ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಬೆಳಗಾವಿ ನಡುವೆ ಏರ್ ಬಸ್ ಸಂಚಾರ ಆರಂಭ

By Gururaj
|
Google Oneindia Kannada News

ಬೆಳಗಾವಿ, ಆಗಸ್ಟ್ 10 : ಬೆಂಗಳೂರು-ಬೆಳಗಾವಿ ನಡುವೆ ಏರ್ ಬಸ್ ಸಂಚಾರಕ್ಕೆ ಏರ್ ಇಂಡಿಯಾ ಚಾಲನೆ ನೀಡಿದೆ. ವಾರದಲ್ಲಿ 4 ದಿನ ಏರ್ ಬಸ್ ಎರಡು ನಗರಗಳ ನಡುವೆ ಸಂಚಾರ ನಡೆಸಲಿದೆ.

ಶುಕ್ರವಾರ ಬೆಳಗ್ಗೆ 7.30ಕ್ಕೆ ಏರ್‌ ಬಸ್ 319 ಬೆಳಗಾವಿಗೆ ಆಗಮಿಸಿತು. ಜಲಫಿರಂಗಿ ಮೂಲಕ ವಿಮಾನಕ್ಕೆ ಸ್ವಾಗತ ಕೋರಲಾಯತು. 122 ಆಸನವುಳ್ಳ ಏರ್‌ಬಸ್‌ನಲ್ಲಿ 83 ಜನರು ಆಗಮಿಸಿದರು.

ತುಂಬಿ ತುಳುಕುತ್ತಿದೆ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌: ಇನ್ನೊಂದು ರೈಲಿಗೆ ಆಗ್ರಹತುಂಬಿ ತುಳುಕುತ್ತಿದೆ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌: ಇನ್ನೊಂದು ರೈಲಿಗೆ ಆಗ್ರಹ

ಬೆಳಗ್ಗೆ 9.30ಕ್ಕೆ ಏರ್‌ ಬಸ್ ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿತು. 104 ಜನರು ಇದರಲ್ಲಿ ಪ್ರಯಾಣ ಬೆಳೆಸಿದರು. ಇದೇ ಮೊದಲ ಬಾರಿಗೆ ಏರ್ ಇಂಡಿಯಾ ನಗರಕ್ಕೆ ಏರ್ ಬಸ್ ಸೇವೆ ಆರಂಭಿಸಿದೆ.

Air India launch Bengaluru-Belagavi airbus services

ಸೋಮವಾರ, ಗುರುವಾರ, ಶುಕ್ರವಾರ ಹಾಗೂ ಭಾನುವಾರ ಎರಡು ನಗರಗಳ ನಡುವೆ ಏರ್ ಬಸ್ ಹಾರಾಟ ನಡೆಸಲಿದೆ. ಉಳಿದ ಮೂರು ದಿನಗಳ ಕಾಲ ಎಟಿಆರ್ ವಿಮಾನ ಹಾರಾಟ ನಡೆಸಲಿದೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣ

ಉಡಾನ್ ಯೋಜನೆಗೆ ಬೆಳಗಾವಿ : ಉಡಾನ್ ಯೋಜನೆಯ 3ನೇ ಹಂತಕ್ಕೆ ಬೆಳಗಾವಿ ವಿಮಾನ ನಿಲ್ದಾಣವನ್ನು ಸೇರಿಸುವ ಪ್ರಯತ್ನ ಆರಂಭವಾಗಿದೆ. ಸೆಪ್ಟೆಂಬರ್‌ನಲ್ಲಿ ಪ್ರಕ್ರಿಯೆಗಳು ಆರಂಭವಾಗಲಿದ್ದು, ಅಕ್ಟೋಬರ್‌ನಲ್ಲಿ ಈ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.

English summary
Air India launched airbus services between Bengaluru and Belagavi on August 10, 2018. Airbus will connect two city's on Sunday, Monday, Friday and Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X