ಬೆಳಗಾವಿ: ಹೆಣ್ಣು ಮಗುವೆಂದು ಒತ್ತಾಯಪೂರ್ವಕ ಗರ್ಭಪಾತ ಮಾಡಿಸಿದ ಗಂಡ

Subscribe to Oneindia Kannada

ಬೆಳಗಾವಿ, ಜುಲೈ 16: ಹೆಣ್ಣು ಮಗು ಎಂಬ ಕಾರಣಕ್ಕೆ ಹೆಂಡತಿಯ ಒಪ್ಪಿಗೆಯೂ ಪಡೆಯದೆ ಗಂಡನೊಬ್ಬ ಗರ್ಭಪಾತ ಮಾಡಿಸಿದ್ದಾನೆ. ಇದೀಗ ಆತನ ವಿರುದ್ಧ 'ಹೆಣ್ಣು ಭ್ರೂಣ ಹತ್ಯೆ' ದೂರು ದಾಖಲಾಗಿದ್ದು ತಲೆಮರೆಸಿಕೊಂಡಿದ್ದಾನೆ.

ಶುಕ್ರವಾರ ಗರ್ಭಿಣಿ ಹೆಂಡತಿಯನ್ನು ಇಲ್ಲಿನ ನಿವಾಸಿ ಸಿದ್ದಪ್ಪ ಚರಗಾಣವಿ ಚೆಕ್ ಅಪ್ ಮಾಡಿಸಲೆಂದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ. ಈ ವೇಳೆ ಆಕೆಗೆ ಹೆಣ್ಣು ಮಗುವಾಗಲಿದೆ ಎಂದು ಗೊತ್ತಾಗಿದ್ದೇ ತಡ ನಂತರ ಚಿಕಿತ್ಸೆಗೆಂದು ಹೇಳಿ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ.

 Belagavi: Husband forcefully aborts wife’s girl baby

ಸ್ಪಂದನ ಆಸ್ಪತ್ರೆ ಸೇರಿದ ಆತನ ಪತ್ನಿಗೆ ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಲಾಗಿದೆ. ಆಕೆಯ ಒಪ್ಪಿಗೆಯನ್ನೂ ಪಡೆಯದೆ, ಆಕೆಗೆ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ವೈದ್ಯ ಸುಭಾಷ್ ಪಾಟೀಲ್ ಮತ್ತು ಸಿಬ್ಬಂದಿಗಳು ಆಕೆಗೆ ಗರ್ಭಪಾತ ಮಾಡಿಸಿದ್ದಾರೆ.

ತನಗೆ ಗರ್ಭಪಾತ ಮಾಡಿಸಿದ್ದು ಆಕೆಯ ಗಮನಕ್ಕೆ ಬರುತ್ತಿದ್ದಂತೆ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಪತ್ನಿಯ ದೂರು ಸಲ್ಲಿಸುತ್ತಿದ್ದಂತೆ ಗಂಡ ಹಾಗೂ ಗರ್ಭಪಾತ ಮಾಡಿಸಿದ ವೈದ್ಯರು ಇಬ್ಬರೂ ನಾಪತ್ತೆಯಾಗಿದ್ದಾರೆ.

A Six Year Old Girl Fell Into A Bore Well, Minister Gives An Irresponsible Answer | Oneindia Kannada

ಇನ್ನು ಕಳೆದ ಮಾರ್ಚ್ ನಲ್ಲಿ ಬೆಳಗಾವಿಯಲ್ಲಿ ಕಾರ್ಯಚರಿಸುತ್ತಿದ್ದ ಅಬಾರ್ಷನ್ ರಾಕೆಟನ್ನು ಪೊಲೀಸರು ಭೇದಿಸಿದ್ದರು. ಈ ವೇಳೆ ಇಲ್ಲಿನ ಚರಂಡಿಯಲ್ಲಿಗರ್ಭಪಾತ ಮಾಡಿದ 19 ಭ್ರೂಣಗಳು ಪತ್ತೆಯಾಗಿದ್ದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The wife, who was pregnant with a girl child, was aborted of pregnancy by her husband. This, without the knowledge of the woman. After the incident happened on Friday, she filed a complaint with the police. Based on the wife's complaint, the Belagavi police subsequently booked her husband Siddappa for female feoticide. However, Siddappa and the doctor are reportedly at large.
Please Wait while comments are loading...