ಹಲ್ಲೆ ಪ್ರಕರಣ: ಕಾಗವಾಡ ಬಿಜೆಪಿ ಶಾಸಕ ರಾಜು ಕಾಗೆ ಬಂಧನ

Written By: Ramesh
Subscribe to Oneindia Kannada

ಬೆಳಗಾವಿ,ಜನವರಿ. 19 : ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕಾಗವಾಡ ಬಿಜೆಪಿ ಶಾಸಕ ಬರ್ಮನಗೌಡ ಅಲಿಯಾಸ್ ರಾಜು ಕಾಗೆ ಸೇರಿ ಆರು ಮಂದಿ ಆರೋಪಿಗಳನ್ನು ಬುಧವಾರ ರಾತ್ರಿ ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಫೆಸ್ ಬುಕ್ ನಲ್ಲಿ ಅಶ್ಲಿಲ ಕಾಮೆಂಟ್ ಮಾಡಿದ್ದಾನೆಂದು ಜನವರಿ 1 ರಂದು ವಿವೇಕ್ ಶೆಟ್ಟಿ ಎನ್ನುವರ ಮೇಲೆ ಹಲ್ಲೆ ನಡೆಸಿ ನಾಪತ್ತೆಯಾಗಿದ್ದರು.[ಬಿಜೆಪಿ ಶಾಸಕ ರಾಜು ಕಾಗೆ ಬೆಂಬಲಿಗರಿಂದ ಯುವಕನ ಮೇಲೆ ಹಲ್ಲೆ]

Absconding Kagwad BJP MLA Raju Kage nabbed by police

ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಕಾಗೆ ಸಹೋದರ ಮತ್ತು ಪ್ರಕರಣದ ಮೊದಲ ಆರೋಪಿ ಪ್ರಸಾದ್ ಸಿದ್ದಗೌಡ ಕಾಗೆ, ಪುತ್ರಿ ತೃಪ್ತಿ ಕಾಗೆ, ಸಿದಗೌಡ ಕಾಗೆ ಪತ್ನಿ ಶೋಭಾ, ರಾಜು ಕಾಗೆ ಅವರ ಕಾರು ಚಾಲಕ ಬಾಹುಬಲಿ ಮತ್ತು ಅಶೋಕ್ ಕಾಗೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪುಣೆ ಬಳಿಯ ಜಂಗಲ್ ರೇಸಾರ್ಟ್ ವೊಂದರಲ್ಲಿ ತಲೆಮರೆಸಿಕೊಂಡ ಆರೋಪಿಗಳನ್ನು ಖಚಿತ ಮಾಹಿತಿ ಆಧರಿಸಿ ಕಾರ್ಯಾಚಣೆ ನಡೆಸಿ ಗೋಕಾಕ್ ಡಿಎಸ್ಪಿ ವಿರಭದ್ರಯ್ಯ ನೇತೃತ್ವದ ವಿಶೇಷ ಪೊಲೀಸ್ ತಂಡ ಬಂಧಿಸಿ ಅಥಣಿಗೆ ಕರೆದುಕೊಂಡು ಬರುತ್ತಿದ್ದು ಸಂಜೆ ನ್ಯಾಯಾಲಯಕ್ಕೆ ಹಾಜರಿಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್.ರವಿಕಾಂತೇಗೌಡ ಅವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Belagavi district were successful in nabbing Kagwad (Athani taluk) MLA Bharamagouda alias Raju Kage four of his family members, and driver accused in a case of assault on the Congress worker Vivek Shetty.
Please Wait while comments are loading...