ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತಕುಮಾರ ಹೆಗಡೆ ಗ್ರಾ.ಪಂ. ಸದಸ್ಯ ಆಗೋದಕ್ಕೂ ನಾಲಾಯಕ್: ಸಿದ್ದರಾಮಯ್ಯ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

Recommended Video

ಸಿದ್ದರಾಮಯ್ಯ ಭಾಷಣದ ಹೈಲೈಟ್ಸ್ | ಅನಂತ್ ಕುಮಾರ್ ಹೆಗಡೆ ಟಾರ್ಗೆಟ್ | Oneindia Kannada

ಬೆಳಗಾವಿ, ಡಿಸೆಂಬರ್ 21: "ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಗ್ರಾ.ಪಂ ಸದಸ್ಯ ಆಗೋದಕ್ಕೂ ಲಾಯಕ್ಕಿಲ್ಲದ ವ್ಯಕ್ತಿ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾರೋಗೇರಿಯಲ್ಲಿ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, "ಕೇಂದ್ರದ ಸಚಿವರೊಬ್ಬರು ಕರಾವಳಿ ಪ್ರದೇಶಗಳಲ್ಲಿ ಬೆಂಕಿ ಹಚ್ಚಿದರು. ಈ ತಪರಾಕಿ ಸಾಕಾ ಇನ್ನೂ ಬೇಕಾ ಅಂತಾ ಕೇಳಿದರು. ಸಚಿವ ಅನಂತಕುಮಾರ ಹೆಗಡೆ ಗ್ರಾ.ಪಂ ಸದಸ್ಯ ಆಗೋದಕ್ಕೂ ಲಾಯಕ್ಕಿಲ್ಲದ ವ್ಯಕ್ತಿ. ಇಂತಹವರಿಂದ ದೇಶ ಉದ್ಧಾರವಾಗುತ್ತಾ?," ಎಂದು ಹರಿಹಾಯ್ದರು.

ಇದಕ್ಕೂ ಮೊದಲುರಾಯಬಾಗದಲ್ಲಿ ಸಾಧನಾ ಸಮಾವೇಶದಲ್ಲಿ ಅವರು ಭಾಗವಹಿಸಿದರು. ಜತೆಗೆ 337.97 ಕೋಟಿಯ ಕಾಮಗಾರಿಗೂ ಚಾಲನೆಯನ್ನು ನೀಡಿದರು.

ಮುಖ್ಯಮಂತ್ರಿಗಳಿಗೆ ಖಡ್ಗ ನೀಡುವುದರ ಮುಖಾಂತರ ಕಾರ್ಯಕ್ರಮಕ್ಕೆ ಸ್ವಾಗತ ಕೋರಲಾಯಿತು. ನಂತರ ಮಾತನಾಡಿದ ಅವರು, "ನಮ್ಮ ಕಾಂಗ್ರೆಸ್ ಸರಕಾರವು ಅಭಿವೃದ್ದಿಯತ್ತ ನಡೆಯುತ್ತಿದೆ. ಇಲ್ಲಿನ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲ. ಆದರೂ ನಾನು ಎರಡು ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸವನ್ನು ಮಾಡಿದ್ದೇನೆ," ಎಂದು ಹೇಳಿದರು.

ಮುಂದಿನ ವರ್ಷವೂ ನಾವೇ ಅಧಿಕಾರಕ್ಕೆ

ಮುಂದಿನ ವರ್ಷವೂ ನಾವೇ ಅಧಿಕಾರಕ್ಕೆ

'ಮುಂದಿನ ವರ್ಷವೂ ಕಾಂಗ್ರೆಸ್ ಆಡಳಿತಕ್ಕೆ ಬರಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ, "ಬಿಜೆಪಿಯವರು ಮೊದಲು ತಾವು ಪರಿವರ್ತನೆಯಾಗಲಿ. ಬಳಿಕ ಎಲ್ಲರನ್ನೂ ಪರಿವರ್ತನೆ ಮಾಡಲಿ," ಎಂದು ವ್ಯಂಗ್ಯವಾಡಿದರು.

'ಅಚ್ಛೇ ದಿನ್ ನಹಿ ಆಯೇಗಾ'

'ಅಚ್ಛೇ ದಿನ್ ನಹಿ ಆಯೇಗಾ'

ನಮ್ಮ ಸರಕಾರ ಪ್ರಣಾಳಿಕೆಯಲ್ಲಿ ನೀಡಿದ 165ಭರವಸೆಗಳನ್ನು ಇಡೇರಿಸಿದೆ ಎಂದು ಹೇಳಿ ಸಿಎಂ ಬಿಜೆಪಿ ಶಾಸಕ ದುರ್ಯೊಧನ ಐಹೊಳೆ ಅವರ ಕಡೆ ನೋಡಿದ್ದು ಗಮನ ಸೆಳೆಯಿತು.
'ಅಚ್ಛೇ ದಿನ್ ಆಯೇಗಾ ಎನ್ನುತ್ತಾರೆ, ನಹಿ ಆಯೇಗಾ ಎಂದ ಸಿದ್ದರಾಮಯ್ಯ, "ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಹೋಗೈಕ್ಯಾ?" ಎಂದು ಮೋದಿ ಅವರ ಮಾತುಗಳನ್ನು ಲೇವಡಿ ಮಾಡಿದರು.

ಶಾಸಕರಾಗಲು ಲಾಯಕ್ಕಾ?

ಶಾಸಕರಾಗಲು ಲಾಯಕ್ಕಾ?

ಬಿಜೆಪಿ ಸರ್ಕಾರದಲ್ಲಿ ಎಷ್ಟೊಂದು ಜನ ಜೈಲಿಗೆ ಹೋಗಿದ್ದಾರೆ. ಲಕ್ಷ್ಮಣ ಸವದಿ, ಸಿ ಸಿ ಪಾಟೀಲ, ಕೃಷ್ಣ ಪಾಲೇಮಾರ್ ಅವರ ಮಂತ್ರಿ ಸ್ಥಾನ ಹೋಗಿದ್ದು ತಮಗೆ ಗೊತ್ತಾ? ಹೇಳಿ ಇಂತವರು ಶಾಸಕರಾಗಿ ಇರೋದಕ್ಕೆ ಲಾಯಕ್ಕಾ?" ಎಂದು ಪ್ರಶ್ನಿಸಿದರು.

ನೀರಾವರಿಗೆ 50 ಸಾವಿರ ಕೋಟಿ

ನೀರಾವರಿಗೆ 50 ಸಾವಿರ ಕೋಟಿ

ನಂತರ ಮಾತನಾಡಿದ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್, "ಬಿಜೆಪಿ ಸರಕಾರವು ಕುಡಿಯುವ ನೀರಿನ ಯೋಜನೆಯನ್ನು ತರಲಿಲ್ಲ. ಸಿದ್ದರಾಮಯ್ಯ ಅವರು ಈ ಭಾಗದ ಎರಡು ಕ್ಷೇತ್ರಗಳಲ್ಲಿ ಕುಡಿಯುವ ನೀರಿನ ಭವಣೆಯನ್ನು ನೀಗಿಸಿದ್ದಾರೆ. ನೀರಾವರಿಗೆ ಹಿಂದಿನ ಸರಕಾರ 18 ಸಾವಿರ ಕೋಟಿ ಖರ್ಚು ಮಾಡಿತ್ತು. ಕಾಂಗ್ರೆಸ್ ಸರಕಾರ 50 ಸಾವಿರ ಕೋಟಿ ಖರ್ಚು ಮಾಡಿದೆ. ನಾವು ನುಡಿದಂತೆ ನಡೆದಿದ್ದೇವೆ," ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಸಚಿವ ಎಂ. ಬಿ. ಪಾಟೀಲ್ ಸ್ಥಳೀಯ ಶಾಸಕ ದುರ್ಯೊಧನ ಐಹೊಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಅಪನಗದೀಕರಣ ಹಗರಣ

ಅಪನಗದೀಕರಣ ಹಗರಣ

ನಂತರ ಹಾರೋಗೇರಿಯಲ್ಲಿ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದರು. ಈ ವೇಳೆ ಅವರು ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಅವರನ್ನು ಮೀಸೆ ಸಾಹುಕಾರ ಎಂದು ಕಿಚಾಯಿಸಿದರು.

ರಾಜ್ಯದಲ್ಲಿನ ಆಡಳಿತ ವಿರೋಧಿ ಅಲೆ ಇಲ್ಲ ಎಂದ ಮುಖ್ಯಮಂತ್ರಿಗಳು, "ಪ್ರಧಾನಿ ನರೇಂದ್ರ ಮೋದಿ ನೋಟ್ ಅಪನಗದೀಕರಣ ಮಾಡಿದ್ದು ಏಕೆ ಗೊತ್ತಾ? ಬಿಜೆಪಿಯವರ ಬಳಿಯಲ್ಲಿ ಇರುವ ಕಪ್ಪು ಹಣವನ್ನು ಬಿಳಿ ಹಣ ಮಾಡಿಕೊಳ್ಳುವುದಕ್ಕೆ," ಎಂದು ಆರೋಪಿಸಿದರು.

ನಮ್ಮದು ಕಾಮ್ ಕೀ ಬಾತ್

ನಮ್ಮದು ಕಾಮ್ ಕೀ ಬಾತ್

ಅವರದು ಮನ್ ಕೀ ಬಾತ್, ನಮ್ಮದು ಕಾಮ್ ಕೀ ಬಾತ್ ಸರ್ಕಾರ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ವಾದಿಸಿದರು. ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. ಆದರೆ ಉಚಿತವಾಗಿ ಪ್ರತಿ ತಿಂಗಳು 7 ಕೆಜಿ ಅಕ್ಕಿ ಕೊಡುತ್ತಿರುವುದು ಕರ್ನಾಟಕದಲ್ಲಿ ಮಾತ್ರ ಎಂದರು.

ಕೇಂದ್ರದಿಂದ ಸಾಲ ಮನ್ನಾ ಮಾಡಿ

ಕೇಂದ್ರದಿಂದ ಸಾಲ ಮನ್ನಾ ಮಾಡಿ

"ಯಾತ್ರಾ ಮಾಡ್ತಾರಾ... ಪರಿವರ್ತನಾ ಯಾತ್ರಾ?" ಅಂತಾ ವ್ಯಂಗ್ಯವಾಡಿದ ಸಿಎಂ, ಯಡಿಯೂರಪ್ಪ ತಾಕತ್ತಿದ್ದರೆ ಸಂಸತ್ತಿಗೆ ಮುತ್ತಿಗೆ ಹಾಕಿ. ನಾನು ಸಹಕಾರಿ ಬ್ಯಾಂಕ್ ಗಳ ಸಾಲ ಮನ್ನಾ ಮಾಡಿದೆ. ನೀವು ಕೇಂದ್ರದಿಂದ ಸಾಲ ಮನ್ನಾ ಮಾಡಿಸಿ," ಎಂದು ಸವಾಲು ಹಾಕಿದರು.

ಬಿಜೆಪಿಯವರಿಗೆ ಸಾಯಿಸಿ ಗೊತ್ತು

ಬಿಜೆಪಿಯವರಿಗೆ ಸಾಯಿಸಿ ಗೊತ್ತು

"ಕುವೆಂಪು ಅವರು ರಚಿಸಿರುವ ನಾಡಗೀತೆ ನಂಬಿ ನಡೆಯುವವರು ನಾವು. ಸರ್ವ ಜನಾಂಗದ ಶಾಂತಿಯ ತೋಟ ಮಾಡಲು ಹೊರಟವರು," ಎಂದು ಸಿದ್ದರಾಮಯ್ಯ, "ಸ್ವಾತಂತ್ರ್ಯ ಹೋರಾಟಕ್ಕಾಗಿ ಬಿಜೆಪಿಯವರು ಯಾರಾದರೂ ಸತ್ತಿದ್ದಾರಾ? ಬಿಜೆಪಿಯವರಿಗೆ ಇನ್ನೊಬ್ಬರನ್ನು ಸಾಯಿಸಿ ಗೊತ್ತು," ಎಂದು ಕಿಡಿಕಾರಿದರು.

English summary
"Union Minister Ananthkumar Hegde is unfit even to became Gram Panchayat member," said Chief Minister Siddaramaiah here in Harogeri, Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X