ಆಪ್ತ ಸ್ನೇಹಿತೆ ಅಪಹರಣ: ಬೆಳಗಾವಿಯಲ್ಲಿ ಸಿನಿಮೀಯ ಘಟನೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ಏಪ್ರಿಲ್ 20: ಕಿಡ್ನ್ಯಾಪ್ ಯೋಜನೆ ಫಲಿಸಿದರೆ ತಿರುಪತಿ ವೆಂಕಟರಮಣನಿಗೆ 70 ಲಕ್ಷ ರೂ. ಕಾಣಿಕೆ ನೀಡುವುದಾಗಿ ಹರಕೆ ಹೊತ್ತಿದ್ದ ಇಬ್ಬರು ಪ್ರೇಮಿಗಳನ್ನು ಬೆಳಗಾವಿಯ ತಿಲಕವಾಡಿ ಪೊಲೀಸರು ಬಂಧಿಸಿದ್ದಾರೆ.

ಪ್ರೇಮಿಗಳಿಬ್ಬರು ಸೇರಿ, ಹಣಕ್ಕಾಗಿ ಆಪ್ತ ಸ್ನೇಹಿತೆಯನ್ನೇ ಕಿಡ್ನ್ಯಾಪ್ ಮಾಡಿದ ಸಿನಿಮೀಯ ಘಟನೆ ಇದು. ಬೆಳಗಾವಿಯ ಗೋಗ್ಟೆ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (GIT) ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಅರ್ಪಿತಾ ನಾಯ್ಕ್ ಅವರ ಮನೆಯವರು ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳು ಅಪಹರಣಗೊಂದಿದ್ದಾಳೆಂದು ದೂರು ನೀಡಿದ್ದರು.[ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಮೇಲೆ ವಾಮಾಚಾರ!?]

Best friend's kidnap case: A strange incident in Belgaum

ಈ ದೂರಿನನ್ವಯ ತನಿಖೆ ನಡೆಸಿ, ಅಪರಾಧ ಭೇದಿಸುವಲ್ಲಿ ಸಫಲರಾದ ಪೊಲೀಸರಿಗೆ ಅಚ್ಚರಿ ಕಾದಿತ್ತು! ಅರ್ಪಿತಾ ನಾಯ್ಕ್ ಅವರ ಸ್ನೇಹಿತೆ ದಿವ್ಯಾ, ತನ್ನ ಪ್ರೇಮಿ ಕೇದಾರ್ ಜೊತೆ ಸೇರಿ ಆಪ್ತ ಸ್ನೇಹಿತೆಯನ್ನೇ ಕಿಡ್ನ್ಯಾಪ್ ಮಾಡಿ, 5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.[ಪ್ರವಾಸಕ್ಕೆ ತೆರಳಿದ್ದ ಬೆಳಗಾವಿಯ 8 ವಿದ್ಯಾರ್ಥಿಗಳು ನೀರುಪಾಲು]

ಘಟನೆಯ ವಿವರ
ಏಪ್ರಿಲ್ 17 ರಂದು ಇಲ್ಲಿನ ನಿಯಾಜ್ ಎಂಬ ಹೊಟೇಲ್ ಗೆ ರಾತ್ರಿ ಊಟಕ್ಕೆಂದು ದಿವ್ಯಾ ಮತ್ತು ಕೇದಾರ್ ಅರ್ಪಿತಾ ಅವರನ್ನು ಆಮಂತ್ರಿಸಿದ್ದರು. ಊಟದ ನಂತರ ಆಕೆಗೆ ನಿದ್ದೆ ಮಾತ್ರೆಗಳನ್ನು ಬೆರೆಸಿದ್ದ ಪಾನೀಯ ನೀಡಿ, ಆಕೆ ಪಾನೀಯ ಕುಡಿದ ನಂತರ ಮತ್ತೆ ಆಕೆಗೆ ಕ್ಲೋರೋಫಾರ್ಮ್ ಲೇಪಿಸಿ ಆಕೆ ಸಂಪೂರ್ಣ ನಿದ್ದೆಗೆ ಜಾರುವಂತೆ ಮಾಡಿದ್ದರು.[ನಿವೃತ್ತ ಡಿವೈಎಸ್ ಪಿ ಮೇಲೆ ಹಲ್ಲೆ, ಬೆಳಗಾವಿ ಮಾಜಿ ಮೇಯರ್ ಬಂಧನ]

ಆಕೆ ನಿದ್ರಿಸಿದ ನಂತರ ಕೇದಾರನ ಊರಾದ ಗದಗಕ್ಕೆ ಇಂಡಿಕಾ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇವರೊಂದಿಗೆ ಕಾರ್ ಚಾಲಕ ಕೂಡ ಶಾಮೀಲಾಗಿದ್ದ ಎನ್ನಲಾಗಿದೆ. ಈ ನಡುವೆ ಅರ್ಪಿತಾ ಮನೆಗೆ ಫೋನ್ ಮಾಡಿ 5 ಕೋಟಿ ರೂ. ಬೇಡಿಕೆಯನ್ನೂ ಇಟ್ಟಿದ್ದರು. ಇದರಿಂದ ಆತಂಕಗೊಂಡ ಅರ್ಪಿತಾ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.

ತಮಾಷೆಯ ಸಂಗತಿ ಎಂದರೆ, ಕಿಡ್ನ್ಯಾಪ್ ಯೋಜನೆ ಹಾಕಿದ ನಂತರ ಮೂರು ಬಾರಿ ತಿರುಪತಿಗೆ ಹೋಗಿದ್ದ ಈ ಪ್ರೇಮಿಗಳು, ತಮ್ಮ ಯೋಜನೆ ಫಲಿಸಿ, ತಮ್ಮ ಕೈಗೆ ಹಣ ಬಂದರೆ ತಿರುಪತಿ ವೆಂಕಟರಮಣನಿಗೆ 70 ಲಕ್ಷ ರೂ. ಕಾಣಿಕೆ ನೀಡುವುದಾಗಿ ಹರಕೆ ಹೊತ್ತಿದ್ದರಂತೆ! ಇಂಥ ಕುತಂತ್ರ ಮಾಡುವುದಕ್ಕೆ ದೇವರಿಗೆ ಹರಕೆ ಬೇರೆ!
ಇದೀಗ ತಿಲಕವಾಡಿ ಪೊಲೀಸರ ಅತಿಥಿಯಾಗಿರುವ ಈ ಪ್ರೇಮಿಗಳ ವಿರುದ್ಧ ತನಿಖೆ ನಡೆಯುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Divya and Kedar, lovers from Belgaum kidnaps Divya's best friend Arpita Naik and demanded Rs. 5 crore ransom from Arpita's father. Belgaum police arrested both Divya and Kedar.
Please Wait while comments are loading...