ಬೆಳಗಾವಿ : ನಡು ರಸ್ತೆಯಲ್ಲಿ ಸಿಲಿಂಡರ್ ಸ್ಫೋಟ, 1 ಸಾವು

Posted By:
Subscribe to Oneindia Kannada

ಬೆಳಗಾವಿ, ಫೆಬ್ರವರಿ 16 : ಆಟೋದಲ್ಲಿ ಸಾಗಣೆ ಮಾಡುತ್ತಿದ್ದ ಸಿಲಿಂಡರ್ ಸ್ಫೋಟಗೊಂಡು ಬೈಕ್ ಸವಾರ ಮೃತಪಟ್ಟು, 15 ಜನರು ಗಾಯಗೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

ಮಂಗಳವಾರ ಸಂಜೆ ಶಿವಾಜಿ ಗಾರ್ಡ್‌ನ್ ಸಮೀಪ ಟಾಟಾ ಏಸ್ ವಾಹನದಲ್ಲಿ ಸಾಗಣೆ ಮಾಡುತ್ತಿದ್ದ ವಾಣಿಜ್ಯ ಬಳಕೆಯ ಸಿಲಿಂಡರ್ ರಸ್ತೆಯಲ್ಲಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ವಾಹನದ ಸಮೀಪ ಹೋಗುತ್ತಿದ್ದ ಬೈಕ್ ಸವಾರ ಮೃತಪಟ್ಟಿದ್ದಾರೆ. [LPG ಬಳಕೆದಾರರು ಆದಾಯ ತೆರಿಗೆ ಲೆಕ್ಕ ಕೊಡಬೇಕು]

ಸ್ಫೋಟದಿಂದಾಗಿ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನ ಗಾಜು ಮತ್ತು ಸುತ್ತಮುತ್ತಲಿನ ಕಟ್ಟಡಗಳ ಗಾಜುಗಳು ಒಡೆದಿದ್ದು, 15 ಜನರು ಗಾಯಗೊಂಡಿದ್ದಾರೆ. ಟಾಟಾ ಏಸ್ ವಾಹನದಿಂದ ಕೆಲವೇ ಅಂತರದಲ್ಲಿ ಸಂಚರಿಸುತ್ತಿದ್ದ ಕಾರಿನಲ್ಲಿದ್ದ ಐವರು ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. [ಹೊಸದಾಗಿ LPG ಸಂಪರ್ಕ ಪಡೆಯುವುದು ಹೇಗೆ?]

ಬೆಳಗಾವಿ ನಗರ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾಹನದಲ್ಲಿ ರಾಸಾಯನಿಕಗಳನ್ನು ಸಾಗಿಸುವುದಕ್ಕೆ ಅನುಮತಿ ಪಡೆಯಲಾಗಿತ್ತೆ ಎಂದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Atleast two have been feared dead due to an explosion in a chemical cyldiner which was being transported in a Tata Ace vehicle near Shivaji Garden, Belagavi city on Tuesday, February 16, 2016.
Please Wait while comments are loading...