ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

22 ಸಾವಿರ ಕೊಳವೆ ಬಾವಿಗಳನ್ನು ಮುಚ್ಚಿದ ಬೆಳಗಾವಿ ಜಿಲ್ಲಾಡಳಿತ

ಝಂಜರವಾಡ ಗ್ರಾಮದಲ್ಲಿ ಇತ್ತೀಚೆಗೆ ಆರು ವರ್ಷದ ಕಾವೇರಿ ಎಂಬ ಬಾಲಕಿ ಸಾವನ್ನಪ್ಪಿದ ಘಟನೆಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತದಿಂದ ಕೊಳವೆ ಬಾವಿ ಮುಚ್ಚುವ ಅಭಿಯಾನ ಆರಂಭ.

|
Google Oneindia Kannada News

ಬೆಳಗಾವಿ, ಮೇ 18: ತೆರೆದ ಕೊಳವೆ ಬಾವಿಗಳಲ್ಲಿ ಮಕ್ಕಳು ಬೀಳುತ್ತಿರುವ ಘಟನೆಗಳು ಪುನರಾವರ್ತನೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇತ್ತೀಚೆಗೆ ಕೈಗೊಂಡಿದ್ದ ಕೊಳವೆ ಬಾವಿ ಮುಚ್ಚುವ ಕಾಯಕದಿಂದಾಗಿ 20 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಮುಚ್ಚಲಾಗಿದೆ.

ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡ ಗ್ರಾಮದಲ್ಲಿ ಇತ್ತೀಚೆಗೆ ಆರು ವರ್ಷದ ಕಾವೇರಿ ಎಂಬ ಬಾಲಕಿ ತೆರೆದ ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆಯ ನಂತರ ತುರ್ತು ಕ್ರಮಕ್ಕೆ ಆದೇಶಿಸಿದ ಜಿಲ್ಲಾಡಳಿತ, ಜಿಲ್ಲೆಯಾದ್ಯಂತ ಇರುವ ಕೊಳವೆ ಬಾವಿಗಳನ್ನು ಮುಚ್ಚಲು ಆದೇಶ ನೀಡಿತ್ತು. ಅದರನ್ವಯ 22,511 ತೆರೆದ ಕೊಳವೆ ಬಾವಿಗಳನ್ನು ಮುಚ್ಚಲಾಗಿದೆ.

Belgaum district administration closes more than 22 thousand borewells

ಇದಲ್ಲದೆ, ಕೊಳವೆ ಬಾವಿಗಳನ್ನು ಮುಚ್ಚಿಸದೇ ಇರುವ ಆ ಜಾಗದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಜಿಲ್ಲಾಧಿಕಾರಿ ಎನ್. ಜಯರಾಮ್ ಎಚ್ಚರಿಕೆ ನೀಡಿದ್ದಾರೆ.

English summary
To avoid the repeated incident of child death by falling in open borewells, the district administration of Belgaum has started a campign to close open borewells. After 15 days, now district authorities succeeded in closing the more than 22 thousand borewells.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X