ಬೆಳಗಾವಿ : ಪರಿವರ್ತನಾ ಯಾತ್ರೆಗೆ ಬಂದ್ರು ಛತ್ತೀಸ್‌ಗಢ ಸಿಎಂ

Posted By: Gururaj
Subscribe to Oneindia Kannada

ಬೆಳಗಾವಿ, ನವೆಂಬರ್ 20 : 'ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್ 1 ಸ್ಥಾನದಲ್ಲಿದೆ. 2018ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೆ ಕಮಲ ಅರಳಲಿದೆ' ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದರು.

ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ

ಬೆಳಗಾವಿಯ ಸೋಮವಾರ ಕರ್ನಾಟಕ ಬಿಜೆಪಿಯ 'ನವ ಕರ್ನಾಟಕ ಪರಿವರ್ತನಾ ಯಾತ್ರೆ' ನಡೆಯುತ್ತಿದೆ. ಹಿರೇಬಾಗೇವಾಡಿಯಲ್ಲಿ ನಡೆದ ಪರಿವರ್ತನಾ ಯಾತ್ರೆ ಉದ್ದೇಶಿಸಿ ರಮಣ್ ಸಿಂಗ್ ಮಾತನಾಡಿದರು.

Chhattisgarh CM address parivarthana yatra in Belagavi

'ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವ ವಿಶ್ವಾಸವಿದೆ' ಎಂದು ರಮಣ್ ಸಿಂಗ್ ಹೇಳಿದರು.

'ಕರ್ನಾಟಕದ ನಾಲ್ಕು ಕಡೆ ಕಗ್ಗತ್ತಲಿದೆ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ 1 ಸ್ಥಾನದಲ್ಲಿದೆ. 2018ರ ಚುನಾವಣೆಯಲ್ಲಿ ಮತ್ತೆ ಕಮಲ ಅರಳಲಿದೆ. ಈ ಮೂಲಕ ದೇಶದ 20ಕ್ಕೂ ಅಧಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ' ಎಂದರು.

ಕಾಂಗ್ರೆಸ್ ಏನೇ ಭಾಗ್ಯ ನೀಡಿದರೂ ಗೆಲ್ಲೋದು ಬಿಜೆಪಿಯೇ: ಸಂಜಯ್ ಪಾಟೀಲ್

'ರಾಜ್ಯ ಕಾಯುವವರೆ ಲೂಟಿ ಕೋರರಾಗಿದ್ದಾರೆ. ದೇಶದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಉತ್ತಮ ಕೆಲಸ ಆಗುತ್ತಿದೆ. ನರೇಂದ್ರ ಮೋದಿಯವರು ಇಡೀ ಪ್ರಪಂಚಕ್ಕೆ ಭಾರತ ಶಕ್ತಿ ಶಾಲಿ ದೇಶ ಎನ್ನುವುದನ್ನು ತೋರಿಸಿಕೊಟ್ಡಿದ್ದಾರೆ' ಎಂದು ಹೇಳಿದರು.

'ಕರ್ನಾಟಕದಲ್ಲಿ ಉತ್ತಮ ಆಡಳಿತಕ್ಕಾಗಿ ಬಿಜೆಪಿ ಸರ್ಕಾರವನ್ನು ಅಧಿಕಾರ ತನ್ನಿ. ಕರ್ನಾಟಕದ ಬಿಜೆಪಿ ವಿಜಯಯಾತ್ರೆ ಛತ್ತೀಸ್‌ಗಢದಲ್ಲೂ ಮುಂದೊರೆಯಲಿದೆ. ಅಲ್ಲಿಯೂ 4ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ' ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chhattisgarh Chief Minister Dr.Raman Singh addressed Karnataka BJP Nava Karnataka Parivarthana Yatra in Hirebagewadi, Belagavi on November 20, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ