ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯನ್ನು 2ನೇ ರಾಜಧಾನಿ ಮಾಡಿದ್ರು, ಸಂವಿಧಾನದ ಮಾನ್ಯತೆ ಸಿಗಲ್ಲ

|
Google Oneindia Kannada News

Recommended Video

ಬೆಳಗಾವಿಯನ್ನು 2ನೇ ರಾಜಧಾನಿ ಮಾಡಿದ್ರು, ಸಂವಿಧಾನದ ಮಾನ್ಯತೆ ಸಿಗಲ್ಲ | Oneindia Kannada

ಬೆಳಗಾವಿ, ಡಿಸೆಂಬರ್ 16: ಉತ್ತರ ಕರ್ನಾಟಕ ಜನತೆಯ ಬಹುದಿನಗಳ ಬೇಡಿಕೆ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ 12 ವರ್ಷಗಳ ಹಿಂದಿನ ಕನಸು ನನಸಾಗುವ ಸಮಯ ಈಗ ಬಂದಿದೆ. ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಡಿಸೆಂಬರ್ 19ರಂದು ಸದನದಲ್ಲಿ ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯಾಗಿ ಘೋಷಿಸುವ ಸಾಧ್ಯತೆಯಿದೆ ಎಂಬ ಸುದ್ದಿ ಬಂದಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈಗಾಗಲೇ ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಿಸುವ ಸಾಧಕ-ಬಾಧಕಗಳ ಕುರಿತು ಕಾನೂನು ತಜ್ಞರನ್ನು ಸಂಪರ್ಕಿಸಿ ಚರ್ಚಿಸಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಅವರ ಮಾಧ್ಯಮ ಕಾರ್ಯದರ್ಶಿ ಎಚ್ ಬಿ ದಿನೇಶ್ ಹೇಳಿದ್ದಾರೆ.

ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಶುಭಸುದ್ದಿ ಕೊಟ್ಟ ಕುಮಾರಸ್ವಾಮಿಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಶುಭಸುದ್ದಿ ಕೊಟ್ಟ ಕುಮಾರಸ್ವಾಮಿ

ಕಾನೂನಿನ ತಜ್ಞರ ಪ್ರಕಾರ, ಎರಡನೇ ರಾಜಧಾನಿಯಾಗಿ ಘೋಷಿಸಿದರೂ ಅದಕ್ಕೆ ಕಾನೂನಿನ ಮಾನ್ಯತೆ ಸಿಗುವುದಿಲ್ಲ. ಸಂವಿಧಾನದಲ್ಲಿ ಈ ರೀತಿ 2ನೇ ರಾಜಧಾನಿ ಘೋಷಣೆ ಮಾಡಲು ಯಾವುದೇ ಆಸ್ಪದವಿಲ್ಲ ಎಂದು ಹೇಳಿದ್ದಾರೆ.

ಬೆಳಗಾವಿಯನ್ನು ಎರಡನೇ ರಾಜಧಾನಿ ಬರೀ ಘೋಷಣೆ

ಬೆಳಗಾವಿಯನ್ನು ಎರಡನೇ ರಾಜಧಾನಿ ಬರೀ ಘೋಷಣೆ

ಕರ್ನಾಟಕ ಸರ್ಕಾರದ ಪಾಲಿಗೆ ಬಿಳಿಯಾನೆಯಂತಾಗಿರುವ ಸುವರ್ಣ ವಿಧಾನಸೌಧಕ್ಕೆ 450 ಕೋಟಿ ರುಗೂ ಅಧಿಕ ಖರ್ಚು ವೆಚ್ಚವಾಗಿದೆ. ಚಳಿಗಾಲದಲ್ಲಿ 10 ದಿನಗಳ ಅಧಿವೇಶನ, ರೈತರ ಪ್ರತಿಭಟನೆ ವರ್ಷದಿಂದ ವರ್ಷಕ್ಕೆ ಪುನರಾವರ್ತನೆಯಾಗುತ್ತಿದೆ. 12 ವರ್ಷಗಳ ಹಿಂದೆ ಬಿಜೆಪಿ-ಜೆಡಿಎಸ್ ಸರ್ಕಾರ ಮೊದಲಿಗೆ ಅಧಿಕಾರಕ್ಕೆ ಬಂದಾಗ, ಎಚ್ ಡಿ ಕುಮಾರಸ್ವಾಮಿ ಅವರು ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡುವುದಾಗಿ ಘೋಷಿಸಿದ್ದರು.

ಯಾವ ರೀತಿ ಘೋಷಣೆ ಎಂಬ ಕುತೂಹಲವಿದೆ

ಯಾವ ರೀತಿ ಘೋಷಣೆ ಎಂಬ ಕುತೂಹಲವಿದೆ

ಹೀಗಾಗಿ, ಡಿಸೆಂಬರ್ 19ರಂದು ಸುವರ್ಣ ಸೌಧದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಬೆಳಗಾವಿಯಲ್ಲಿ ಎರಡನೇ ರಾಜಧಾನಿಯನ್ನಾಗಿ ಬೆಳಗಾವಿಯನ್ನು ಅಂಗೀಕರಿಸಿದರೂ ಸದನದಲ್ಲಿ ಈ ಬಗ್ಗೆ ಯಾವುದೇ ಮಸೂದೆ ಮಂಡನೆ ಅಥವಾ ಅಧಿಕೃತ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿಲ್ಲ ಎಂದು ತಿಳಿದು ಬಂದಿದೆ.

ಸಚಿವಾಲಯ, ಅಧಿಕಾರ ವರ್ಗದಲ್ಲಿ ಗೊಂದಲ

ಸಚಿವಾಲಯ, ಅಧಿಕಾರ ವರ್ಗದಲ್ಲಿ ಗೊಂದಲ

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗುವಂತೆ ಕೆಲ ಇಲಾಖೆಗಳ ಕಚೇರಿಯನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸುವ ಕುರಿತು ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಈ ಬಗ್ಗೆ ಪ್ರತಿಕ್ರಿಸಿರುವ ಸಚಿವ ಸಂಪುಟ ಉಪ ಸಮಿತಿ ಮುಖ್ಯಸ್ಥ, ಕಂದಾಯ ಸಚಿವ ಆರ್ ವಿ ದೇಶಪಾಂಡೆ ಅವರು ಬೆಳಗಾವಿಗೆ ಸಚಿವಾಲಯ ಕಟ್ಟಡ ಒದಗಿಸುವ ಬಗ್ಗೆ ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಗೊಂದಲವಿದೆ.

ಎರಡು ರಾಜಧಾನಿ ಉದಾಹರಣೆ

ಎರಡು ರಾಜಧಾನಿ ಉದಾಹರಣೆ

ಮಹಾರಾಷ್ಟ್ರಕ್ಕೆ ಮುಂಬೈ, ನಾಗಪುರ(ಅನಧಿಕೃತ) ರಾಜಧಾನಿಯಾಗಿದ್ದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ಚಳಿಗಾಲದಲ್ಲಿ ಜಮ್ಮು ರಾಜಧಾನಿಯಾಗಿದ್ದರೆ, ಶ್ರೀನಗರವು ಬೇಸಿಗೆ ರಾಜಧಾನಿಯಾಗಿದೆ.

ಆದರೆ, ಮಿಕ್ಕಂತೆ ಒಂದೇ ರಾಜ್ಯಕ್ಕೆ ಎರಡು ರಾಜಧಾನಿಗಳಿಲ್ಲ. ಎರಡು ರಾಜ್ಯಕ್ಕೆ ಒಂದು ನಗರವನ್ನು ರಾಜಧಾನಿಯನ್ನು ಹಂಚಲಾಗಿದೆ. ಪಂಜಾಬ್ ಮತ್ತು ಹರ್ಯಾಣಕ್ಕೆ ಚಂಡೀಗಢ ಹಾಗೂ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಹೈದರಾಬಾದ್ ರಾಜಧಾನಿಯಾಗಿದೆ.

English summary
Karnataka chief minister H.D. Kumaraswamy announce the border city of Belagavi as the state’s second capital to help his party regain support in north Karnataka?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X