ಬೆಂಗಳೂರು: ಬಡವರ ನೆರವಿಗೆ ನಿಂತ ಓರಾಯನ್ ಮಾಲ್

Written By:
Subscribe to Oneindia Kannada

ಬೆಂಗಳೂರು, ಮೇ 19: ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರು ಒಂದಾಗಿ ಸೇರಿ ಬಡ ಕುಟುಂಬಗಳ ಶ್ರೇಯಸ್ಸಿಗೆ ಹೊಸದೊಂದು ಕ್ರಮ ತೆಗೆದುಕೊಂಡಿದ್ದಾರೆ. ಸ್ಮೈಲ್ ಫೌಂಡೇಶನ್ ಸಹಯೋಗದಲ್ಲಿ ಒರಾಯನ್ ಮಾಲ್ ನಲ್ಲಿ ಮೇ 29 ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಈ ಹಬ್ಬದಲ್ಲಿ ಗ್ರಾಹಕರು ತಮ್ಮ ಹಳೆಯ ಬಟ್ಟೆಗಳು, ಪಾದರಕ್ಷೆಗಳು, ಆಟಿಕೆಗಳು, ಪುಸ್ತಕಗಳು ಸೇರಿದಂತೆ ಮತ್ತಿತರೆ ಬಳಸಲು ಯೋಗ್ಯವಾದಂತಹ ವಸ್ತುಗಳನ್ನು ದಾನ ಮಾಡಬಹುದು. ಗ್ರಾಹಕರು ಬ್ರಿಗೇಡ್ ಗೆಟ್ ವೇಯಲ್ಲಿರುವ ಒರಾಯನ್ ಮಾಲ್ ಮತ್ತು ಬಾಣಸವಾಡಿ ಮುಖ್ಯರಸ್ತೆಯಲ್ಲಿರುವ ಒರಾಯನ್ ಈಸ್ಟ್ ಮಾಲ್‍ನಲ್ಲಿ ಈ ಉತ್ಪನ್ನಗಳನ್ನು ನೀಡಬಹುದಾಗಿದೆ. ಹೀಗೆ ದಾನ ಮಾಡಿದ ಗ್ರಾಹಕರು ಮಲ್ ನಲ್ಲಿ ಹೊಸದಾಗಿ ಖರೀದಿ ಮಾಡುವ ಉತ್ಪನ್ನಗಳ ಮೇಲೆ ರಿಯಾಯಿತಿ ಪಡೆದುಕೊಳ್ಳಲಿದ್ದಾರೆ.[ಒರಾಯನ್ ಮಾಲ್ ಗೆ ಅತ್ಯುತ್ತಮ ಮಾಲ್ ಪ್ರಶಸ್ತಿ]

bengaluru

ಗ್ರಾಹಕರಿಂದ ಸಂಗ್ರಹವಾದ ಉತ್ಪನ್ನಗಳನ್ನು ಸ್ಮೈಲ್ ಫೌಂಡೇಶಬನ್ ವಸತಿಹೀನರು ಸೇರಿದಂತೆ ಬಡ ಕುಟುಂಬಗಳಿಗೆ ತಲುಪಿಸಲಿದೆ. ಅಗತ್ಯ ಸೌಲಭ್ಯಗಳಿಂದ ವಂಚಿತರಾಗಿರುವವರಿಗೆ ನೆರವು ನೀಡುವ ಒಂದು ಸಣ್ಣ ಪ್ರಯತ್ನ ಇದಾಗಿದೆ. ಈ ಮೂಲಕ ನಾವು ಗ್ರಾಹಕರು ದಾನ ಮಾಡಲು ಒಂದು ವೇದಿಕೆಯನ್ನು ನಿರ್ಮಿಸಿಕೊಟ್ಟಿರುವುದಕ್ಕೆ ಸಂತಸ ಎನಿಸಿದೆ. ದಾನ ಮಾಡಿದ ಅನುಭವವನ್ನು ಹಂಚಿಕೊಳ್ಳಲು ಗ್ರಾಹಕರಿಗೆ ಇದೊಂದು ಅವಕಾಶ ಎಂದು ಬ್ರಿಗೇಡ್ ಗ್ರೂಪ್ ನ ರೀಟೇಲ್ ಅಂಡ್ ಕಮರ್ಷಿಯಲ್ ವಿಭಾಗದ ಸಿಇಒ ವಿಶಾಲ್ ಮೀರ್‍ಚಂದಾನಿ ಹೇಳುತ್ತಾರೆ.[ಮಳೆಗಾಲಕ್ಕೂ ಮುನ್ನ ಆಫರ್‌ಗಳ ಸುರಿಮಳೆ]

ಮೇ 21 ರಂದು ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಷನ್ ಗುರು ಪ್ರಸಾದ್ ಬಿಡ್ಡಪ್ಪ ನೇತೃತ್ವದಲ್ಲಿ ಫ್ಯಾಷನ್ ಶೋ ಆಯೋಜಿಸಲಾಗಿದೆ. ಇದರಲ್ಲಿ ಬಾಲಿವುಡ್ ಸ್ಟಾರ್ ಗಳು ಭಾಗವಹಿಸಲಿದ್ದಾರೆ. ಮೇ 28 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ಯಾರೀಸ್ ಗೆ ಹಾರಲಿರುವ ಗ್ರಾಹಕರನ್ನು ಇದೆ ವೇಳೆ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಕ್ರಿಕೆಟಿಗ ವಿರಾಟ್ ಕೊಹ್ಲಿ ಜತೆ ಮಾತನಾಡಲಿರುವ ಅದೃಷ್ಟವಂತರು, ಪಾಂಡಿಚೇರಿಯ ಪ್ರವಾಸಕ್ಕೂ ಲಕ್ಕಿ ವಿನ್ನರ್ ಗಳ ಆಯ್ಕೆ ನಡೆಯಲಿದೆ ಎಂದು ಗ್ರೂಪ್ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: Orion Mall taking a initiative to help poor people to collecting cloths, books and other usable things. The event is going on till 29th may in lead of Smile Foundation.
Please Wait while comments are loading...