ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ: ದಶಕಗಳ ಬಳಿಕ ಕನ್ನಡಿಗರ ಪಾಲಾದ ಮೇಯರ್ ಹುದ್ದೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಮಾರ್ಚ್ 1 : ಬೆಳಗಾವಿಯಲ್ಲಿ ನಡೆದ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಕನ್ನಡಿಗರಾದ ಬಸವರಾಜ್ ಚಿಕ್ಕಲದಿನ್ನಿ ಮೇಯರ್ ಆಗಿ ಅಯ್ಕೆಯಾಗಿದ್ದಾರೆ.

ದಶಕಗಳ ಬಳಿಕ ಕನ್ನಡಿಗರಿಗೆ ಬೆಳಗಾವಿಯಲ್ಲಿ ಮೇಯರ್ ಸ್ಥಾನ ದೊರಕಿದಂತಾಗಿದೆ. ಮೇಯರ್ ಸ್ಥಾನಕ್ಕೆ ಕನ್ನಡ ಸದಸ್ಯರಾದ ಬಸವರಾಜ್ ಚಿಕ್ಕಲದಿನ್ನಿ ಹಾಗೂಸುಚೇತಾ ಗಂಡಗುದರಿ ಆಕಾಂಕ್ಷಿಗಳಾಗಿದ್ದರು. ಮೇಯರ್ ಹಾಗೂ ಉಪಮೇಯರ್ ಯಾರಾಗುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ.

ಉಪಮೇಯರ್ ಸ್ಥಾನಕ್ಕೆ ಕನ್ನಡ ಸದಸ್ಯರಾದ ಪುಷ್ಪಾ ಪರ್ವತರಾವ್, ಜಯಶ್ರೀ ಮಾಳಗಿ, ಶಾಂತರ ಉಪ್ಪಾರ ಹಾಗೂ ಎಂಇಇಎಸ್ ಪಾಳ್ಯದಿಂದ ಮಧುಶ್ರೀ ಪೂಜಾರ, ಮೇಘಾ ಹಳಗನಕರ ಅವರ ಮಧ್ಯದಲ್ಲಿ ಸ್ಪರ್ಧೆ ಏರ್ಪಟ್ಟಿದೆ.

Belgaum gets Kannada mayor after a decade

ಗುರುವಾರ ಬೆಳಗ್ಗೆ 10 ಗಂಟೆಯಿಂದ ಚುನಾವಣೆ ಪ್ರಕ್ರಿಯೆ ಆರಂಭವಾಗಿತ್ತು. ಕನ್ನಡ ಮತ್ತು ಉರ್ದು ಭಾಷಿಕರು ಸೇರಿ 25 ಸದಸ್ಯ ಬೆಂಬಲವಿತ್ತು. ನಾಲ್ವರು ಶಾಸಕರು, ಇಬ್ಬರು ಸಂಸದರು ಸೇರಿ ಚುನಾಯಿತ ಪ್ರತಿನಿದಿಗಳ ಮತಗಳು 6 ಇತ್ತು.

English summary
Basavaraj chikkaladinni has become new mayor of Belgaum city on Thursday. After a decade Basavaraj is first kannadiga to become first citizen of the city defeating candidate belongs to Maratha language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X