟಿ ಹಾಕ್ತಾರಾ ಸಿಎಂ?

Subscribe to Oneindia Kannada
For belagavi Updates
Allow Notification
For Daily Alerts
Keep youself updated with latest
belagavi News
    ಎಚ್ ಡಿ ಕೆ ಜಿಲ್ಲಾ ವಿಭಜನೆಗೆ ಇಂದು ಬೆಳಗಾವಿಗೆ ಭೇಟಿ | ಜಾರಕಿಹೊಳಿ ಸಹೋದರರ ಕಟ್ಟಿ ಹಾಕ್ತಾರಾ ಸಿಎಂ?

    ಬೆಳಗಾವಿ, ಸೆಪ್ಟೆಂಬರ್ 15: ಇಂದು ಸಿಎಂ ಕುಮಾರಸ್ವಾಮಿ ಅವರು ಬೆಳಗಾವಿಗೆ ಭೇಟಿ ನೀಡುತ್ತಿದ್ದಾರೆ. ಬೆಳಗಾವಿಯ ಜಾರಕಿಹೊಳಿ ಬ್ರದರ್ಸ್‌ ರಾಜಕೀಯ ರಾಜ್ಯ ರಾಜಕಾರಣದ ಮೇಲೆ ಪ್ರಭಾವ ಬೀರುವ ಹೊತ್ತಿನಲ್ಲಿ ಸಿಎಂ ಅವರ ಈ ಭೇಟಿ ಅತ್ಯಂತ ಮಹತ್ವ ಪಡೆದುಕೊಂಡಿದೆ.

    ಬೆಳಗಾವಿಗೆ ಭೇಟಿ ನೀಡುತ್ತಿರುವ ಕುಮಾರಸ್ವಾಮಿ ಅವರು ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ತಂತ್ರವೊಂದನ್ನು ಪ್ರಯೋಗಿಸಲಿದ್ದಾರೆ ಎಂಬ ಸುದ್ದಿ ಇದೆ.

    ನನ್ನ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಪಟ್ಟಿಯೇ ಬೇರೆ: ಎಚ್ಡಿಕೆ ಹೊಸ ಬಾಂಬ್

    ಬೆಳಗಾವಿ ಜನರ ಬಹುದಿನಗಳ ಬೇಡಿಕೆಯಾದ ಜಿಲ್ಲೆ ವಿಂಗಡಣೆ ಮಾಡಿ, ಜಾರಕಿಹೊಳಿ ಸಹೋದರರ ಪ್ರಭಾವ ತಗ್ಗಿಸುವ ಕಾರ್ಯವನ್ನು ಕುಮಾರಸ್ವಾಮಿ ಮಾಡಲಿದ್ದಾರೆ ಎನ್ನಲಾಗಿದೆ. ಬೆಳಗಾವಿಯನ್ನು ಗೋಖಾಕ್, ಚಿಕ್ಕೋಡಿ ಹಾಗೂ ಬೆಳಗಾವಿ ಜಿಲ್ಲೆಗಳಾಗಿ ವಿಭಜಿಸುವ ಸಾಧ್ಯತೆ ಇದೆ.

    ಗೋಖಾಕ್ ಮತ್ತು ಚಿಕ್ಕೋಡಿ ಹೊಸ ಜಿಲ್ಲೆಗಳು?

    ಗೋಖಾಕ್ ಮತ್ತು ಚಿಕ್ಕೋಡಿ ಹೊಸ ಜಿಲ್ಲೆಗಳು?

    ಬೆಂಗಳೂರು ನಗರದ ನಂತರ ಅತಿ ಹೆಚ್ಚು ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಲು ಇಂದು ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಿದ್ದಾರೆ ಸಿಎಂ. ಗೋಕಾಕ್ ಮತ್ತು ಚಿಕ್ಕೋಡಿಯನ್ನು ಹೊಸ ಜಿಲ್ಲೆಗಳಾಗಿ ಘೋಷಿಸುವ ಸಾಧ್ಯತೆ ಇದೆ.

    ಧಂ ಇದ್ರೆ ಮುಟ್ ನೋಡಿ, ಬಿಜೆಪಿ ವಿರುದ್ದ ಕೇಸರಿ ಬೆಲ್ಟ್ ನಲ್ಲಿ ಸಚಿವ ಸಿ ಎಸ್ ಪುಟ್ಟರಾಜು ಓಪನ್ ಚಾಲೆಂಜ್

    ಜಾರಕಿಹೊಳಿ ಸಹೋದರರ ನಿಯಂತ್ರಿಸಲು ಪ್ಲಾನ್

    ಜಾರಕಿಹೊಳಿ ಸಹೋದರರ ನಿಯಂತ್ರಿಸಲು ಪ್ಲಾನ್

    ಆಡಳಿತ ದೃಷ್ಠಿಯಿಂದ ಜಿಲ್ಲೆಗಳ ವಿಂಗಡಣೆ ಸಾಮಾನ್ಯ ಜನರಿಗೆ ಉಪಯುಕ್ತವಾಗಲಿದೆ. ಜೊತೆಗೆ ರಾಜ್ಯ ರಾಜಕಾರಣದ ಮೇಲೆ ಭಾರಿ ಪ್ರಭಾವ ಬೀರುತ್ತಿರುವ ಜಾರಕಿಹೊಳಿ ಸಹೋದರರನ್ನು ನಿಯಂತ್ರಿಸುವುದು ಸಹ ಇದರಿಂದ ಸಾಧ್ಯವಾಗುತ್ತದೆ ಎಂಬುದು ಸಿಎಂ ನಂಬಿಕೆ.

    ಮಹದಾಯಿ ಕುರಿತು ರಾಜ್ಯದ ನಿಲುವು: ಬೆಳಗಾವಿಯಲ್ಲಿ ಪ್ರಕಟ ಸಾಧ್ಯತೆ

    ಕನ್ನಡ ರಾಜ್ಯೋತ್ಸವದಂದು ಹೊಸ ಜಿಲ್ಲೆ ಘೋಷಣೆ

    ಕನ್ನಡ ರಾಜ್ಯೋತ್ಸವದಂದು ಹೊಸ ಜಿಲ್ಲೆ ಘೋಷಣೆ

    ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ಹೊಸ ಜಿಲ್ಲೆಗಳು ಅಧಿಕೃತಾಗಿ ಜಾರಿಗೆ ಬರಲಿವೆ ಎಂಬ ಘೋಷಣೆ ಇಂದೇ ಹೊರಡಿಸುವ ಸಾಧ್ಯತೆ ಇದೆ. ಕುಮಾರಸ್ವಾಮಿ ಅವರು ಈ ಮುಂಚೆ ಸಿಎಂ ಆಗಿದ್ದಾಗ ರಾಮನಗರ, ಚಿಕ್ಕಬಳ್ಳಾಪುರಗಳನ್ನು ಜಿಲ್ಲೆಗಳನ್ನಾಗಿ ಮಾಡಿ ಆಡಳಿತ ಸುಗಮಗೊಳಿಸುವ ಜೊತೆಗೆ ರಾಜಕೀಯವಾಗಿಯೂ ಲಾಭ ಪಡೆದಿದ್ದರು.

    ಯಾವ ತಾಲ್ಲೂಕು ಯಾವ ಜಿಲ್ಲೆಗೆ?

    ಯಾವ ತಾಲ್ಲೂಕು ಯಾವ ಜಿಲ್ಲೆಗೆ?

    ಬೆಳಗಾವಿ ವಿಭಜನೆ ಆದಲ್ಲಿ ಗೋಖಾಕ್ ಜಿಲ್ಲೆಗೆ ಗೋಕಾಕ್, ರಾಮದುರ್ಗ, ಅರಭಾವಿ, ಯಮಕನಮರಡಿ, ಸವದತ್ತಿ, ಬೈಲಹೊಂಗಲ ತಾಲ್ಲೂಕುಗಳು ಸೇರಲಿವೆ. ಚಿಕ್ಕೋಡಿ ಜಿಲ್ಲೆಗೆ ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ, ಹುಕ್ಕೇರಿ, ಕುಡಚಿ ತಾಲ್ಲೂಕುಗಳು ಸೇರಲಿವೆ. ಬೆಳಗಾವಿ ಜಿಲ್ಲೆಗೆ ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಖಾನಾಪುರ, ಕಿತ್ತೂರು ತಾಲ್ಲೂಕುಗಳು ಸೇರಲಿವೆ.

    ಇನ್ನಷ್ಟು ಬೆಳಗಾವಿ ಸುದ್ದಿಗಳುView All

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    CM Kumaraswamy today visiting Belgavi district and today may take the decision of creating two new districts by dividing Belgavi. Gokhak and Chikkodi may be the two new districts.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more