ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ: ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳು, ರೈತರ ಮಧ್ಯೆ ಸಂಧಾನ ಸಭೆ

|
Google Oneindia Kannada News

ಬೆಂಗಳೂರು, ನವೆಂಬರ್ ೦5: ಬೆಳಗಾವಿ ಜಿಲ್ಲೆಯ ರೈತರ ಮೇಲೆ ಆಕ್ಸಿಸ್ ಬ್ಯಾಂಕ್, ಕೋಲ್ಕತ್ತಾದ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ , ಸಮಸ್ಯೆ ಬಗೆಹರಿಸುವಂತೆ ಇಂದೂ ಸಹ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಗಳಿಗೆ ಸಿಎಂ ಕುಮಾರಸ್ವಾಮಿ ಸೂಚಿಸಿದ್ದಾರೆ.

ರೈತರು ಹಾಗೂ ಆಕ್ಸಿಸ್ ಬ್ಯಾಂಕಿನ ಅಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದು ಅದರಂತೆ ಜಿಲ್ಲಾಧಿಕಾರಿಗಳು ನವೆಂಬರ್ 7 ರಂದು ಬ್ಯಾಂಕ್ ಅಧಿಕಾರಿಗಳು, ರೈತರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.

ಸಾಲಮನ್ನಾ ಯೋಜನೆಗೆ ತಂತ್ರಜ್ಞಾನದ ಕಾವಲಿಡಲು ಮುಂದಾದ ಸಿಎಂ
ಸಭೆಯಲ್ಲಿ ರೈತರ ಸಮಸ್ಯೆಗಳಿಗೆ ಬ್ಯಾಂಕಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಸೌಹಾರ್ದಯುತವಾಗಿ ರೈತರಿಗೆ ತೊಂದರೆಯಾಗದಂತೆ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Belgavi DC conducting meeting between farmers and Axis bank officers

ಸಿದ್ದರಾಮಯ್ಯ ಸರ್ಕಾರದ ಒಂದು ಯೋಜನೆಗೆ ಎಚ್ಡಿಕೆ ಬೀಗ ಹಾಕಿದ್ಯಾಕೆ? ಸಿದ್ದರಾಮಯ್ಯ ಸರ್ಕಾರದ ಒಂದು ಯೋಜನೆಗೆ ಎಚ್ಡಿಕೆ ಬೀಗ ಹಾಕಿದ್ಯಾಕೆ?

ಇದಲ್ಲದೆ ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು, ರೈತರಿಗೆ ಸರ್ಕಾರದ ಅಭಯ ಹಸ್ತ ಸದಾ ಇರುತ್ತದೆ, ಸರ್ಕಾರವು ಈ ತಿಂಗಳ ಅಂತ್ಯದೊಳಗಾಗಿ ಸಾಲವನ್ನು ಮನ್ನಾ ಮಾಡತ್ತದೆ ಎಂದು ಕುಮಾರಸ್ವಾಮಿ ಅಭಯ ನೀಡಿದ್ದಾರೆ.

English summary
Belgavi District commissioner conducting meeting between farmers and Axis bank officers on November 7 as per CM Kumaraswamy instruction. Axis bank sent notice to farmers about their loans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X