ವಿವೇಕ್ ಶೆಟ್ಟಿ ಹಲ್ಲೆ ಪ್ರಕರಣ: ರಾಜೂ ಕಾಗೆ ಸೇರಿ 6 ಜನರಿಗೆ ಷರತ್ತು ಬದ್ದ ಜಾಮೀನು

Subscribe to Oneindia Kannada

ಬೆಳಗಾವಿ. ಜನವರಿ 25: ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಹಲ್ಲೆ ಪ್ರಕರಣದಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಸೇರಿ ಆರು ಜನರಿಗೆ ಬೆಳಗಾವಿ ಜಿಲ್ಲಾ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಶಾಸಕ ರಾಜು ಕಾಗೆ, ಸಹೋದರ ಸಿದ್ಧಗೌಡ ಕಾಗೆ, ಮಗಳು ತೃಪ್ತಿ ಕಾಗೆ, ಪ್ರಸಾದ್ ಕಾಗೆ. ಕಾರು ಚಾಲಕ ಬಾಹುಬಲಿ ಮತ್ತು ಶೋಭಾ ಕಾಗೆಯವರು ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ನ್ಯಾಯಾಧೀಶ ಸತೀಶ್ ಸಿಂಗ್ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದಾರೆ. [ಹಲ್ಲೆ ಪ್ರಕರಣ: ಕಾಗವಾಡ ಬಿಜೆಪಿ ಶಾಸಕ ರಾಜು ಕಾಗೆ ಬಂಧನ]

Bail granted for Raju Kage and 6 others

ಹೊಸ ವರ್ಷ ಜನವರಿ 1ರಂದು ವಿವೇಕ್ ಶೆಟ್ಟಿ ಮೇಲೆ ಅವರ ಮನೆಗೆ ನುಗ್ಗಿ ರಾಜು ಕಾಗೆ ಆಪ್ತರು ಮತ್ತು ಸಂಬಂಧಿಕರು ಹಲ್ಲೆ ನಡೆಸಿದ್ದರು. ಈ ಕುರಿತು 13 ಜನರ ಮೇಲೆ ಪ್ರಕರಣ ದಾಖಲಾಗಿತ್ತು. [ಬಿಜೆಪಿ ಶಾಸಕ ರಾಜು ಕಾಗೆ ಬೆಂಬಲಿಗರಿಂದ ಯುವಕನ ಮೇಲೆ ಹಲ್ಲೆ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
MLA Raju Kage and six others got bail from Belagavi JMFC Court in Vivek Shetty assault case.
Please Wait while comments are loading...