ಅಧಿವೇಶನಕ್ಕೆ ಕೋಟಿ-ಕೋಟಿ ಖರ್ಚು, ಶಾಸಕರ ಗೈರು

Posted By: Gururaj
Subscribe to Oneindia Kannada

ಬೆಳಗಾವಿ, ನವೆಂಬರ್ 14 : ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಒಂದು ದಿನಕ್ಕೆ ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡುತ್ತದೆ. ಆದರೆ, ನಮ್ಮ ಜನಪ್ರತಿನಿಧಿಗಳು ಚರ್ಚೆ ನಡೆಸುವುದು ಇರಲಿ, ಕಲಾಪಕ್ಕೇ ಚಕ್ಕರ್ ಹಾಕಿ ಜನರ ತೆರಿಗೆ ಹಣ ಪೋಲು ಮಾಡುತ್ತಾರೆ.

ನ.13ರಿಂದ ಹತ್ತು ದಿನಗಳ ಕಾಲ ನಡೆಯುವ ಅಧಿವೇಶನಕ್ಕೆ 31 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸರ್ಕಾರ ಈಗಾಗಲೇ 21 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಎರಡನೇ ದಿನದ ಅಧಿವೇನ ನಡೆಯುತ್ತಿದೆ.

ಕರ್ನಾಟಕದ ಶಾಸಕರ ಸಂಬಳ ಎಷ್ಟು ಗೊತ್ತಾ?

ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಜನಪ್ರತಿನಿಧಿಗಳು ಮಾತ್ರ ಕಾಣುತ್ತಿಲ್ಲ. ಮೊದಲ ದಿನವೇ ಕೋರಂ ಕೊರತೆಯಿಂದಾಗಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಕಲಾಪವನ್ನು ಮುಂದೂಡಿದ ಪ್ರಸಂಗವೂ ನಡೆದಿದೆ. ಉಭಯ ಸದನಗಳು ಸೇರಿ 300 ಸದಸ್ಯರಿದ್ದು, ಮೊದಲ ದಿನ 113 ಸದಸ್ಯರು ಮಾತ್ರ ಪಾಲ್ಗೊಂಡಿದ್ದರು. 11 ಸಚಿವರು ಮಾತ್ರ ಸದನದಲ್ಲಿದ್ದರು.

ಬೆಳಗಾವಿ ಅಧಿವೇಶನಕ್ಕೆ ಹಾಜರಾಗುವಂತೆ ಕಾಂಗ್ರೆಸ್ ನಿಂದ ವಿಪ್ ಜಾರಿ

ಶಾಸಕರ ವೇತನದ ವಿಚಾರ ಬಂದಾಗ ಒಗ್ಗಟ್ಟಾಗುವ ಎಲ್ಲಾ ಪಕ್ಷಗಳು ಹಾಜರಾತಿ ವಿಚಾರ ಬಂದಾಗ ಮೌನಕ್ಕೆ ಶರಣಾಗುತ್ತವೆ. ವಿಪ್ ಜಾರಿ ಮಾಡಿ ಶಾಸಕರನ್ನು ಬಲವಂತವಾಗಿ ಅಧಿವೇಶನಕ್ಕೆ ಕರೆದುಕೊಂಡು ಬರಬೇಕಾದ ಅನಿವಾರ್ಯತೆ ಎದುರಾಗಿದೆ.

ಹಾಜರಾತಿ ಕೊರತೆ

ಹಾಜರಾತಿ ಕೊರತೆ

ಮೊದಲ ದಿನ ಉಭಯ ಸದನಗಳನ್ನು ಸೇರಿಸಿ 113 ಸದಸ್ಯರು ಹಾಜರಿದ್ದರು. 2ನೇ ದಿನವಾದ ಇಂದು ಪರಿಷತ್ತಿನಲ್ಲಿ ಕಾಂಗ್ರೆಸ್‌ನ 25, ಬಿಜೆಪಿಯ 16, ಜೆಡಿಎಸ್‌ನ 5 ಸದಸ್ಯರು ಹಾಜರಿದ್ದರು. ಎರಡನೇ ದಿನವೂ ಸದಸ್ಯರ ಗೈರು ಹಾಜರಾತಿ ಮುಂದುವರೆಯಿತು.

ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ

ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ

ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಸುವುದು ಸರ್ಕಾರಕ್ಕೆ ದೊಡ್ಡ ಹೊರೆ. ವರ್ಷದಿಂದ ವರ್ಷಕ್ಕೆ ಅಧಿವೇಶನದ ವೆಚ್ಚ ಹೆಚ್ಚಾಗುತ್ತಲೇ ಇದೆ.

* 2016ರ ಡಿಸೆಂಬರ್‌ 16 ಕೋಟಿ (10 ದಿನ)

* 2015ರಲ್ಲಿ 13 ಕೋಟಿ

* 2014 ರಲ್ಲಿ 14 ಕೋಟಿ

* 2013ರಲ್ಲಿ ಸುಮಾರು 8 ಕೋಟಿ

* 2017ರಲ್ಲಿ ಸುಮಾರು 31 ಕೋಟಿ ವೆಚ್ಚವಾಗುತ್ತಿದೆ

ಪೂರ್ಣ ಪ್ರಮಾಣದ ಕಲಾಪವಿಲ್ಲ

ಪೂರ್ಣ ಪ್ರಮಾಣದ ಕಲಾಪವಿಲ್ಲ

ಸರ್ಕಾರ ಕೋಟಿ-ಕೋಟಿ ವೆಚ್ಚ ಮಾಡಿ ಅಧಿವೇಶನ ನಡೆಸಿದರೂ ಪೂರ್ಣ ಹಾಜರಾತಿ ಜೊತೆಗೆ ದಿನಪೂರ್ತಿ ಕಲಾಪ ನಡೆಯುವುದಿಲ್ಲ. ಹಾಜರಾತಿ ಕೊರತೆ ಒಂದು ಕಡೆಯಾದರೆ, ಗಲಾಟೆ-ಗದ್ದಲಕ್ಕೆ ಕಲಾಪ ಬಲಿಯಾಗುತ್ತದೆ.

ಅಧಿವೇಶನ ಮೊಟಕು

ಅಧಿವೇಶನ ಮೊಟಕು

ಈ ಬಾರಿಯು ಬಿಜೆಪಿ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಗದ್ದಲವೆಬ್ಬಿಸುತ್ತಿದೆ. ಆದ್ದರಿಂದ, ಅಧಿವೇಶನವನ್ನು ಮೊಟಕುಗೊಳಿಸಬೇಕು ಎಂಬ ಚರ್ಚೆಯೂ ಉನ್ನತ ಮಟ್ಟದಲ್ಲಿ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka assembly winter session in Belagavi Suvarna Vidhana Soudha. Karnataka government spending 31 core for ten days of assembly session. A visit to the assembly session would show several empty benches.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ