ಹಿಂಡಲಗಾ ಜೈಲಿನಿಂದ ಎಸ್ಕೇಪ್ ಪ್ಲಾನ್: ಬೆಳಗಾವಿ ಪೊಲೀಸರಿಂದ ತಪಾಸಣೆ

Posted By:
Subscribe to Oneindia Kannada

ಬೆಳಗಾವಿ, ಫೆಬ್ರವರಿ 3: ಹಿಂಜಲಗಾ ಜೈಲಿನಲ್ಲಿ ಬಂಧಿತನಾಗಿರುವ, ಭೂಗತ ದೊರೆ ರವಿ ಪೂಜಾರಿ ಬಂಟ ದಿನೇಶ್ ಶೆಟ್ಟಿಯನ್ನು ಅಲ್ಲಿಂದ ಪರಾರಿಯಾಗಿಸಲು ಆತನ ಸಹಚರರು ರೂಪಿಸಿದ್ದ ಯೋಜನೆಯ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸ್ ಅಧಿಕಾರಿಗಳು ಶುಕ್ರವಾರ ಜೈಲಿನ ತಪಾಸಣೆ ನಡೆಸಿದ್ದಾರೆ.

ಇತ್ತೀಚೆಗೆ, ಪೊಲೀಸರಿಗೆ ಸಿಕ್ಕಿಬಿದ್ದಿದ್ದ, ದಿನೇಶ್ ಶೆಟ್ಟಿಯ ಆಪ್ತರೆಂದು ಹೇಳಲಾದ ಆರು ಜನರು ದಿನೇಶ್ ಶೆಟ್ಟಿಯನ್ನು ಜೈಲಿನಿಂದ ಪರಾರಿಗೊಳಿಸುವ ಪ್ಲಾನ್ ಹಾಕಿದ್ದಾಗಿ ಪೊಲೀಸರ ಬಳಿ ಬಾಯಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಪಿ ಜಿ. ರಾಧಿಕಾ, ಅಮರ್ ನಾಥ ರೆಡ್ಡಿ, ಎಸಿಪಿ ಜಯ ಕುಮಾರ್ ಹಾಗೂ ಸಿಸಿಬಿ ನಿರೀಕ್ಷಕರಾದ ಬಿ.ಆರ್. ಗಡ್ಡೇಕರ್ ಅವರು ಜೈಲು ಹಾಗೂ ದಿನೇಶ್ ಶೆಟ್ಟಿ ಇರುವ ಸೆಲ್ ಅನ್ನು ತಪಾಸಣೆ ನಡೆಸಿದರು.

Belagavi police inspect Hindalga jail following shocking revelations on jail-break

ತಪಾಸಣೆ ವೇಳೆ, ದಿನೇಶ್ ಶೆಟ್ಟಿ ಬಳಿ ಮೊಬೈಲ್ ಫೋನ್ ಸಿಕ್ಕಿದ್ದು, ಅದನ್ನು ಜಪ್ತಿಗೊಳಿಸಲಾಗಿದೆ. ಈ ಮೊಬೈಲ್ ಫೋನ್ ಬಗ್ಗೆ ಇತ್ತೀಚೆಗೆ ಬಂಧಿಸಲ್ಪಟ್ಟಿರುವ ಆರು ಮಂದಿ ಯುವಕರು ಬಾಯಿಬಿಟ್ಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚಿತ್ರ ಕೃಪೆ: @allaboutbelgaum

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Belagavi district police visited Hindalga jail and inspected the cell of Dinesh Shetty, a close aide of Poojary. Recently arrested sharp-shooters had revealed that they were in Belagavi to make sure that Shetty escapes from the jail. The six had also revealed about the jail-break plan.
Please Wait while comments are loading...