ಬೆಳಗಾವಿ : ಉಗ್ರ ರೂಪ ತಾಳಿದ ಪಾಲಿಕೆ ಸದಸ್ಯೆ ಸರಳಾ

Posted By:
Subscribe to Oneindia Kannada

ಬೆಳಗಾವಿ, ನವೆಂಬರ್ 28 : ಇಂದು(ನವೆಂಬರ್ 28)ರಂದು ನಡೆದ ಬೆಳಗಾವಿ ಪಾಲಿಕೆ ಸಭೆಯಲ್ಲಿ ನಗರ ಸೇವಕಿ ಸರಳಾ ಹೇರೇಕರ ಅವರು ಪಾಲಿಕೆ ಸದಸ್ಯರ ಬೆವರಿಳಿಸಿದರು.

ಪಾಲಿಕೆಯನ್ನು ರಣರಂಗವೆಂದು ಭಾವಿಸಿದಂತೆ ಯುದ್ಧೋತ್ಸಾಹದಲ್ಲಿ ಮಾತನಾಡಿದ ಅವರು ಮೇಯರ್ ಮಾತಿಗೂ ಬಗ್ಗದೆ ಪಾಲಿಕೆಯ ಭ್ರಷ್ಟಾಚಾರದ ಮೇಲೆ ತಮ್ಮ ಮಾತಿ ಬಾಣಗಳನ್ನೇ ಎಸೆಯುತ್ತಲೇ ಹೋದರು.

ಹೊಸ ಪಕ್ಷ ಸ್ಥಾಪನೆಗೆ ಮುಂದಾದ ವರ್ತೂರು ಪ್ರಕಾಶ್

ಪಾಲಿಕೆಯ ಕೆಲವು ಸದಸ್ಯರು ಚಂದೀಗಡ್ ಪ್ರವಾಸ ಹೋಗಿ ಬಂದು ಆ ಬಗ್ಗೆ ಸಭೆಯಲ್ಲಿ ವಿವರಣೆ ನೀಡುತ್ತಿದ್ದರು. ಇದರಿಂದ ಕೆರಳಿದ ಸರಳಾ ಅವರು ನಗರ ಸೇವಕರು ಅದ್ಯಯನ ಪ್ರವಾಸಕ್ಕೆ ಹೋಗಿದ್ದು ತಪ್ಪು ಟೂರ್ ಮಾಡಿ ಪಾಲಿಕೆ ಹಣವನ್ನು ಪೋಲು ಮಾಡಿದ್ದೀರಾ ನಿಜವಾಗಿಯೂ ಅಧಿಕಾರಿಗಳು ಅಧ್ಯಯನ ಪ್ರವಾಸ ಮಾಡಬೇಕಾಗಿತ್ತು ಎಂದು ಕೂಗಾಡಿದರು.

Belagavi corporater Sarala Herekara rage in corporation meeting

ನಗರದ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಅನುದಾನ ಬರುತ್ತಿದೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದ ತಿಂಗಳಲ್ಲೇ ರಸ್ತೆ ಗುಂಡಿಗಳು ಕಾಣಿಸುತ್ತಿವೆ ಅದನ್ನು ತುಂಬಲು ಮತ್ತಷ್ಟು ದುಡ್ಡು ಖರ್ಚು ಮಾಡಲಾಗುತ್ತದೆ ಎಂದು ಸರಳಾ ಹೇರೇಕರ ಅದ್ಯಯನ ಪ್ರವಾಸ ಮಾಡಿದ ನಗರ ಸೇವಕರನ್ನು ಕಳಪೆ ಕಾಮಗಾರಿಗಳನ್ನು ನೋಡಿಯೂ ಮೌನ ವಹಿಸಿರುವ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಉದ್ಧವ ಠಾಕ್ರೆ ಹೇಳಿಕೆ ಖಂಡಿಸಿ ಕರವೇ ಬೆಳಗಾವಿಯಲ್ಲಿ ಪ್ರತಿಭಟನೆ

ತಮ್ಮ ಕುರ್ಚಿಯಿಂದ ಎದ್ದು ಮೇಯರ್ ಕೂತಿದ್ದ ವೇದಿಕೆ ಕಡೆ ನುಗ್ಗಿದ ಸರಳಾ ಅವರು ಅಲ್ಲಿ ಕುಳಿತಿದ್ದ ಟೂರ್ ಹೋಗಿ ಬಂದ ಶಾಸಕರನ್ನು ಹೀನಾ ಮಾನ ಬೈದರು.

ಸರಳಾ ಹೇರೇಕರ ಅವರನ್ನು ಮಹಾಪೌರ ಮತ್ತು ಉಪಮಹಾಪೌರ ಕುಳಿತುಕೊಳ್ಳುವಂತೆ ಸೂಚಿಸಿದಾಗ ಅದಕ್ಕೂ ಆಕ್ರೋಶ ವ್ಯಕ್ತಪಡಿಸಿದ ಸರಳಾ ಹೇರೇಕರ 'ನಾನೇನು ನಿಮ್ಮ ಹಾಗೆ ಮೇಯರ್ ಗೆ ಚಪ್ಪಲಿ ಬಳಿ ತೋರಿಸುತ್ತಿಲ್ಲ ನನ್ನ ಅಳಲು ತೋಡಿಕೊಂಡಿದ್ದೇನೆ ಪಾಲಿಕೆಯಲ್ಲಿ ನಡೆಯುತ್ತಿರುವ ಅಂದಾ ದರ್ಬಾರ್ ನೋಡಿ ಸುಮ್ಮನೇ ಕುಳಿತುಕೊಳ್ಳುವ ಹೆಣ್ಣು ನಾನಲ್ಲ' ಎಂದು ಸರಳಾ ಹೇರೇಕರ ಪ್ರತ್ತ್ಯುತ್ತರ ನೀಡಿ ಎಲ್ಲರ ಗಮನ ಸೆಳೆದರು.

ಸರಳಾ ಅವರ ವಾಗ್ದಾಳಿಯಿಂದ ಮೇಯರ್ ಕೂಡ ಬಚಾವ್ ಆಗಲು ಸಾಧ್ಯವಾಗದೆ, ಅವರೇ ಕೈಚೆಲ್ಲಿ ಸುಮ್ಮನಾದರು.

ಮೊದಲಿಗೆ ಮರಾಠಿ ಭಾಷೆಯಲ್ಲಿ ಟೀಕಾಸ್ತ್ರ ಬಿಡುತ್ತಿದ್ದ ಸರಳಾ ಅವರು ನಂತರ ಕನ್ನಡಕ್ಕೆ ಹೊರಳಿಕೊಂಡರು. ತಮ್ಮ ಪಕ್ಷದ ಸದಸ್ಯರು, ವಿರೋಧ ಪಕ್ಷದ ಸದಸ್ಯರು ಯಾರು ಬಂದು ಹೇಳಿದರು ಸುಮ್ಮನಾಗದ ಸರಳಾ ಒಂದೇ ಸಮನೆ ಜೋರು ಧ್ವನಿಯಲ್ಲಿ ಪಾಲಿಕೆಯಲ್ಲಿ ಅರಾಜಕತೆಗಳ ಬಗ್ಗೆ ಕೂಗಾಡಿದರು.

ಇದ್ದಕ್ಕಿಂದ್ದಂತೆ ಕರೆಂಟ್ ಹೋಗಿ (ಬೇಕೆಂದೇ ತೆಗೆದರೋ ಗೊತ್ತಿಲ್ಲ) ಸಭೆಯಲ್ಲಿ ಕತ್ತಲು ಆವರಿಸಿದಾಗ ಸರಳಾ ಅವರು ಶಾಂತರಾದರು. ಅಷ್ಟು ಹೊತ್ತಿನಿಂದ ಕೂಗಾಡುತ್ತಿದ್ದ ಸರಳಾ ಅವರು ಸುಮ್ಮನೆ ಕುರ್ಚಿಗೆ ಅಂಟುಕೊಂಡು ಕೂತರು.

ಸರಳಾ ಅವರ ಪ್ರಹಸನ ನೋಡಿ ಸಾಕಾಗಿದ್ದ ಪಾಲಿಕೆ ಇತರ ಸದಸ್ಯರು ಪುಣ್ಯಕ್ಕೆ ಕರೆಂಟ್ ಹೋಯಿತಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In Belagavi Corporation meeting corporate Sarala Herekara shows rage on fellow corporaters. she showts in big voice about some corporaters corruption and creat mess.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ