ಬೆಳಗಾವಿ ಅಧಿವೇಶನ : ಈ ಬಾರಿ ಪೊಲೀಸರಿಗೆ ಊಟ, ವಸತಿಗೆ ಸಂಕಷ್ಟವಿಲ್ಲ

By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ನವೆಂಬರ್ 12 : ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಪೊಲೀಸರು ಊಟ ಮತ್ತು ವಸತಿಗೆ ಯಾವುದೇ ರೀತಿಯ ಸಂಕಷ್ಟ ಅನುಭವಿಸಬೇಕಿಲ್ಲ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನ.13ರಿಂದ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ.

ಈ ಹಿಂದೆ ನಡೆದ ಅಧಿವೇಶನದ ಸಂದರ್ಭದಲ್ಲಿ ಊಟ, ವಸತಿಗೆ ಸಾಕಷ್ಟು ತೊಂದರೆ ಉಂಟಾಗಿತ್ತು. ಸರ್ಕಾರ ಅಧಿವೇಶನದ ಕರ್ತವ್ಯಕ್ಕೆ ಬಂದ ಪೊಲೀಸರಿಗೆ ಉತ್ತಮ ಗುಣಮಟ್ಟದ ಆಹಾರ ನೀಡುವ ನಿರ್ಧಾರವನ್ನು ಕೈಗೊಂಡಿದೆ.

ಚಳಿಗಾಲದ ಅಧಿವೇಶನದ ವೇಳೆ ಸರ್ಕಾರಕ್ಕೆ ಚಳಿ ಬಿಡಿಸಲು ಮಾದಿಗರು ಸಜ್ಜು

ಶಾಸಕರಿಗೆ ಮತ್ತು ಸಚಿವರಿಗೆ ಅಧಿವೇಶನದಲ್ಲಿ ರಾತ್ರಿ ಊಟ ಇಲ್ಲದಿದ್ದರೂ ಪೊಲೀಸರಿಗೆ ಯಾವುದೇ ರೀತಿಯ ಸಮಸ್ಯೆಯಾಗದ ರೀತಿಯಲ್ಲಿ ಅವರ ಆರೋಗ್ಯಕ್ಕೆ ಪೂರಕವಾಗುವಂತಹ ಆಹಾರ ಮತ್ತು ಕಡ್ಡಾಯವಾಗಿ ಬಿಸಿ ನೀರು, ಸುಸಜ್ಜಿತ ಶೌಚಾಲಯಗಳ ವ್ಯವಸ್ಥೆಗಳನ್ನು ಮಾಡಲಾಗಿದೆ.

police

ಈ ಹಿಂದಿನ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರಿಯಾದ ಆಹಾರ ಸಿಗದೇ ಪೊಲೀಸರು ಪರದಾಡಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಈ ಬಾರಿ ಉತ್ತಮ ವ್ಯವಸ್ಥೆ ಮಾಡಿದ್ದಾರೆ.

'ಚಳಿಗಾಲ ಅಧಿವೇಶನದ ಮೊದಲ ದಿನವೇ ರೈತರಿಂದ ಸುವರ್ಣ ಸೌಧಕ್ಕೆ ಮುತ್ತಿಗೆ'

ಈ ಬಾರಿ ಬೆಳಗಾವಿ ಅಧಿವೇಶನಕ್ಕೆ ಬರುವ ಕರ್ತವ್ಯದಲ್ಲಿರುವ ಪೊಲೀಸರು ನಿತ್ಯ ಬಿಸಿ ನೀರಿನ ಸ್ನಾನ ಮಾಡಲಿದ್ದಾರೆ. ಅಷ್ಟೆ ಅಲ್ಲ ಶುಚಿ-ರುಚಿಯಾದ ಆಹಾರ ಸೇವನೆ ಮಾಡಲಿದ್ದಾರೆ. ಚಪಾತಿ, ಅನ್ನ, ಬೆಳೆಯ ಸಾರು, ಉಪ್ಪಿನ ಕಾಯಿ ಸೇರಿದಂತೆ ಉತ್ತಮ ಗುಣಮಟ್ಟದ ಊಟವನ್ನು ಪೊಲೀಸರಿಗೆ ನೀಡಲಾಗುತ್ತದೆ.

ಮಹಾಮೇಳಾವಕ್ಕೆ ಮಹಾರಾಷ್ಟ್ರ ಸಚಿವರನ್ನು ಆಹ್ವಾನಿಸಿದ ಎಂಇಎಸ್

ಬೆಳಗಿನ ಉಪಹಾರವಾಗಿ ಉಪ್ಪಿಟ್ಟು, ಸಿರಾ, ಪೂರಿ ಭಾಜಿ ನೀಡಲಾಗುತ್ತದೆ. ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ಯಾವುದೇ ರೀತಿಯ ಉಟೋಪಚಾರದ ಕೊರತೆ ಎದುರಾಗದಂತೆ ವ್ಯವಸ್ಥೆ ಮಾಡಲಾಗಿದೆ.

ಈ ಹಿಂದೆ ನಡೆದ ಅಧಿವೇಶನಗಳಲ್ಲಿ ಕೆಲವು ಪೊಲೀಸರು ಅನಾರೋಗ್ಯದಿಂದ ಬಳಲಿದ್ದರು. ಈ ಬಾರಿ ಪೊಲೀಸ್ ಸಿಬ್ಬಂದಿಗೆ ದಿನದ 24 ಗಂಟೆಗಳ ಕಾಲವೂ ವೈದ್ಯಕೀಯ ನೆರವು ಒದಗಿಸಲು ವ್ಯವಸ್ಥೆ ಮಾಡಲಾಗಿದೆ.

ಮಂಡ್ಯ, ಮೈಸೂರು, ಕೊಡುಗು, ಶಿವಮೊಗ್ಗ, ಡಾವಣಗೆರೆ, ಬೆಂಗಳೂರು, ರಾಯಚೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬೆಳಗಾವಿ ಅಧಿವೇಶನಕ್ಕೆ ಬರಲಿರುವ ಹೊರ ಜಿಲ್ಲೆಯ ಎಲ್ಲ ಪೊಲೀಸರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka police will get good food and accommodation in Belagavi winter session. The winter session of the State legislature will be held at the Suvarna Soudha from November 13 for 10 days.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ