ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರು ಪೋಲು ಮಾಡಿದ ಹಣವೆಷ್ಟು?

By ಬೆಳಗಾವಿ ಪ್ರತಿನಿಧಿ
|
Google Oneindia Kannada News

Recommended Video

ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರು ಖರ್ಚು ಮಾಡಿರುವ ಹಣ ಎಷ್ಟು ಗೊತ್ತು? | Oneindia Kannada

ಬೆಳಗಾವಿ, ಸೆಪ್ಟೆಂಬರ್. 11: ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರು 24 ಕೋಟಿ ಹಣ ಪೋಲು ಮಾಡಿದ್ದಾರೆ ಎಂದು ಬೆಳಗಾವಿಯಲ್ಲಿ ಆರ್.ಟಿ‌.ಐ ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಐದು ವರ್ಷದ ಅವಧಿಯಲ್ಲಿ ಸಚಿವರು ಪ್ರಯಾಣ ಭತ್ಯೆ ರೂಪದಲ್ಲಿ 24 ಕೋಟಿ 28 ಲಕ್ಷ 864 ರುಪಾಯಿ ಖರ್ಚು ಮಾಡಿದ್ದಾರೆ.

3 ಕೋಟಿ ಹಣ ಕಳ್ಳತನ : ಸಿಸಿಬಿಯಿಂದ ಕಾಂಗ್ರೆಸ್ ನಾಯಕಿ ವಿಚಾರಣೆ3 ಕೋಟಿ ಹಣ ಕಳ್ಳತನ : ಸಿಸಿಬಿಯಿಂದ ಕಾಂಗ್ರೆಸ್ ನಾಯಕಿ ವಿಚಾರಣೆ

ಆರೋಗ್ಯ ಸಚಿವರಾಗಿದ್ದ ಯು.ಟಿ. ಖಾದರ್ 1 ಕೋಟಿ 56 ಲಕ್ಷ ಪಡೆದರೆ, ಅರಣ್ಯ ಇಲಾಖೆ ಸಚಿವರಾಗಿದ್ದ ರಮಾನಾಥ ರೈ 1 ಕೋಟಿ 52 ಲಕ್ಷ ಹಾಗೂ ಕಾನೂನು ಸಚಿವರಾಗಿದ್ದ ಟ.ಬಿ.ಜಯಚಂದ್ರ 99 ಕೋಟಿ 72 ಲಕ್ಷ ಹಣವನ್ನು ಪ್ರಯಾಣ ಭತ್ಯೆಗೆ ಪಡೆದುಕೊಂಡಿದ್ದಾರೆ.

Bhimappa Gadad said Minister spent Rs.24 crore in the Siddaramaiah government

ಈ ಮೂವರು ಅತಿ ಹೆಚ್ಚು ಪ್ರಯಾಣ ಭತ್ಯೆ ಪಡೆದುಕೊಂಡಿದ್ದಾರೆ ಎಂದು ದೂರಿರುವ ಅವರು, ಮಾರುಕಟ್ಟೆಯಲ್ಲಿ ಪ್ರತಿ ಕಿ.ಮೀ. 15 ರುಪಾಯಿ ಗೆ ಇನೋವಾ ಮಾದರಿಯ ಐಷಾರಾಮಿ ಕಾರುಗಳು ಕಡಿಮೆ ದರದಲ್ಲಿ ಬಾಡಿಗೆ ಸಿಗುತ್ತದೆ.

ಪ್ರತ್ಯೇಕ ರಾಜ್ಯ ರಚನೆ ಹೋರಾಟಕ್ಕೆ 24 ಸಂಘಟನೆಗಳ ಬೆಂಬಲ: ಭೀಮಪ್ಪ ಗಡಾದಪ್ರತ್ಯೇಕ ರಾಜ್ಯ ರಚನೆ ಹೋರಾಟಕ್ಕೆ 24 ಸಂಘಟನೆಗಳ ಬೆಂಬಲ: ಭೀಮಪ್ಪ ಗಡಾದ

ಆದ್ರೆ ಸರ್ಕಾರಿ ವಾಹನ ಮತ್ತು ಸರ್ಕಾರದ ಇಬ್ಬರು ಚಾಲಕರು ಇದ್ದರೂ ನಮ್ಮ ಸಚಿವರು ಪ್ರತಿ ಕಿ.ಮೀ.ಗೆ 30 ರುಪಾಯಿ ಪ್ರಯಾಣ ಭತ್ಯೆಯನ್ನು ಪಡೆದುಕೊಂಡಿದ್ದಾರೆ. ಹೀಗೆ ಪ್ರಯಾಣ ಭತ್ಯೆ ಹೆಸರಿನಲ್ಲಿ ಸಾರ್ವಜನಿಕ ಹಣ ಪೋಲಾಗುತ್ತಿದೆ ಎಂದು ಭೀಮಪ್ಪ ಗಡಾದ್ ಆರೋಪಿಸಿದ್ದಾರೆ.

ಸಾಲ ಮಾಡುವುದರಲ್ಲಿ ದಾಖಲೆ ಮಾಡಿದ ಸಿದ್ದರಾಮಯ್ಯ!ಸಾಲ ಮಾಡುವುದರಲ್ಲಿ ದಾಖಲೆ ಮಾಡಿದ ಸಿದ್ದರಾಮಯ್ಯ!

Bhimappa Gadad said Minister spent Rs.24 crore in the Siddaramaiah government

ವಿಧಾನಪರಿಷತ್ ಸದಸ್ಯರಿಗೆ ವೇತನ, ದೂರವಾಣಿ ಭತ್ಯೆ, ಕ್ಷೇತ್ರ ಭತ್ಯೆ, ಅಂಚೆ ಭತ್ಯೆ ಸೇರಿ 28.63 ಕೋಟಿ ರೂ, ವೈದ್ಯಕೀಯ ವೆಚ್ಚ 3.22 ಕೋಟಿ ರೂ ಸೇರಿ ಸುಮಾರು 33 ಕೋಟಿ ರೂ. ಪಾವತಿಸಲಾಗಿದೆ. ಈ ಎಲ್ಲ ಭತ್ಯೆ ಸೇರಿ 235 ಕೋಟಿ ರೂ. ಆಗಿದೆ ಎಂದು ಕಳೆದೆರೆಡು ತಿಂಗಳ ಹಿಂದೆ ಭೀಮಪ್ಪ ಗಡಾದ್ ಅವರು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಯಲ್ಲಿ ತಿಳಿಸಲಾಗಿತ್ತು.

English summary
RTI activist Bhimappa Gadad said in Belgaum, Minister spent Rs.24 crore in the Siddaramaiah government. He complained minister spent Rs 24 crore 28 lakh 864 rupees on travel allowance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X