ಬೆಳಗಾವಿ: ಸ್ಕೇಟಿಂಗ್ ಕ್ಲಬಿನಲ್ಲಿ ಕಾಮದಾಟ, ಚಿತ್ರಗಳು ವೈರಲ್

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ನವೆಂಬರ್ 17: ಇಲ್ಲಿನ ಪ್ರತಿಷ್ಠಿತ ಶಿವಗಂಗಾ ಸ್ಕೇಟಿಂಗ್ ಕ್ಲಬ್ ಬೇಡದ ವಿಷಯಕ್ಕೆ ಸುದ್ದಿಯಾಗುತ್ತಿದೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸ್ಕೇಟರ್ ಗಳನ್ನು ರೂಪಿಸಿದ ಕೀರ್ತಿ ಈ ಕ್ಲಬ್ಬಿಗಿದೆ. ಈ ಬಗ್ಗೆ ಸುದ್ದಿ ಹರಿದಾಡಿ ಪೊಲೀಸ್ ಠಾಣೆಗೂ ತಲುಪಿದ್ದು, ಕೊನೆಗೂ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಡಿಯೋದಲ್ಲಿರುವುದು ನಾನಲ್ಲ ಎಂದ 'ಖತರ್ನಾಕ್' ನಟಿ

ಕ್ಲಬ್ ನ ಮಹಿಳಾ ವಸತಿ ಗೃಹದಲ್ಲಿ ಈ ಕಾಮದಾಟ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Belagavi : Shivaganga Roller Skating Club Owner's Son in video scandal

ಹಲವು ಕ್ರೀಡಾಕೂಟಗಳನ್ನು ಆಯೋಜಿಸಿದ ಈ ಕ್ಲಬ್ಬಿನ ಅಧ್ಯಕ್ಷೆಯ ಪುತ್ರ ಇದೇ ಕ್ಲಬ್ಬಿನಲ್ಲೆ ಕಾಮದಾಟದಲ್ಲಿ ತೊಡಗಿರುವ ಚಿತ್ರಗಳು ಬಹಿರಂಗವಾಗಿದೆ.

ಸುದ್ದಿ ಪ್ರಸಾರದ ವೇಳೆ ಇಣುಕಿದ 'ಕಾಮದಾಟ'

Belagavi : Shivaganga Roller Skating Club Owner's Son in video scam

ಶಿವಗಂಗಾ ಸ್ಕೇಟಿಂಗ್ ಕ್ಲಬ್ ಅಧ್ಯಕ್ಷೆ ಜ್ಯೋತಿ ಚಿಂಡಕ್ ಪುತ್ರನ ಕಾಮದಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ಅವರ ಖಾಸಗಿ ವಿಷಯವಾದರೂ, ದಿನನಿತ್ಯ ಸ್ಕೇಟಿಂಗ್ ಅಭ್ಯಾಸಕ್ಕೆ ಇಲ್ಲಿಗೆ ಹಿರಿಯ ಕಿರಿಯ ಕ್ರೀಡಾಪಟುಗಳು ಬರುತ್ತಾರೆ. ಈಗ ಈ ಚಿತ್ರಗಳನ್ನು ನೋಡಿ ಹಲವಾರು ಕ್ರೀಡಾಪಟುಗಳು ತಲೆತಗ್ಗಿಸಿದ್ದಾರೆ. ಕ್ಲಬ್ ನ ಹೆಸರು ಹಾಳಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಚಂದಾದಾರರಿಗಾಗಿ ಬೆತ್ತಲಾದ ಸ್ಟಾರ್ ಜೋಡಿ

Belagavi : Shivaganga Roller Skating Club Owner's Son in video scam

ಬೆಳಗಾವಿಯ ಹಳೆ ಪಿಬಿ ರಸ್ತೆ ಹತ್ತಿರದಲ್ಲಿರುವ ಸ್ಕೇಟಿಂಗ್ ಕ್ಲಬ್ಬಿನಲ್ಲೇ ಜ್ಯೋತಿ ಚಿಂಡಕ್ ಪುತ್ರ ಅನಿಕೇತನ್ ಅವರು ಯುವತಿಯೊಬ್ಬಳ ಜತೆ ಸರಸವಾಡುತ್ತಿರುವ ಚಿತ್ರಗಳು ಎಗ್ಗಿಲ್ಲದಂತೆ ವಾಟ್ಸಾಪ್ ನಲ್ಲಿ ಹಂಚಿಕೆಯಾಗುತ್ತಿದೆ. ದೇಶದ ಪ್ರತಿಷ್ಠಿತ ಸ್ಕೇಟಿಂಗ್ ಕ್ಲಬ್ಬಿನ ಮರ್ಯಾದೆ ಮಣ್ಣುಪಾಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Belagavi : Shivaganga Roller Skating Club Owner Jyothi Chindak's Son is allegedly involved sexual scandal. A video is becoming viral on Social networking sites in which Jyothi Chindak's Son seen with a young girl in the Skating club premises.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ