ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಷಪ್ರಸಾದ ತಿಂದು ಮೃತರಾದವರಿಗೆ ಅಧಿವೇಶನದಲ್ಲಿ ಸಂತಾಪ

|
Google Oneindia Kannada News

ಬೆಳಗಾವಿ, ಡಿಸೆಂಬರ್ 17: ಚಾಮರಾಜನಗರ ಜಿಲ್ಲೆಯ ಸುಡ್ವಾಳ ಗ್ರಾಮದ ಕಿಚ್ಚಗುತ್ತ ಮಾರಮ್ಮ ದೇವಾಲಯದ ಪ್ರಸಾದ ಸೇವಿಸಿ ಮೃತರಾದವರಿಗೆ ಹಾಗೂ ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಮೃತರಾದವರಿಗೆ ಇಂದು ಬೆಳಗಾವಿ ಅಧಿವೇಶನದಲ್ಲಿ ಸಂತಾಪ ಸೂಚಕ ನಿರ್ಣಯ ಮಂಡಿಸಲಾಯಿತು.

ಸಂತಾಪ ಸೂಚಕ ನಿರ್ಣಯದ ಬಳಿಕ ಮಾತನಾಡಿದ ಗೃಹ ಮಂತ್ರಿ ಪರಮೇಶ್ವರ್ ಅವರು, ಬಾಗಲಕೋಟೆ ಜಿಲ್ಲೆಯ ಖಾಸಗಿ ಸಕ್ಕರೆ ಕಾರ್ಖಾನೆಯ ಸಂಸ್ಕರಣಾ ಘಟಕದಲ್ಲಿ ಭಾನುವಾರ ನಡೆದ ಸ್ಪೋಟ ಪ್ರಕರಣದಲ್ಲಿ ಮೃತರಾದ ನಾಲ್ವರ ಕುಟುಂಬಗಳಿಗೂ ಕೂಡಾ ರಾಜ್ಯ ಸರ್ಕಾರ ತಲಾ ಐದು ಲಕ್ಷ ರೂ. ಪರಿಹಾರವನ್ನು ನೀಡಲಿದೆ ಎಂದು ಪ್ರಕಟಿಸಿದರು.

Belgaum session express condolence to people who died in temple tragedy in Chamarajanagar

ಚಾಮರಾಜ ನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚಗುತ್ ಮಾರಮ್ಮ ದೇವಸ್ಥಾನ ಗೋಪುರದ ಶಿಲಾನ್ಯಾಸ ಸಮಾರಂಭದಲ್ಲಿ ವಿತರಿಸಲಾದ ಪ್ರಸಾದವನ್ನು ಸೇವಿಸಿ ಇಬ್ಬರು ಮಕ್ಕಳೂ ಒಳಗೊಂಡಂತೆ ಒಟ್ಟು ಹದಿನಾಲ್ಕು ಜನ ಸಾವನ್ನಪ್ಪಿದ್ದಾರೆ.

ಬಾಗಲಕೋಟೆ : ಬಾಯ್ಲರ್ ಸ್ಫೋಟ, ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಬಾಗಲಕೋಟೆ : ಬಾಯ್ಲರ್ ಸ್ಫೋಟ, ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ

ಇನ್ನೂ 108 ಜನರು ಮೈಸೂರು ಭಾಗದ 13 ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರೂ ಬೇಗ ಗುಣಮುಖರಾಗಲಿ. ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವುದರ ಜೊತೆಗೆ ಧೈರ್ಯ ತುಂಬುವ ಕಾರ್ಯವನ್ನು ಸರ್ಕಾರ ಮಾಡಲಿ ಎಂದು ಸಭಾಧ್ಯಕ್ಷ ರಮೇಶ್‌ ಕುಮಾರ್‌ ಹೇಳಿದರು.

ವಿಷಪ್ರಸಾದ: ಪೋಷಕರ ಕಳೆದುಕೊಂಡ ಮಕ್ಕಳ ದತ್ತು ಪಡೆಯಲಿದೆ ಆಳ್ವಾಸ್ ವಿಷಪ್ರಸಾದ: ಪೋಷಕರ ಕಳೆದುಕೊಂಡ ಮಕ್ಕಳ ದತ್ತು ಪಡೆಯಲಿದೆ ಆಳ್ವಾಸ್

English summary
Belgaum session MLAs, ministers express condolence to the people who died in temple tragedy in Chamarajangar and also express condolence to people who died in Bagalkot district sugar factory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X