ಬೆಳಗಾವಿಯ ಚಿಕ್ಕಬಾಗೇವಾಡಿ ಗ್ರಾ.ಪಂ ಅಧ್ಯಕ್ಷೆ, ಪಿಡಿಒ ಎಸಿಬಿ ಬಲೆಗೆ

Written By: Ramesh
Subscribe to Oneindia Kannada

ಬೆಳಗಾವಿ, ನವೆಂಬರ್. 09 : ಕಾಮಾಗಾರಿ ಹಣವನ್ನು ಮಂಜೂರು ಮಾಡುವುದಕ್ಕೆ ಕಾಂಟ್ರಾಕ್ಟರ್ ಒಬ್ಬರಿಂದ 6,500 ರುಗಳ ಲಂಚ ಪಡೆಯುತಿದ್ದ ವೇಳೆ ಬೆಳಗಾವಿ ಜಿಲ್ಲೆಯ ಚಿಕ್ಕಬಾಗೇವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಅಧಿಕಾರಿ ಮಂಗಳವಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಬಲೆಗೆ ಬಿದ್ದಿದ್ದಾರೆ.

ಭ್ರಷ್ಟಾಚಾರದಲ್ಲಿ ತೊಡಗಿದ್ದ ಗ್ರಾ.ಪಂ ಅಧ್ಯಕ್ಷೆ ಕಮಲವ್ವ ಶಿವನಬಸಪ್ಪ, ಕಾರ್ಯದರ್ಶಿ ಹಾಗೂ ಪ್ರಬಾರ ಅಭಿವೃದ್ಧಿ ಅಧಿಕಾರಿ ಗುರಗುಂಡಯ್ಯ ಹಿರೇಮಠ್ ಎನ್ನುವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಅವರನ್ನು ಎಸಿಬಿ ಅಧಿಕಾರಿಗಳು ದಸ್ತಗಿರಿ ಮಾಡಿದ್ದಾರೆ. [ಅಬ್ಬಾ..! ಎಸಿಬಿ ದಾಳಿಯಲ್ಲಿ ಸಿಕ್ಕಿದ್ದು ಮನೆ ತುಂಬ ಬೆಳ್ಳಿ, ಬಂಗಾರ!]

acb arrested Belagavi district grama panchayat president and pdo

ಬೆಳಗಾವಿ ಜಿಲ್ಲೆಯ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಸಿವಿಲ್ ಕಾಮಗಾರಿ ಕೈಗೊಳ್ಳುವ ಕಾಂಟ್ರಾಕ್ಟರ್ ಒಬ್ಬರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಒಂದು ಸಿವಿಲ್ ಕಾಮಗಾರಿಯನ್ನು ವಹಿಸಲಾಗಿತ್ತು. [ಎಸಿಬಿ ದಾಳಿ: ವಾಣಿಜ್ಯ ತೆರಿಗೆ ಅಧಿಕಾರಿಗಳ ಬಂಧನ]

ಆ ಸಿವಿಲ್ ಕಾಮಗಾರಿಯನ್ನು 43,000 ರುಗಳಲ್ಲಿ ಪೂರ್ಣಗೊಳಿಸಿದ್ದಾರೆ. ಆ ಮೊತ್ತವನ್ನು ಮಂಜೂರು ಮಾಡುವಂತೆ ಸಿವಿಲ್ ಕಾಂಟ್ರಾಕ್ಟರ್ ಅವರು ಗ್ರಾಮಪಂಚಾಯಿತಿ ಕಾರ್ಯಾಲಯಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ.

ಆದರೆ, ಚಿಕ್ಕಬಾಗೇವಾಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಕಮಲವ್ವ ಶಿವನಬಸಪ್ಪ ಪಾಟೀಲ ಹಾಗೂ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಅಧಿಕಾರಿ ಅಣ್ಣಯ್ಯ ಗುರಗುಂಡಯ್ಯ ಹಿರೇಮಠ್ ಮೇಲ್ಕಂಡ ಸಿವಿಲ್ ಕಾಮಗಾರಿಯ ಮೊತ್ತವನ್ನು ಮಂಜೂರು ಮಾಡಲು 6,500 ರುಗಳ ಲಂಚದ ಹಣವನ್ನು ನೀಡುವಂತೆ ಸಿವಿಲ್ ಕಾಂಟ್ರಾಕ್ಟರ್ ರವರಿಗೆ ಒತ್ತಾಯಿಸಿರುತ್ತಾರೆ.

ಈ ಬಗ್ಗೆ ದೂರುದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರನ್ನು ಸಲ್ಲಿಸಿದ್ದಾರೆ. ದೂರನ್ನು ಆಧರಿಸಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Anti-Corruption Bureau (ACB) raid in Chikka bagevadi, Belagavi. Circle Gram Panchayat Chairman Kamalavva Shivabasappa and secretry Gurugundayya Hiremath caught accepting bribe.
Please Wait while comments are loading...