ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಮೂಲದ ಪ್ರದ್ನ್ಯಾ ಪುಣೇಕರ್ ಗೆ ಮಿಸೆಸ್ ಇಂಡಿಯಾ ಯುಕೆ ಕಿರೀಟ

|
Google Oneindia Kannada News

ಬೆಳಗಾವಿ ಮೂಲದ ಪ್ರದ್ನ್ಯಾ ಪುಣೇಕರ್ ಮಿಸೆಸ್ ಇಂಡಿಯಾ ಯುಕೆ ಕಿರೀಟ ಮುಡಿಗೇರಿಸಿದ್ದಾರೆ. ಈ ಸ್ಪರ್ಧೆಯಲ್ಲಿ ತಮ್ಮ ಸೌಂದರ್ಯ, ಮೌಲ್ಯಗಳು ಹಾಗೂ ತತ್ವಗಳ ಮೂಲಕ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಭಾರತೀಯ ವಿವಾಹಿತ ಮಹಿಳೆಯ ಪ್ರತಿಭೆಯನ್ನು ಬೆಳಕಿಗೆ ತರುವ, ಜ್ಞಾನವನ್ನು ಹಂಚಿಕೊಳ್ಳುವ ಹಾಗೂ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿತ್ತು.

ವಿಧಿಯೇ ರೂಪಿಸಿದ ಈ ವಿಶ್ವಸುಂದರಿ ಹೆಸರು ರಾಜಲಕ್ಷ್ಮಿ!ವಿಧಿಯೇ ರೂಪಿಸಿದ ಈ ವಿಶ್ವಸುಂದರಿ ಹೆಸರು ರಾಜಲಕ್ಷ್ಮಿ!

ಸೆಪ್ಟೆಂಬರ್ 23ರಂದು ಲಂಡನ್ ನ ಮೇರಿಯಟ್ ಹೋಟೆಲ್ ನಲ್ಲಿ ಈ ಸ್ಪರ್ಧೆ ನಡೆದಿತ್ತು. ಆಯ್ಕೆಯಾದ ಮಹಿಳೆಗೆ ಮಿಸೆಸ್ ಇಂಡಿಯಾ ಯುಕೆ 2017ರ ಜತೆಗೆ ಮಿಸೆಸ್ ಇಂಡಿಯಾ ಯುನಿವರ್ಸ್ 2017 ಎಂಬ ಕಿರೀಟ ಕೂಡ ಲಭಿಸಿದೆ.

Belagavi woman Pradnya Punekar crowned Mrs India UK

ಅಂದಹಾಗೆ, ಪ್ರದ್ನ್ಯಾ ತಮ್ಮ ಶಾಲಾ ಶಿಕ್ಷಣ ಹಾಗೂ ಎಂಬಿಎ ಪೂರ್ಣಗೊಳಿಸಿದ್ದು ರಾಜ್ಯದ ಬೆಳಗಾವಿಯಲ್ಲಿ ಎಂಬುದು ತಿಳಿದುಬಂದಿರುವ ಮಾಹಿತಿ. ಸದ್ಯಕ್ಕೆ ಯುಕೆನಲ್ಲಿ ಮಾನವ ಸಂಪನ್ಮೂಲ ವೃತ್ತಿಯಲ್ಲಿದ್ದಾರೆ. ಸಂಗೀತ, ಓದುವುದು ಹಾಗೂ ಪ್ರವಾಸ ಪ್ರದ್ನ್ಯಾ ಅವರ ನೆಚ್ಚಿನ ಹವ್ಯಾಸವಾಗಿದೆ.

ಕರ್ನಾಟಕದ- ಬೆಳಗಾವಿ ಮೂಲದ ಮಹಿಳೆ ಯುನೈಟೆಡ್ ಕಿಂಗ್ ಡಮ್ ನಲ್ಲಿ ಈ ರೀತಿ ಗುರುತಿಸಿಕೊಂಡಿದ್ದಾರೆ. ಅವರಿಗೊಂದು ಅಭಿನಂದನೆ ಹೇಳೋಣ.

English summary
Belagavi woman Pradnya Punekar has been crowned the winner of the Mrs India UK pageant. The beauty pageant journey of inspiring Indian women to embrace themselves, their beauty, their values and principles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X