ರೈತರಿಗೆ ಪಿಂಚಣಿ ಯೋಜನೆ ಆರಂಭಿಸುವಂತೆ ಅಣ್ಣಾ ಹಜಾರೆ ಒತ್ತಾಯ

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ಜನವರಿ 05 : ರೈತರಿಗೆ ಪಿಂಚಣಿ ಯೋಜನೆ ಆರಂಭಿಸುವಂತೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನದಿ ನೀರನ್ನು ಪ್ರಾಣಿಗಳಿಗೆ ಮೊದಲು ಕುಡಿಯಲು ಬಳಕೆ ಮಾಡಬೇಕು. ಆದರೆ ಪ್ರಸ್ತುತ ಸರ್ಕಾರ ಉದ್ಯಮಕ್ಕೆ ಒತ್ತು ನೀಡಿ ಸಾವಿರಾರು ಕೋಟಿ ವಿನಾಯಿತಿ ನೀಡುತ್ತಿದೆ ಅದರೆ ರೈತರ ಬಗ್ಗೆ ನಿರ್ಲಕ್ಷ್ಯ ತೋರಿದೆ ಎಂದರು.

ಲೋಕಪಾಲ್ ಪಾಸಾಗಿದೆ ಇದಕ್ಕಿಂತ ಮೊದಲು ನಾಲ್ಕು ಸಾರಿ ಇದು ಬಹುಮತ ಪಡೆಯಲು ವಿಫಲವಾಗಿತ್ತು. ಈಗಿರುವ ಲೋಕಪಾಲ ಕೂಡ ನಿಶಕ್ತವಾಗಿದೆ. ನಾನು ಉಪವಾಸ ಸತ್ಯಗ್ರಹ ಮಾಡುವಾಗ ಮನಮೋಹನ ಸಿಂಗ್ ಅವರ ಸರಕಾರವಿತ್ತು. ಆಗ ನನಗೆ ಮನಮೋಹನ ಸಿಂಗ್ ಅವರು ಸತ್ಯಾಗ್ರಹ ಕೈಬಿಡಲು ಕೇಳಿದ್ದರು.

Anna Hazare urges pension for farmers

ಆಗ ನಾನು ಒಂದು ಷರತ್ತು ಅವರ ಮುಂದಿಟ್ಟಿದ್ದೆ, ಮಧ್ಯರಾತ್ರಿ ನಡೆದ ಸದನದಲ್ಲಿ ಲೋಕಪಾಲ್ ಬಿಲ್ ಪಾಸಾಯಿತು. ನಾನು ಸತ್ಯಾಗ್ರಹ ಮುಗಿಸಿದೆ ನಂತರದಲ್ಲಿ ನನಗೆ ಮೋಸವಾಯಿತು. ನಂತರದಲ್ಲಿ ಅವರು ಎಲ್ಲೆಲ್ಲಿ ಲೋಕಪಾಲ್ ಇದೆಯೋ ಅಲ್ಲಲ್ಲಿ ಈ ಕಾನೂನು ತರುವ ಅವಶ್ಯಕತೆ ಇಲ್ಲವೆಂದು ಕಾನೂನು ಮಾಡಿದರು ನಂತರ ಮೋದಿ ಸರಕಾರ ಇದನ್ನ ಇನ್ನಷ್ಟು ನಿಶಕ್ತವಾಗಿಸಿತು ಎಂದರು.

ಮೊದಲ ಕಾನೂನಿನಲ್ಲಿ ರಾಜಕಾರಣಿಗಳು ಮತ್ತು ಅವರ ಹೆಂಡತಿ ಮಕ್ಕಳ ಆಸ್ತಿಯನ್ನು ಪ್ರತಿ ವರ್ಷ ಮಾರ್ಚ್ ನಲ್ಲಿ ಘೋಷಿಸಬೇಕಿತ್ತು. ಈ ಸರ್ಕಾರ ಮೂರು ದಿನದಲ್ಲಿ ಅದಕ್ಕೆ ವಿರೋದ ವಾದ ಕಾನೂನು ಜಾರಿಯಾಯಿತು. ಈಗ ಅವರು ತಮ್ಮ ಹೆಂಡತಿ ಮಕ್ಕಳ ಆಸ್ತಿಯನ್ನು ಘೋಷಿಸುವ ಹಾಗಿಲ್ಲ. ಒಂದು ಕಡೆ ಲಂಚ ಮುಕ್ತ ದೇಶದ ಬಗ್ಗೆ ಮಾತನಾಡುತ್ತಾರೆ. ಇನ್ನೋಂದು ಕಡೆ ಆ ಕಾನೂನನ್ನು ನಿಶಕ್ತ ಮಾಡುತ್ತಾರೆ ಎಂದು ಆರೋಪಿಸಿದರು.

Anna Hazare urges pension for farmers

ಸಂವಿಧಾನ ಬದಲಾವಣೆ ಹೇಳಿಕೆ ನೀಡಿದವರ ತಲೆ ಸರಿ ಇಲ್ಲ: ಸಂವಿಧಾನ ಬದಲಾವಣೆ ಹೇಳಿಕೆ ನೀಡಿದವರ ತಲೆ ಸರಿಯಿದ್ದಂತಿಲ್ಲ ಆಸ್ಪತ್ರೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Social activist Anna Hazare urged Union Government to implement pension scheme for the farmers of the country rather funding capitalist industrialists.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ