ಸುವರ್ಣಸೌಧದಲ್ಲಿ ಯು.ಟಿ.ಖಾದರ್ ಮಿಂಚಿನ ಕಾರ್ಯಾಚರಣೆ

Posted By:
Subscribe to Oneindia Kannada

ಬೆಳಗಾವಿ, ನವೆಂಬರ್ 21 : ಯಾರು ಏನಾದರೂ ಮಾಡಿಕೊಳ್ಳಲಿ 'ನಾನಾಯ್ತು ನನ್ನ ಕೆಲ್ಸ ಆಯ್ತು' ಅಂತಿರೋರು ಆಹಾರ ಪೂರೈಕೆ ಮತ್ತು ನಾಗರೀಕ ಸಚಿವ ಯು.ಟಿ.ಖಾದರ್. ತಮ್ಮ ಜೊತೆಗಾರ ಸಚಿವರು, ಶಾಸಕರು ಸದನದಲ್ಲಿ ಗದ್ದಲದಲ್ಲಿ ಮುಳುಗಿದ್ದಾಗ ಯು.ಟಿ.ಖಾದರ್ ಮಾತ್ರ ತಮ್ಮ ಕೆಲಸದಲ್ಲಿ ನಿರತರಾಗಿದ್ದರು.

ಸುವರ್ಣಸೌಧದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಯು.ಟಿ.ಖಾದರ್, ಆಡಳಿತ, ಪ್ರತಿಪಕ್ಷದ ಗ್ಯಾಲರಿಗೆ ರೈಡ್ ಮಾಡಿ ವಿಧಾನಸಭೆ, ವಿಧಾನಪರಿಷತ್ ಮೊಗಸಾಲೆಯ ಕ್ಯಾಂಟೀನ್ ಗಳನ್ನು ಪರಿಶೀಲಿಸಿದರು.

Belagavi : U.T.Khadar raids Suvarna soudha canteens

ಅಧಿಕ ಬೆಲೆಗೆ ಆಹಾರ ವಸ್ತುಗಳನ್ನು ಮಾರುತ್ತಿದ್ದ ಕ್ಯಾಂಟೀನ್ ಗಳಿಗೆ ಸ್ಥಳದಲ್ಲಿಯೇ ನೋಟೀಸ್ ನೀಡಿದರು.

ಮೊದಲಿಗೆ ಸಾರ್ವಜನಿಕರ ರೀತಿ ಕ್ಯಾಂಟೀನ್ ಗೆ ತೆರಳಿದ ಸಚಿವರು ಬಿಸ್ಕತ್ ಮತ್ತು ಆಹಾರ ಖರೀದಿಸಿದರು. ಎಂ.ಆರ್.ಪಿಯ ದುಪ್ಪಟ್ಟು ದರಕ್ಕೆ ಆಹಾರ ವಸ್ತುಗಳನ್ನು ಮಾರುತ್ತಿದ್ದ ಕ್ಯಾಂಟೀನ್ ನವರು ಸಚಿವರಿಗೂ ಅದೇ ಬೆಲೆಗೆ ಮಾರಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಯು.ಟಿ.ಖಾದರ್ ಸ್ಥಳದಲ್ಲಿಯೇ ಕ್ಯಾಂಟೀನ್ ಮಾಲೀಕರಿಗೆ ಛೀಮಾರಿ ಹಾಕಿ ಜೊತೆಗಿದ್ದ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಅಸಿಸ್ಟೆಂಟ್ ಫುಡ್ ಕಂಟ್ರೋಲ್ ಅಧಿಕಾರಿಯನ್ನು ಜೊತೆಗೆ ಕರೆದೊಯ್ದಿದ್ದ ಯು.ಟಿ.ಖಾದರ್ ಸುವರ್ಣಸೌಧದ ಒಳಗಿನ ಕ್ಯಾಂಟೀನ್ ನಲ್ಲಿ ತಯಾರಿಸಲಾಗುತ್ತಿರುವ ಆಹಾರದ ಗುಣಮಟ್ಟ ಪರೀಕ್ಷೆಯನ್ನೂ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Food minister U.T.Khadar raided on Suvarna soudha canteen and found canteens selling food products above the mrp price. immediately Khadas instructed officers to give notice to canteen owners.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ