ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಅನಂತಕುಮಾರ್ ಹೆಗಡೆ

Posted By: ನಮ್ಮ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ನವೆಂಬರ್ 04: 'ಮೈಸೂರ ಹುಲಿ ಟಿಪ್ಪು ಸುಲ್ತಾನ್ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ' ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು. ಆದರೆ ಬೆಳಗಾವಿ ಜಿಲ್ಲಾಡಳಿತ ಅನಂತಕುಮಾರ್ ಹೆಗಡೆ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಿದೆ.

ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಪರಿಚಯ

ಸಚಿವ ಹೆಗಡೆ ಅವರು ಮಾಡಿಕೊಂಡ ಮನವಿ ತೀವ್ರ ವಿವಾದಕ್ಕೆ ಗ್ರಾಸವಾಗಿತ್ತು. ಆದರೆ, ಬೆಳಗಾವಿ ಜಿಲ್ಲಾಡಳಿತ ಮಾತ್ರ ಶಿಷ್ಟಾಚಾರದ ಪ್ರಕಾರ ಟಿಪ್ಪು ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಅನಂತಕುಮಾರ ಹೆಗಡೆ ಅವರನ್ನು ವಿಶೇಷ ಆಮಂತ್ರಿತರೆಂದು ಅವರ ಹೆಸರನ್ನು ಮುದ್ರಿಸಿದೆ.

BJP MP Ananthkumar Hegde names appears on Tipu Jayanti Celebration Invitation

ರಾಜ್ಯಾದ್ಯಂತ ನ.10 ಕ್ಕೆ ಟಿಪ್ಪು ಜಯಂತಿ ಆಚರಣೆ ವಿಚಾರ‌ವಾಗಿ ಟಿಪ್ಪು ಜಯಂತಿ ಆಚರಣೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಬೇಡಿ ಎಂದು ಮನವಿ ಮಾಡಿದ್ದ ಕೇಂದ್ರ ಸಚಿವ ಅನಂತಕುಮಾತ ಹೆಗಡೆ, ಸಂಸದ ಸುರೇಶ ಅಂಗಡಿ ಅವರ ಮನವಿಯನ್ನು ಬೆಳಗಾವಿ ಜಿಲ್ಲಾಡಳಿತ ಪರಿಗಣಿಸಿದೆ, ಟಿಪ್ಪು ಜಯಂತಿಗೆ ಆಹ್ವಾನಿಸಿದೆ.

ಇನ್ನು ಆಮಂತ್ರಣದಲ್ಲಿ ವಿಶೇಷ ಆಮಂತ್ರಿತರು ಎಂದು ಅನಂತಕುಮಾರ ಹೆಗಡೆ ಹೆಸರು ಹಾಗೂ ಗೌರವಾನ್ವಿತ ಅತಿಥಿಗಳಾಗಿ ಸಂಸದ ಸುರೇಶ ಅಂಗಡಿ ಅವರಿಗೆ ಆಮಂತ್ರಣ ನೀಡಿದೆ.

ಬೆಳಗಾವಿ ಜಿಲ್ಲಾಡಳಿತದ ವತಿಯಿಂದ ಆಯೋಜನೆ ಮಾಡಿದ ಟಿಪ್ಪು ಜಯಂತಿ ಕಾರ್ಯಕ್ರಮವು ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರಲ್ಲಿ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP MP Ananthkumar Hegde names appears on Tipu Jayanti Celebration Invitation. BJP MP Ananthkumar Hegde has asked the state's chief secretary to not invite him to any of its event. But, Belagavi district administration published a invitation card with his name on it.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ