ಬೆಳಗಾವಿಯಲ್ಲಿ ಕನ್ನಡ ಶಾಲೆಗೆ ಬೆಂಕಿಯಿಟ್ಟರೆ ಮರಾಠಿ ಪುಂಡರು?

Posted By:
Subscribe to Oneindia Kannada

ಬೆಳಗಾವಿ, ನವೆಂಬರ್ 7 : ಶಹಾಪುರದ ಭಾರತ್ ನಗರದಲ್ಲಿ ಭಾನುವಾರ ರಾತ್ರಿ ಕಿಡಿಗೇಡಿಗಳಿಂದ ಸರ್ಕಾರಿ ಶಾಲೆಯನ್ನು ಧ್ವಂಸಗೊಳಿಸುವ ಯತ್ನ ನಡೆದಿದೆ.

ಶಹಾಪುರ ವಾರ್ಡ್ ನಂ 17ರಲ್ಲಿರುವ ಈ ಶಾಲೆಯ ಬೀಗ ಹೊಡೆದು ಕೊಠಡಿಯಲ್ಲಿದ್ದ ಅಗತ್ಯ ದಾಖಲೆಗಳಿಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳು, ಶಾಲೆಯ ಡೆಸ್ಕ್, ವಿದ್ಯುತ್ ದೀಪ, ನೆಲ್ಲಿ, ಬಾಗಿಲುಗಳ ಮೇಲೆ ಹಲ್ಲೆ ನಡೆಸಿ ಪುಂಡಾಟಿಕೆ ಮೆರೆದಿದ್ದಾರೆ.

ಕಿಡಿಗೇಡಿಗಳು ಸರ್ಕಾರಿ ಶಾಲೆಯಲ್ಲಿ ಪ್ರತಿ ತಿಂಗಳಿಗೆ ಅಥವಾ ಎರಡು ತಿಂಗಳಿಗೆ ಒಂದು ಬಾರಿಯಂತೆ ವರ್ಷಕ್ಕೆ ಈ ರೀತಿ ಹತ್ತಕ್ಕೂ ಹೆಚ್ಚು ಬಾರಿ ಹಲ್ಲೆ ಮಾಡುತ್ತಿದ್ದಾರೆ ಎಂದು ಶಾಲಾ ಸಿಬ್ಬಂದಿ ತಿಳಿಸಿದ್ದಾರೆ.[ಮರಾಠಿಗರ ರಕ್ಷಣೆಗೆ ರಾಜನಾಥ್ ಸಿಂಗ್ ಮಧ್ಯಪ್ರವೇಶಿಸಬೇಕು: ಶಿವಸೇನೆ]

Belgaum in kannada school is wrecked in sunday night

ಇನ್ನು ಶಾಲೆಗೆ ಅಂಟಿಕೊಂಡಂತೆ ಪೊಲೀಸ್‌ ಠಾಣೆಯಿದ್ದು, ಆಗ್ಗಿಂದಾಗ್ಗೆ ನಡೆಯುತ್ತಿರುವ ಕೃತ್ಯಗಳ ಬಗ್ಗೆ ಕಂಡು ಕಾಣದಂತೆ ಇಲಾಖೆ ಸುಮ್ಮನಿದೆ ಎಂದು ನಾಗರಿಕರು ತಿಳಿಸಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕಿ ಎಸ್ ವೈ. ಕಕ್ಕನೂರು ಈ ಬಗ್ಗೆ ಪ್ರತಿಕ್ರಿಯಿಸಿ ಪತ್ರಿಬಾರಿ ದಾಳಿ ನಡೆಯುತ್ತಿತ್ತು ಆದರೆ ಈ ಸಲ ಬೆಂಕಿ ಹಚ್ಚಿದ್ದಾರೆ. ದಾಳಿ ನಡೆಸುತ್ತಿರುವವರು ಯಾರು ಎಂದು ನಮಗೆ ಗೊತ್ತಿಲ್ಲ. ಮರಾಠಿ ಕಾರ್ಯಕರ್ತರ ಕೃತ್ಯವೇ ಎಂಬುದು ಸಹ ತಿಳಿದಿಲ್ಲ, ನಾನು ಬಂದು ಇಲ್ಲಿ ನಾಲ್ಕು ವರ್ಷವಾಗಿದೆ ಗಣೇಶ ಹಬ್ಬದ ವೇಳೆಯು ಇದೇ ರೀತಿಯಾಗಿತ್ತು ಎಂದಿದ್ದಾರೆ.[ಬೆಳಗಾವಿಯಲ್ಲಿ ಭಾನುವಾರ ಕುರುಬರ ಜಾಗೃತಿ ಸಮಾವೇಶ]

ಈ ಶಾಲೆ ಪೊಲೀಸ್ ಠಾಣೆಯ ಪಕ್ಕದಲ್ಲೇ ಇದೆ. ಇದರಿಂದ ಮಕ್ಕಳಿಗೆ ಮತ್ತು ಶಿಕ್ಷಕ ಸಿಬ್ಬಂಧಿಗೆ ರಕ್ಷಣೆಯಿಲ್ಲ. ಇದು ಹಗಲಿನಲ್ಲಿ ನಡೆದರೆ ಮಕ್ಕಳ ಗತಿ ಏನು ಎಂಬ ಭಯವಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕಿ

ಇನ್ನು ಇಲ್ಲಿನ ಎಸ್‌ಡಿಎಂಸಿ ಸದಸ್ಯ ಲೋಹಿತ್ ಮೋರ್ಕರ್ ಮಾತನಾಡಿ, 'ತಿಂಗಳಿನಲ್ಲಿ ಒಂದು ಬಾರಿ ಈ ರೀತಿ ಪ್ರಕರಣ ನಡೆಯುತ್ತಲೇ ಇರುತ್ತದೆ. ಇದರ ಉದ್ದೇಶವೇನು ಎಂದು ಇದುವರೆಗೂ ತಿಳಿದು ಬಂದಿಲ್ಲ. ಯಾರು ನಡೆಸುತ್ತಾರೆ ಎಂಬುದೂ ನಮಗೆ ತಿಳಿದಿಲ್ಲ. ಸರ್ಕಾರದ ಮೇಲಾಧಿಕಾರಿಗಳು ಮತ್ತು ಪೊಲೀಸರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ''.[ಬೋರ್ಡ್ ಗಳಿಗೆ ಮಸಿ ಬಳಿದ ಕರವೇ ಕಾರ್ಯಕರ್ತರು]

ಮೊದಲೇ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂಜರಿಯುತ್ತಿದ್ದಾರೆ ಈ ವೇಳೆ ಬೆಳಗಾವಿಯಲ್ಲಿ ಈ ರೀತಿಯ ಘಟನೆ ನಡೆದಿರುವುದು ಮಕ್ಕಳ ಭವಿಷ್ಯದ ಪಾಲಿಕೆ ದೊಡ್ಡ ಆಘಾತ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Belagavi in Shahapura Bharat Nagar government school has wrecked in Sunday night. The desk, an electric lamp, water tap, doors and assaulted some Miscreants.
Please Wait while comments are loading...