ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ: 22 ಗ್ರಾಮಗಳಿಗೆ ನೀರುಣಿಸುವ ಬಸವೇಶ್ವರ ಏತ ನೀರಾವರಿಗೆ ಚಾಲನೆ

By Sachhidananda Acharya
|
Google Oneindia Kannada News

ಬೆಳಗಾವಿ, ಜೂನ್ 30: ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮದಬಾವಿ ಗ್ರಾಮದಲ್ಲಿ ರೂ.1300 ಕೋಟಿ ವೆಚ್ಚದ ಬಸವೇಶ್ವರ (ಕೆಂಪವಾಡ) ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.

ಈ ಬಸವೇಶ್ವರ ಏತ ನೀರಾವರಿ ಯೋಜನೆಯಡಿ ಹಿಪ್ಪರಗಿ ಬ್ಯಾರೇಜ್ ನಿಂದ 4 ಟಿಎಂಸಿ ನೀರನ್ನು 68000 ಎಕರೆ ಕೃಷಿ ಭೂಮಿಗೆ ಒದಗಿಸಲಾಗುತ್ತದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕಾಗವಾಡದ 22 ಗ್ರಾಮಗಳಿಗೆ ಇದರಿಂದ ಉಪಯೋಗವಾಗಲಿದೆ.

Belagavi: Basaveshwara lift irrigation project begins

ಬಸವೇಶ್ವರ (ಕೆಂಪವಾಡ) ಏತ ನೀರಾವರಿ ಯೋಜನೆಯಡಿ ಅಥಣಿ ತಾಲ್ಲೂಕಿನ ಐನಾಪುರ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ 4.0 ಟಿಎಂಸಿ ನೀರನ್ನು ಮಳೆಗಾಲದಲ್ಲಿ ಬಳಸಿಕೊಂಡು, ಮಳೆಯ ಆಸರೆಯಿಲ್ಲದೆ ಬರಗಾಲದಿಂದ ತತ್ತರಿಸಿರುವ 22 ಗ್ರಾಮಗಳ 67,859 ಎಕರೆ ಜಮೀನಿಗೆ ನೀರು ಹರಿಸಲಾಗುತ್ತದೆ.

ಈ ಯೋಜನೆಯಿಂದ ಮದಭಾವಿ, ಹಣಮಾಪೂರ, ತೆವರಟ್ಟಿ, ಜಂಬಗಿ, ಅರಳಟ್ಟಿ, ಬೊಮ್ಮನಾಳ, ಸಂಬರಗಿ, ಕಲ್ಲೂತಿ, ಶಿವನೂರ, ಮಸರಗುಪ್ಪಿ, ಶಿರೂರ, ಪಾಂಡೇಗಾಂವ, ಖಿಳೇಗಾಂವ, ಅಜೂರ, ನಾಗನೂರ ಪಿ.ಎ, ತಾಂವಶಿ, ಕಿರಣಗಿ, ಬೇವನೂರ, ಅನಂತಪೂರ, ಮಲಾಬಾದ, ಬಳ್ಳಿಗೇರಿ, ಗುಂಡೇವಾಡಿ ಗ್ರಾಮಗಳು ನೀರಾವರಿ ಪಡೆಯಲಿವೆ.

English summary
Chief minister Siddarmaiah gives kick start to Basaveshwara lift irrigation project in Madabavi of Athani talluk, Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X