ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಾದಾತ್ಮಕ ಹೇಳಿಕೆ ನೀಡಿದ್ದ ಬೆಳಗಾವಿ ಶಾಸಕರ ವಿರುದ್ಧ FIR ದಾಖಲು

|
Google Oneindia Kannada News

ಬೆಳಗಾವಿ, ಏಪ್ರಿಲ್ 20: ಕೋಮುಗಲಭೆಗೆ ಪ್ರಚೋದನೆ ನೀಡುವಂಥ ಹೇಳಿಕೆ ನೀಡಿದ್ದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ಇದು ಹಿಂದೂ-ಮುಸ್ಲಿಮರ ನಡುವಿನ ಚುನಾವಣೆ: ಬಿಜೆಪಿಯ ಸಂಜಯ್ ಪಾಟೀಲ್ ವಿವಾದಇದು ಹಿಂದೂ-ಮುಸ್ಲಿಮರ ನಡುವಿನ ಚುನಾವಣೆ: ಬಿಜೆಪಿಯ ಸಂಜಯ್ ಪಾಟೀಲ್ ವಿವಾದ

ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ನಿನ್ನೆ(ಏ.19) ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

"ಕರ್ನಾಟಕ ವಿಧಾನಸಭೆ ಚುನಾವಣೆ ರಸ್ತೆ, ಚರಂಡಿ, ಕುಡಿಯುವ ನೀರಿಗಾಗಿ ನಡೆಯುತ್ತಿಲ್ಲ. ಇದು ಹಿಂದು-ಮುಸ್ಲಿಮರ ನಡುವಿನ ಚುನಾವಣೆ, ರಾಮ ಮಂದಿರ-ಬಾಬ್ರಿ ಮಸೀದಿ ನಡುವಿನ ಚುನಾವಣೆ" ಎಂದು ತಮ್ಮ ಭಾಷಣದ ಸಮಯದಲ್ಲಿ ಪಾಟೀಲ್ ಹೇಳಿಕೆ ನೀಡಿದ್ದರು.

Belagavi: FIR against BJP MLA for Hindu Vs Muslim remark

"ನಾನು ಸಂಜಯ್ ಪಾಟೀಲ್, ನಾನು ಹಿಂದು. ಇದು ಹಿಂದು ರಾಷ್ಟ್ರ ಮತ್ತು ನಾವು ರಾಮ ಮಂದಿರವನ್ನು ಕಟ್ಟಲು ಇಚ್ಛಿಸಿದ್ದೇವೆ" ಎಂದು ಅವರು ಮಾಡಿದ್ದ ಭಾಷಣ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಮೇ 12 ರಂದು ನಡೆಯಲಿರುವ ಕರ್ನಾಟಕ ಚುನಾವಣೆಗೆ ಬೆಳಗಾವಿಯ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಅವರಾಗಿದ್ದು, ಅವರು ಚುನಾವಣೆಗೆ ನಿಲ್ಲದಂತೆ ನಿರ್ಬಂಧ ಹೇರಬೇಕೆಮದು ಒತ್ತಾಯಿಸಲಾಗಿದೆ. ಭಾರತೀಯ ದಂಡ ಸಂಹಿತೆಯ 253a, 259 A ಸೆಕ್ಷನ್ ಅಡಿಯಲ್ಲಿ ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

English summary
An FIR was registered against Karnataka Bharatiya Janata Party (BJP) MLA Sanjay Patil on Friday on charges of delivering a provocative speech in Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X