ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು

|
Google Oneindia Kannada News

ಬೆಳಗಾವಿ, ಜೂನ್ 14 : ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ. ಮಹಾಂತೇಶ ಶಿವಾನಂದ ಕೌಜಲಗಿ ಅವರು ಬಿಜೆಪಿಯ ಹನುಮಂತ ನಿರಾಣಿ ಅವರ ವಿರುದ್ಧ ಸೋಲು ಅನುಭವಿಸಿದ್ದಾರೆ.

ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ಸೋಮವಾರ ವಿಧಾನಪರಿಷತ್ ಚುನಾವಣೆಯ ಮತ ಎಣಿಕೆ ನಡೆಯಿತು. 20,087 ಮತಗಳ ಅಂತರದಿಂದ ಹನುಮಂತ ನಿರಾಣಿ ಅವರು ಗೆಲುವು ಸಾಧಿಸಿದರು. [ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು]

hanumantha nirani

ಕ್ಷೇತ್ರದಲ್ಲಿ ಒಟ್ಟು 85,744 ಮತಗಳು ಚಲಾವಣೆಗೊಂಡಿದ್ದವು. ಇವುಗಳಲ್ಲಿ 10,454 ಮತಗಳು ತಿರಸ್ಕೃತಗೊಂಡಿವೆ.
ಹನುಮಂತ ನಿರಾಣಿ ಅವರು ಮೊದಲ ಪ್ರಾಶಸ್ತ್ಯದ ಮತಗಳಿಂದಲೇ ಜಯಗಳಿಸಿದ್ದಾರೆ. [ಬಸವರಾಜ ಹೊರಟ್ಟಿಗೆ ದಾಖಲೆ ಗೆಲುವು]

ಪಡೆದ ಮತಗಳು

* ಹನುಮಂತ ನಿರಾಣಿ (ಬಿಜೆಪಿ) - 43,065
* ಮಹಾಂತೇಶ ಕೌಜಲಗಿ (ಕಾಂಗ್ರೆಸ್) - 23,518

ನಾಲ್ಕು ಕ್ಷೇತ್ರಗಳ ವಿಧಾನ ಪರಿಷತ್ ಫಲಿತಾಂಶ

* ದಕ್ಷಿಣ ಪದವೀಧರರ ಕ್ಷೇತ್ರ ಕೆ.ಟಿ.ಶ್ರೀಕಂಠೇಗೌಡ ಗೆಲುವು (ಜೆಡಿಎಸ್)
* ವಾಯುವ್ಯ ಪದವೀಧರ ಮತ ಕ್ಷೇತ್ರದ ಹನುಮಂತ ನಿರಾಣಿ ಗೆಲುವು (ಬಿಜೆಪಿ)
* ವಾಯುವ್ಯ ಶಿಕ್ಷಕರ ಕ್ಷೇತ್ರ ಅರುಣ ಶಹಾಪುರ ಗೆಲುವು (ಬಿಜೆಪಿ)
* ಪಶ್ಚಿಮ ಶಿಕ್ಷಕರ ಕ್ಷೇತ್ರ ಬಸವರಾಜ ಹೊರಟ್ಟಿ ಗೆಲುವು (ಜೆಡಿಎಸ್)

English summary
Victory for BJP in North West Graduate constituency. BJP candidate Hanumantha Nirani elected for Legislative Council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X