ಹಂದಿಗುಂದಿ ಗ್ರಾಮದ ಪ್ರಾಮಾಣಿಕ ಅಧಿಕಾರಿ ಕಲ್ಲಪ್ಪ

Posted By:
Subscribe to Oneindia Kannada

ಬೆಳಗಾವಿ, ಜುಲೈ 06: ಚಿಕ್ಕಮಗಳೂರಿನ ಡಿವೈಎಸ್ಪಿಯಾಗಿದ್ದ ಕಲ್ಲಪ್ಪ ಹಂಡಿಭಾಗ್ ಅವರ ಮೇಲೆ ವೃಥಾರೋಪ ಬಂದಿರುವುದಕ್ಕೆ ಕಲ್ಲಪ್ಪ ಅವರ ಕುಟುಂಬಸ್ಥರು ರೊಚ್ಚಿಗೆದ್ದಿದ್ದಾರೆ. ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಮಾಧ್ಯಮಗಳ ವಿರುದ್ಧ ತಿರುಗಿಬಿದ್ದಿರುವ ಕಲ್ಲಪ್ಪ ಅವರ ಕಡೆಯವರು ಜಿಲ್ಲಾಡಳಿತಕ್ಕೆ ತಿಳಿಸದೆ ಅತುರವಾಗಿ ಅಂತ್ಯಕ್ರಿಯೆ ಮುಗಿಸಿದ್ದಾರೆ. ಕಲ್ಲಪ್ಪ ಅವರ ಬಗ್ಗೆ ಪರಿಚಯಾತ್ಮಕ ವರದಿ ಇಲ್ಲಿದೆ.

ಅತ್ತ ಕಲ್ಲಪ್ಪ ಅವರ ಮೃತದೇಹ ಚಿತೆಗೇರಿ ಭಸ್ಮವಾದರೂ ಅವರ ಮೇಲಿನ ಅಪವಾದ ಇನ್ನೂ ಹಾಗೆ ಉಳಿದಿದೆ. ಚಿಕ್ಕಮಗಳೂರಿನ ಡಿವೈಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಲ್ಲಪ್ಪ ಅವರ ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದರು.[ಕಲ್ಲಪ್ಪ ಅವರಿಗೆ ಇಲಾಖೆ ಕಿರುಕುಳ ನೀಡಿಲ್ಲ: ಎಸ್ಪಿ ಸಂತೋಷ್]

ನಂತರ ಅವರ ಪತ್ನಿ ವಿದ್ಯಾ ಅವರ ಅಜ್ಜಿ ಊರಾದ ಸವದತ್ತಿಯ ಮುರಗೋಡದಲ್ಲಿ ಪ್ರತ್ಯಕ್ಷರಾಗಿದ್ದರು. ಮಂಗಳವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಕಲ್ಲಪ್ಪ ಅವರನ್ನು ಉಳಿಸಿಕೊಳ್ಳಲು ಕುಟುಂಬಸ್ಥರಿಗೆ ಆಗಲಿಲ್ಲ. [ಕಿಡ್ನಾಪ್ ಆಗಿದ್ದ ತೇಜಸ್ ಹೇಳಿದ ಕಥೆ]

ಬೆಳಗಾವಿ ಕೆಎಲ್ ಇ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಗ್ರಾಮಸ್ಥರು ತಮ್ಮ ಊರಿನ ಹೆಮ್ಮೆಯ ಪುತ್ರ ಕಲ್ಲಪ್ಪನ ಮೇಲೆ ಬಂದಿರುವ ಆರೋಪಗಳನ್ನು ಕೇಳಿ ಆಕ್ರೋಶಗೊಂಡಿದ್ದಾರೆ. [ಕಲ್ಲಪ್ಪ ಅವರ ತೇಜೋವಧೆ ಮಾಡಬೇಡಿ : ಪ್ರತಾಪ್ ಸಿಂಹ]

Chikkamagaluru DySP Kallappa Handibag Life recap

ಕಲ್ಲಪ್ಪ ಹಿನ್ನಲೆ: ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಹಂದಿಗುಂದಿ ಗ್ರಾಮ (ಪಿನ್ ಕೋಡ್ 591 235) ದ ಬಸಪ್ಪ ಅವರ ಬಡ ಕುಟುಂಬದಲ್ಲಿ 01/06/81 ರಂದು ಜನಿಸಿದರು. ಸ್ವಂತ ಸೂರಿಲ್ಲದೆ ಕಲ್ಲಪ್ಪ ಅವರ ತಂದೆ-ತಾಯಿ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಮಕ್ಕಳಿಗೆ ಟ್ಯೂಷನ್ ಮಾಡುತ್ತಾ ಮಗನನ್ನು ಬೆಳೆಸಿದ್ದರು.[ತೇಜಸ್ ಗೌಡ ಅಪಹರಣ, ಪ್ರಮುಖ ಆರೋಪಿ ಬಂಧನ]

ಕಲ್ಲಪ್ಪ ಅವರು ಶಾಲಾ, ಕಾಲೇಜು ದಿನಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಪದವಿ ಪಡೆದ ಬಳಿಕ 2006ರಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದರು.

Kallappa Handibag

2008 ರಲ್ಲಿ ಕೆಎಎಸ್ ಪಾಸ್ ಆಗಿ ವಿಧಾನಸೌಧದಲ್ಲಿ ಸೆಕ್ಷನ್ ಆಫೀಸರ್, ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯಲ್ಲಿ ಶಾಖಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ 2010ರಲ್ಲಿ 1096 ಅಂಕಗಳೊಂದಿಗೆ ತೇರ್ಗಡೆ ಹೊಂದಿ ಡಿವೈಎಸ್ಪಿ ಹುದ್ದೆ ಪಡೆದಿದ್ದರು.


ಮೊದಲಿಗೆ ಧಾರವಾಡ ಗ್ರಾಮೀಣ ವಿಭಾಗದ ಡಿವೈಎಸ್ಪಿಯಾಗಿ ಎರಡು ವರ್ಷ ಕಾರ್ಯ ನಿರ್ವಹಿಸಿದ್ದರು. ನಂತರ 2014ರಲ್ಲಿ ಚಿಕ್ಕಮಗಳೂರಿಗೆ ವರ್ಗಾವಣೆಗೊಂಡಿದ್ದರು. ಅವರ ವೃತ್ತಿ ಬದುಕಿನಲ್ಲಿ ಎಲ್ಲೂ ಕಪ್ಪುಚುಕ್ಕೆ ಕಂಡು ಬಂದಿರಲಿಲ್ಲ. ಸಂಸದ ಪ್ರತಾಪ್ ಸಿಂಹ ಅವರು ಕೂಡಾ ಕಲ್ಲಪ್ಪ ಅವರ ಚಾರಿತ್ರ್ಯ ವಧೆ ಮಾಡಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chikkamagaluru deputy superintendent of police (DySP) Kallappa Handibag a talented and eminent officer committed suicide at Muragodu village of Belagavi on Tuesday, July 5. Here is recap of his life.
Please Wait while comments are loading...