ಎಪಿಎಲ್ ಪಡಿತರ ಚೀಟಿಗಾಗಿ ಇಂದಿನಿಂದಲೇ(ಜ.9) ಅರ್ಜಿ ಹಾಕಿ

Posted By:
Subscribe to Oneindia Kannada

ಬೆಳಗಾವಿ, ಜನವರಿ 9: ಎಪಿಎಲ್ ಕಾರ್ಡ್ ಪಡೆಯಲು ಇದು ಸದವಕಾಶ ಇಂದಿನಿಂದ(ಜ.9)ಲೇ ಕಾರ್ಡಿಗಾಗಿ ಆನ್ ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ತಾತ್ಕಾಲಿಕ ಕಾರ್ಡ್ ಮನೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಭರವಸೆ ನೀಡಿದರು.

ಈ ಬಗ್ಗೆ ಮಾತನಾಡಿದ ಖಾದರ್, ಮತ್ತೆ ಪಡಿತರ ಚೀಟಿಯನ್ನು ಪಡೆಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದ್ದು, 15ದಿನಗಳೊಳಗಾಗಿ ಸ್ಪೀಡ್ ಪೋಸ್ಟ್ ಮೂಲಕ ಕಾರ್ಡ್ ಮನೆಗೆ ಬರಲಿದೆ.ರು 100 ಶುಲ್ಕನೀಡಿ ಪಡೆಯತಕ್ಕದ್ದು, ನಂತರದ 15 ದಿನಗಳ ಬಳಿಕ ದಾಖಲಾತಿ ಪರಿಶೀಲಿಸಿ ಶಾಶ್ವತ ಪಡಿತರ ಕಾರ್ಡ್ ವಿತರಿಸಲಾಗುವುದು. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಅಂತರ್ಜಾಲ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, www.ahara.kar.nic.in ಜಾಲದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.[ಲಿಂಗ ಅಲ್ಪಸಂಖ್ಯಾತರರಿಗೆ ಶೀಘ್ರದಲ್ಲೇ ಪಡಿತರ ಚೀಟಿ ವಿತರಣೆ]

APL ration Card to apply on-line today(Jan.9)

ನಗರ ಮತ್ತು ಗ್ರಾಮೀಣ ಭಾಗದ ನಾಗರಿಕರಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಬಿಪಿಎಲ್ ಕಾರ್ಡ್ ಪಡೆಯಬೇಕಾದರೆ ಅರ್ಜಿ ಸಲ್ಲಿಕೆಗೆ ಗ್ರಾಪಂಗೆ ರು.15, ಕಾರ್ಡ್ ಪಡೆಯುವಾಗ ರು 70 ಅಂಚೆ ವೆಚ್ಚ ಪಾವತಿಸಬೇಕು. ಪ್ರಸ್ತುತ ಪಡಿತರ ದುರುಪಯೋಗ ತಡೆಯಲು ಕೂಪನ್ ವ್ಯವಸ್ಥೆಯನ್ನು ಬರುತ್ತಿದ್ದು ಮಾರ್ಚ್ ಅಂತ್ಯದ ವೇಳೆಗೆ ಇದು ಜಾರಿಯಾಗಲಿದೆ ಎಂದರು.

ಕೇಂದ್ರ ಉಜ್ವಲ ಯೋಜನೆ ಬಗ್ಗೆ ಪ್ರಸ್ತಾಪಿಸಿ ಒಂದೂವರೆ ವರ್ಷವಾದರೂ ಇದರ ಅನುಷ್ಠಾನವಾಗಿಲ್ಲ ಎಂದು ಅಣಕವಾಡಿದರು. ಅಪನಗದೀಕರಣ ಮೋದಿ ಸರ್ವಾಧಿಕಾರಿತನದ ತೀರ್ಮಾನ. ಹೊಸ ವರ್ಷದಲ್ಲಿ ಅವರು ಮಾಡಿದ ಭಾಷಣ ಕೇವಲ ಚುನಾವಣಾ ಗಿಮಿಕ್ ಎಂದು ಟೀಕಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Food and civil supplies minister UT Khader said, APL Card Invitation to apply on-line today(Jan.9), Fifteen days is coming to the house of Temporary Card, government will issue permanent ration card to after 15 days.
Please Wait while comments are loading...