ಬೆಳಗಾವಿಯ ಐನಾಕ್ಸ್ ಚಿತ್ರಮಂದಿರದ ಫುಡ್ ಕೋರ್ಟ್ ಬಂದ್

Posted By:
Subscribe to Oneindia Kannada

ಬೆಳಗಾವಿ, ಮೇ 18: ನಿಗದಿತ ದರಕ್ಕಿಂತ ಎರಡು ಪಟ್ಟು ಹೆಚ್ಚು ದರಕ್ಕೆ ನೀರನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬೆಳಗಾವಿಯ ಐನಾಕ್ಸ್ ಚಿತ್ರಮಂದಿರದ ಫುಡ್ ಕೋರ್ಟ್ ಮೇಲೆ ಗುರುವಾರ(ಮೇ 18) ಮಧ್ಯಾಹ್ನ ದಾಳಿ ಮಾಡಿ ಜಪ್ತಿ ಮಾಡಲಾಗಿದೆ.

ಸಹಾಯಕ ಆಯುಕ್ತೆ ಕವಿತಾ ಯೋಗಪ್ಪನವರ, ತಹಸೀಲ್ದಾರ ಗಿರೀಶ ಸ್ವಾಧಿ ನೇತೃತ್ವದ ತಂಡದಿಂದ ದಾಳಿ ನಡೆಸಿ, ಫುಡ್ ಕೋರ್ಟ್ ನಲ್ಲಿದ್ದ ಮಿನರಲ್ ವಾಟಲ್ ಬಾಟಲ್ ಗಳನ್ನು ಜಪ್ತಿ ಮಾಡಿ, ಫುಡ್ ಕೋರ್ಟ್ ಬಂದ್ ಮಾಡಿಸಿದ್ದಾರೆ.

ಮುಖ್ಯ ಅಂಚೆ ಕಚೇರಿ ಬಳಿ ಇರುವ ಐನಾಕ್ಸ್ ಮಾಲ್ ಚಂದನ್ ನಲ್ಲಿರುವ ಫುಡ್ ಕೋರ್ಟ್ ನಲ್ಲಿ 20 ರೂಪಾಯಿ ಮೌಲ್ಯದ ಕಿನ್ಲೇ ನೀರಿನ ಬಾಟಲ್ ‌ಗೆ 50 ರೂ. ಪಡೆಯುತ್ತಿದ್ದರು. ಈ ಬಗ್ಗೆ ಡಿಸಿ ಎನ್‌. ಜಯರಾಮ ಅವರಿಗೆ ಸಾರ್ವಜನಿಕರು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಗ್ರಾಹಕರ ಸೋಗಿನಲ್ಲಿ ದಿಢೀರ್‌ ದಾಳಿ ನಡೆಸಿ ಪರೀಶಿಲನೆ ನಡೆಸಿ, ಮಾಲ್ ನ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ನೀರಿನ ಬಾಟಲಿಗಳನ್ನು ಜಪ್ತಿ ಮಾಡಿದ್ದಾರೆ. ಆದರೆ, ಸಿನಿಮಾ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಪಡಿಸಿಲ್ಲ ಎಂದು ತಿಳಿದು ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Belagavi : Inox Cinemas Food court seized by AC Kavita Yogappannavar Team for selling water bottles with high price rate.
Please Wait while comments are loading...