ಲಿಂಗಾಯತಕ್ಕೆ ಧರ್ಮಕ್ಕಾಗಿ ಆಗಸ್ಟ್ 22ರಂದು ‘ಬೆಳಗಾವಿ ಚಲೋ’ ಮಹಾರ‍್ಯಾಲಿ

Subscribe to Oneindia Kannada

ಬೆಳಗಾವಿ, ಆಗಸ್ಟ್ 20: ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಮಂಗಳವಾರ ಅಂದರೆ ಆಗಸ್ಟ್ 22ರಂದು ಬೆಳಗಾವಿ ನರದಲ್ಲಿ 'ಬೆಳಗಾವಿ ಚಲೋ- ಮಹಾರ್ಯಾಲಿ' ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 11ಕ್ಕೆ ಆಯೋಜಿಸಿರುವ ರ್ಯಾಲಿಯಲ್ಲಿ 5ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ನಾಗನೂರ ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ಹೇಳಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವಿರೋಧಿಸಿ ಟಿ ನರಸೀಪುರದಲ್ಲಿ ಪ್ರತಿಭಟನೆ

ಭಾನುವಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, "ರ‍್ಯಾಲಿ ಬೇಕಾದ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ರ್ಯಾಲಿಯಲ್ಲಿ ಎಲ್ಲಾ ಪಕ್ಷದ ಜನಪ್ರತಿನಿಧಿಗಳು, ಮಠಾಧೀಶರು ಭಾಗವಹಿಸಲಿದ್ದಾರೆ," ಎಂದು ತಿಳಿಸಿದ್ದಾರೆ.

'Belagavi Chalo', Massive Rally For Independent Lingayat Religion on Aug 22

ಇಲ್ಲಿನ ಲಿಂಗರಾಜು ಆವರಣದಿಂದ ಮೆರವಣಿಗೆ ಆರಂಭವಾಗಲಿದ್ದು ಕಾಲೇಜು ರಸ್ತೆ ಸಾಗಿ ನಗರದ ಕೇಂದ್ರ ಭಾಗದಲ್ಲಿರುವ ರಾಣಿ ಚನ್ನಮ್ಮ ವೃತ್ತದಲ್ಲಿ ಕೊನೆಗೊಳ್ಳಲಿದೆ. ಅಲ್ಲಿ ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಮನವಿ ಸಲ್ಲಿಸಲಾಗುತ್ತದೆ ಎಂದು ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

In Pics : ಪ್ರತೇಕ ಧರ್ಮಕ್ಕಾಗಿ ಬೆಳಗಾವಿಯಲ್ಲಿ ಬೃಹತ್ ಲಿಂಗಾಯತ ಸಮಾವೇಶ

ರ್ಯಾಲಿಗೆ ರಾಜ್ಯದವರಲ್ಲದೆ, ಪಕ್ಕದ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಿಂದಲೂ ಲಿಂಗಾಯತ ಸಮಾಜದವರ ಭಾಗವಹಿಸುವ ನಿರೀಕ್ಷೆ ಇದೆ.

'Belagavi Chalo', Massive Rally For Independent Lingayat Religion on Aug 22

ಇದೇ ವೇಳೆ ಅವರು, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ರ್ಯಾಲಿ ನಡೆಸಿ ಅಂತಿಮವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 20ರಿಂದ 25 ಲಕ್ಷ ಜನರ ಬೃಹತ್ ರ‍್ಯಾಲಿ ನಡೆಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"'Belagavi Chalo’, massive rally was organised on Tuesday, August 22 at Belagavi for recognition of the independent Lingayat religion. Over 5 lakh people will attend the rally held at 11 am, Siddarama Swamiji of Nagnur Rudrakshi matt said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ