ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ರೈತನ ಶ್ವಾನದ ಗೋಳು ಸುವರ್ಣಸೌಧ ತಲುಪೀತೆ?

|
Google Oneindia Kannada News

ಬೆಳಗಾವಿ, ಜೂ. 03: ನಾಯಿಯ ನಿಯತ್ತು, ನಂಬಿಕೆಯ ಬಗ್ಗೆ ಹೊಸದಾಗಿ ಹೇಳುವುದು ಏನೂ ಉಳಿದಿಲ್ಲ. ದಕ್ಷ ಅಧಿಕಾರಿ ಡಿಕೆ ರವಿ ಸಾವನ್ನಪ್ಪಿದ್ದಾಗ ಅವರ ಮುದ್ದಿನ ನಾಯಿ ತನ್ನ ಮೂಕ ವೇದನೆಯನ್ನು ಯಾರ ಬಳಿಯೂ ಹೇಳಿಕೊಳ್ಳಲಾರದೇ ಕಣ್ಣೀರು ಸುರಿಸಿ ಎಂಥವರ ಕಲ್ಲು ಹೃದಯವನ್ನು ಮಿಡಿಯುವಂತೆ ಮಾಡಿತ್ತು.

ಇದೀಗ ಬೆಳಗಾವಿಯ ಅನ್ನದಾತನ ಸಾವನ್ನು ನೆನೆದು ಗೋಳಾಡುತ್ತಿರುವ ನಾಯಿಯ ಸಂಕಟದ ಕತೆ ಕೇಳಿ. ಬ್ಯಾಂಕ್ ನಿಂದ ಸಾಲ ವಸೂಲಾತಿ ಸಂಬಂಧ ನೋಟಿಸ್ ಪಡೆದುಕೊಂಡು ಕಂಗಾಲಾಗಿದ್ದ ಗೋಕಾಕ್ ತಾಲೂಕಿನ ಗಣೇಶವಾಡಿ ಗ್ರಾಮದ ರೈತ ಪರಸಪ್ಪ ಆತ್ಮಹತ್ಯೆಗೆ ಶರಣಾಗಿದ್ದರು.[ಡಿಕೆ ರವಿ ಮುದ್ದಿನ ನಾಯಿ ರೋನಿ ರೋದನಕ್ಕೆ ಸಿಕ್ಕಿಲ್ಲ ಉತ್ತರ]

dog

ಆಸ್ಪತ್ರೆಯಿಂದ ಪರಸಪ್ಪ ಅವರ ಪಾರ್ಥಿವ ಶರೀರವನ್ನು ಮನೆಗೆ ತಂದು ಮಣ್ಣು ಮಾಡಬೇಕೆಂದು ಕುಟುಂಬದವರು ಯೋಜಿಸುತ್ತಿರುವಾಗ ನಾಯಿ ನಡೆದುಕೊಂಡ ರೀತಿ ಎಂಥ ಸರ್ಕಾರದ ಕಣ್ಣನ್ನಾದರೂ ತೆರೆಸಲೇಬೇಕು.[ಪ್ರೀತಿಯ ಅರ್ಜುನ್ ವಿಧಿವಶ; ದು:ಖತಪ್ತ ಜಗ್ಗೇಶ್]

ಪರಸಪ್ಪನ ಪ್ರೀತಿಯ 'ಟುಬ್ಯಾ' ಅಂತಿಮ ವಿಧಿ ವಿಧಾನ ನಡೆದ ಜಾಗದಲ್ಲಿಯೇ ಕುಳಿತು ತನ್ನ ವೇದನೆ ಹೊರಹಾಕುತ್ತಿದೆ. ರೈತನ ಪಾರ್ಥೀವ ಶರೀರವನ್ನು ಕಂಡ ತಕ್ಷಣ ವಿಚಿತ್ರ ಸ್ವರದಲ್ಲಿ ಬೊಗಳಲು ಆರಂಭಿಸಿದೆ. ತನ್ನದೇ ಭಾಷೆಯಲ್ಲಿ ದುಖಃ ತೋಡಿಕೊಂಡಿದೆ. [ಬೆಳಗಾವಿ ಅಧಿವೇಶನ : ಸೋಮವಾರದ ಕಲಾಪದ ಮುಖ್ಯಾಂಶ]

ಪರಸಪ್ಪ ಭಾನುವಾರ ಸಂಜೆ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟಪ್ರಭಾ ಸಿಂಡಿಕೇಟ್ ಬ್ಯಾಂಕಿನಲ್ಲಿ 70 ಸಾವಿರ ರೂ. ಸ್ಥಳೀಯ ಅರ್ಬನ್ ಬ್ಯಾಂಕಿನಲ್ಲಿ ಒಂದು ಲಕ್ಷ ರೂ. ಸೇರಿದಂತೆ 2ಲಕ್ಷ ರೂ. ಹೆಚ್ಚು ಸಾಲ ಮಾಡಿಕೊಂಡಿದ್ದರು. ಪರಸಪ್ಪ 15 ಟನ್ ಕಬ್ಬು ಬೆಳೆದಿದ್ದು, ಸ್ಥಳಿಯ ಫ್ಯಾಕ್ಟರಿಗೆ ಕಳುಹಿಸಿದ್ದು ಅದರ ಬಿಲ್ ಬಂದಿರಲಿಲ್ಲ.

English summary
Belagavi: A heart-wrenching scene was witnessed by those present to pay last obeisance at Belagavi farmer Parasappa funeral. Sugarcane farmer Parasappa who commit suicide on July 5, night due to the financial crises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X