ಅಂತಾರಾಷ್ಟ್ರೀಯ ಅಥ್ಲಿಟ್ ಬೆನ್ನತ್ತಿದ ಬೆಂಗಳೂರು ಶ್ವಾನ!

Written By:
Subscribe to Oneindia Kannada

ಬೆಂಗಳೂರು, ಮೇ, 16: ತಪ್ಪಿದ ಕೂಟ ದಾಖಲೆ, ಸ್ಪರ್ಧಿಗಳನ್ನು ಅಟ್ಟಿಸಿಕೊಂಡು ಹೋದ ಶ್ವಾನ, ಬಿಸಿಲಿನ ಶಾಖಕ್ಕೆ ಬಳಲಿದ ಸ್ಪರ್ಧಿಗಳು, ಗೊಂದಲದಿಂದ ಅರ್ಧಕ್ಕೆ ನಿಂತು 30 ಸೆಕೆಂಡ್ ಕಳೆದುಕೊಂಡು ಮತ್ತೆ ಓಡಿ ಪ್ರಶಸ್ತಿ ಜಯಿಸಿದರೂ ದಾಖಲೆ ಮಾಡಲಾಗಲಿಲ್ಲ ಎಂದು ಹತಾಶೆ ವ್ಯಕ್ತಪಡಿಸಿದ ಭಾರತೀಯ ಮಹಿಳಾ ಅಥ್ಲಿಟ್.....

ಭಾನುವಾರ ಮಹಾನಗರಕ್ಕೆ ರಂಗೇರಿಸಿದ್ದ ಟಿಸಿಎಸ್ 10ಕೆ ಓಟ ಹಲವು ವಿಶೇಷಗಳಿಗೆ, ಅಪರೂಪಕ್ಕೆ ಸಾಕ್ಷಿಯಾಯಿತು. ಅಂಗವಿಕಲರು ಮತ್ತು ಹಿರಿಯ ನಾಗರಿಕರು ಓಟದಲ್ಲಿ ಪಾಲ್ಗೊಂಡು ಜನ ಜಾಗೃತಿಯ ಭಿತ್ತಿ ಪತ್ರ ಪ್ರದರ್ಶನ ಮಾಡಿ ಗಮನ ಸೆಳೆದರು. ಪರಿಸರ ಸಂರಕ್ಷಣೆ, ಅಂಗಾಂಗದಾನ, ನೀರು ಸಂರಕ್ಷಣೆ ಕುರಿತ ಭಿತ್ತಿಪತ್ರಗಳು ಗಮನ ಸೆಳೆದವು.[ಬೆಂಗಳೂರಲ್ಲಿ ಟಿಸಿಎಸ್ 10ಕೆ ಸಂಭ್ರಮ: ವಿಜೇತರ ಪಟ್ಟಿ]

ಅಂತಾರಾಷ್ಟ್ರೀಯ ಅಥ್ಲೆಟ್ ಮೈಕ್ ಪೊವೆಲ್, ಭಾರತೀಯ ಲಾಂಗ್ ಜಂಪ್ ತಾರೆ ಅಂಜು ಬಾಬಿ ಜಾರ್ಜ್, ಗೃಹ ಸಚಿವ ಡಾ. ಜಿ ಪರಮೇಶ್ವರ, ಕ್ರೀಡಾ ಸಚಿವ ಅಭಯ ಚಂದ್ರ ಜೈನ್, ನಟ ಪುನೀತ್ ರಾಜ್ ಕುಮಾರ್ ಓಟಕ್ಕೆ ಸಾಕ್ಷಿಯಾದರು.

ಶ್ವಾನ ಸ್ಪರ್ಧೆ

ಶ್ವಾನ ಸ್ಪರ್ಧೆ

ಪುರುಷರ ಎಲೈಟ್ ಓಟದ ಆರಂಭದಿಂದಲೂ ಮೊದಲಿಗರಾಗಿ ಮುನ್ನಡೆ ಕಾಯ್ದುಕೊಂಡಿದ್ದ ಇಥಿಯೋಪಿಯಾದ ಮುಲೆ ವಾಸಿಹುನ್ ಅವರಿಗೆ ಅಂಬೇಡ್ಕರ್ ವೀದಿಯಿಂದ ಶ್ವಾನವೊಂದು ಜತೆಯಾಯಿತು. ಎಲ್ಲರಿಗಿಂತ ಮುಂದೆ ಓಡುತ್ತಿದ್ದ ವಾಸಿಹುನ್ ಅವರನ್ನು ಹಿಂಬಾಲಿಸಿದ ನಾಯಿ 9 ಕಿಮೀ ವರೆಗೆ ಮುಂದಿದ್ದ ವಾಸಿಹುನ್ ಕೊನೆಯಲ್ಲಿ ಒಂಭತ್ತನೇ ಸ್ಥಾನ ಪಡೆಯುವಂತೆ ಮಾಡಿತು.

ಮಾರ್ಗ ಬದಲಾವಣೆ ಗೊತ್ತಾಗಲಿಲ್ಲ

ಮಾರ್ಗ ಬದಲಾವಣೆ ಗೊತ್ತಾಗಲಿಲ್ಲ

ಆರಂಭದಲ್ಲಿ ಸ್ಟೇಡಿಯಂನಲ್ಲೇ ಎರಡು ಸುತ್ತು ಹಾಕಬೇಕಿದ್ದರಿಂದ ಹಾಗೂ ಮಾರ್ಗದಲ್ಲೂ ಕೆಲ ಬದಲಾವಣೆ ಆಗಿದ್ದರಿಂದ ಫಿನಿಷಿಂಗ್ ಲೈನ್ ಬದಲಾಗಿರಬಹುದು ಎಂದುಕೊಂಡಿದ್ದೆ. ಹಾಗಾಗಿ ಗುರಿಗೆ 200 ಮೀಟರ್ ಇರುವಾಗಲೇ ಕೆಳಕ್ಕೆ ಕುಳಿತೆ. ನಂತರ ಎಚ್ಚೆತ್ತುಕೊಂಡು ಓಡಿದರೂ ಗುರಿ ದಾಖಲೆ ಮುರಿಯಲಾಗಲಿಲ್ಲ ಎಂಬ ನೋವಿನಲ್ಲೇ ಭಾರತೀಯ ವಿಭಾಗದ ವಿಜೇತೆನ ಸ್ವಾತಿ ಗದವೆ ಇದ್ದರು.

ಹಿರಿಯರ ವಿಭಾಗ

ಹಿರಿಯರ ವಿಭಾಗ

ಹಿರಿಯರ ವಿಭಾಗದಲ್ಲಿ 86 ವರ್ಷದ ಎ. ಕೃಷ್ಣಮೂರ್ತಿ, ಗೋಮತಿ ಉತ್ಸಾಹದಿಂದಲೇ ಭಾಗವಹಿಸಿದ್ದರು. ನೃತ್ಯ ಮಾಡುತ್ತಾ ಕನ್ನಡದ ಧ್ವಜಗಳನ್ನು ಹಿಡಿದು ಸಾಗಿದ್ದು ವಿಶೇಷ.

ಹಿಂದಿ-ತಮಿಳು ಹಾಡು

ಹಿಂದಿ-ತಮಿಳು ಹಾಡು

ನಿರೂಪಕರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡುತ್ತಲೇ ಇದ್ದರು. ಆದರೆ ಓಟ ನಡೆಯುತ್ತಿದ್ದಾಗ ತಮಿಳು ಗೀತೆಗಳು ಧ್ವನಿವರ್ಧಕದಲ್ಲಿ ಕೇಳಿಬಂದಿದ್ದು ನಾವು ಎಲ್ಲಿದ್ದೇವೆ ಎಂಬುದನ್ನು ನಮಗೆ ಕೇಳುವಂತೆ ಮಾಡಿತು.

ಬಿಸಿಲಿನ ಆರ್ಭಟ

ಬಿಸಿಲಿನ ಆರ್ಭಟ

ಹೊಸ ಕೂಟ ದಾಖಲೆ ನಿರ್ಮಾಣ ಯಾಕೆ ಸಾಧ್ಯವಾಗಲಿಲ್ಲ ಎಂಬ ಉತ್ತರವನ್ನು ವಿಜೇತರೇ ನೀಡಿದರು. ಹೈದರಾಬಾದ್ ಮತ್ತು ನವದೆಹಲಿಗೆ ಹೋಲಿಕೆ ಮಾಡಿದರೆ ಈ ಬಾರಿ ಬೆಂಗಳೂರಲ್ಲೇ ಬಿಸಿಲು ಅಧಿಕವಾಗಿತ್ತು. ಇದು ನಮ್ಮ ಓಟದ ಮೇಲೆ ಪರಿಣಾಮ ಬೀರಿತು ಎಂಬ ಒಕ್ಕೋರಲ ಅಭಿಪ್ರಾಯ ವಿಜೇತರದ್ದು.

ನೃತ್ಯ ಮಾಡಿದ ಪೊವೆಲ್

ನೃತ್ಯ ಮಾಡಿದ ಪೊವೆಲ್

ಅಂತಾರಾಷ್ಟ್ರೀಯ ಅಥ್ಲೆಟ್ ಮೈಕ್ ಪೊವೆಲ್ ನೃತ್ಯ ಮಾಡುತ್ತ ಸ್ಫರ್ಧಿಗಳನ್ನು ಹುರಿದುಂಬಿಸಿದ್ದು ವಿಶೇಷ. ಫಿನಿಶಿಂಗ್ ಲೈನಿನ ಭಾವುಟವನ್ನು ಹಿಡಿದು ಪೊವೆಲ್ ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಂಡರು.

ಮೈಕ್ ಪೊವೆಲ್ ಡ್ಯಾನ್ಸ್ ನೋಡಿಕೊಂಡು ಬನ್ನಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The sheen of ninth edition of mega running race TCS world 10K 2016 on Sunday was enhanced by long jump legend, Mike Powell, with record long jumper dancing to the beats of DJ (Disk Jockey) to boost the participants took part in the race beating the heat of IT city. For a change, Home Minister of Karnataka too was seen enjoying the event. Parameshwar was clapping to the music and appeared in dancing mood. Lighter notes aside. Scorching temperature of mid-may bothered athletes resulting in the slow down of pace of running. However, change of running course this year added to the benefits of the runners.
Please Wait while comments are loading...