ಬೆಳಗಾವಿ: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ ಹತ್ಯೆ, ಆರೋಪಿ ಬಂಧನ

Posted By:
Subscribe to Oneindia Kannada

ಬೆಳಗಾವಿ, ಡಿಸೆಂಬರ್ 6: ಲೈಂಗಿಕ ಕ್ರಿಯೆಗೆ ನಿರಾಕರಿಸಿ ಮಹಿಳೆಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಖದೀಮನನ್ನು ಕೊನೆಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪೊಲೀಸರು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ: ವರದಕ್ಷಿಣೆಗಾಗಿ ಬಲಿಯಾಯ್ತು ಒಂದು ವರ್ಷದ ಹಸುಳೆ

ಬೈಲಹೊಂಗಲ ತಾಲೂಕಿನ ತಿಗಡೋಳ್ಳಿ ಗ್ರಾಮದ ತಮ್ಮಣ್ಣ ಮಹಾದೇವ ಕರಡಿ ಬಂಧಿತ ಆರೋಪಿ. ಅಕ್ಟೋಬರ್ 13ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಳಿಹೊಸುರ ಗ್ರಾಮದ ಹೊರವಲಯದಲ್ಲಿ ಹಿರೇಹಟ್ಟಿಹೊಳಿ ಗ್ರಾಮದ ರೇಣುಕಾ ಸಹದೇವ ಕಣಬುರಗಿ (30) ಕೊಲೆಯಾಗಿತ್ತು.

Belagavi district Bylahongala Police finally arrested a man for woman murder case

ಕೊಲೆ ಮಾಡಿ ಪರಾರಿಯಾದ ಆರೋಪಿಯು ಮಹಿಳೆಯ ಮೊಬೈಲ್ ಉಪಯೋಗಿಸುತ್ತಿದ್ದ ಆಧಾರದ ಮೇಲೆ ಅರೋಪಿಯನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ.

ಪತ್ನಿಯನ್ನು ಕೊಂದು ಆಸ್ಪತ್ರೆ ಆವರಣದಲ್ಲಿ ಶವ ಬಿಸಾಡಿದ ಪತಿ

ಅಕ್ಟೋಬರ್ 13ರಂ ರಾತ್ರಿ ಎಂ.ಕೆ. ಹುಬ್ಬಳ್ಳಿ ಗ್ರಾಮದಿಂದ ಬೈಲಹೊಂಗಲಕ್ಕೆ ಹಾಲಿನ ವಾಹನದಲ್ಲಿ ಡ್ರಾಪ್ ಕೊಡುವಾಗ ಲೈಂಗಿಕ ಕ್ರಿಯೆ ಯತ್ನಿಸಿದ್ದಾನೆ. ಆದರೆ, ರೇಣುಕಾ ಇದಕ್ಕೆ ನಿರಾಕರಿಸಿದಕ್ಕೆ ಹತ್ಯೆಗೈದು ತಲೆಮರೆಸಿಕೊಂಡಿದ್ದ. ಈ ಬಗ್ಗೆ ಬೈಲಹೊಂಗಲ ಪೊಲೀಸರು ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

24 ಲಕ್ಷ ರು ದರೋಡೆ: ಕಣ್ಣಿಗೆ ಕಾರದ ಪುಡಿ ಎರಚಿ 24 ಲಕ್ಷ ರೂಪಾಯಿ ಹಣ ದೋಚಿ ಪರಾರಿಯಾಗಿರುವ ಘಟನೆ ಮಂಗಳವಾರ ತಡರಾತ್ರಿ ಬೆಳಗಾವಿ ನಗರದ ಸಾಗರ ಹೋಟೆಲ್ ಬಳಿ ನಡೆದಿದೆ.

ತುಮಕೂರು ಮೂಲದ ನಾರಾಯಣ ಮುದ್ದಪ್ಪ ಎಂಬ ವ್ಯಕ್ತಿಯ ಹಣ ದೊಚಿದ ಖದಿಮರು. ಹೂವಿನ ವ್ಯಾಪಾರದ ಕಲೆಕ್ಷನ್ ಗೆ ಬೆಳಗಾವಿಗೆ ಬಂದಿದ್ದ ನಾರಾಯಣ ಮುದ್ದಪ್ಪನಿಗೆ ಖದೀಮರು ಚಾಕು ತೋರಿಸಿ ಕಣ್ಣಿಗೆ ಖಾರದ ಪುಡಿ ಎರಚಿ ಹಣದ ಬ್ಯಾಗನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ

ಈ ಬಗ್ಗೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Belagavi district Bylahongala Police finally arrested a man for woman murder case. The woman murder on 2017 October 13 in Holihosur village Bylahongala taluk Belagavi district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ