ಬೆಳಗಾವಿ:ಮಹಾಮೇಳಾವನಲ್ಲಿ ಭಾಗವಹಿಸಿದ್ದ ಮರಾಠಿ ಪುಂಡರ ಮೇಲೆ FIR

Posted By:
Subscribe to Oneindia Kannada

ಬೆಳಗಾವಿ, ನವೆಂಬರ್ 14: ನಿಷೇಧದ ನಡುವೆಯೂ ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ಮಹಾಮೇಳಾವ್ ನಲ್ಲಿ ಭಾಗಿಯಾಗಿದ್ದ ಕೊಲ್ಹಾಪುರ ಸಂಸದ ಧನಂಜಯ ಮಹಾಡಿಕ್ ಸೇರಿದಂತೆ 13 ಮಂದಿ ವಿರುದ್ಧ ದೂರು ದಾಖಲಲಾಗಿದೆ.

ಖಾಲಿ ಕುರ್ಚಿಗಳ ಅಧಿವೇಶನ, ಅತ್ತ ಮರಾಠಿ ಪುಂಡಾಟ; ದಿನದ 10 ಬೆಳವಣಿಗೆಗಳು

ಬೆಳಗಾವಿಯ ಟಿಳಕವಾಡಿ ಠಾಣೆಯಲ್ಲಿ ಕೊಲ್ಹಾಪುರ ಸಂಸದ ಧನಂಜಯ ಮಹಾಡಿಕ್, ಶಾಸಕಿ ಸಂಧ್ಯಾ ಕುಪ್ಪೇಕರ್ ಸೇರಿ ಮಹಾರಾಷ್ಟ್ರದ 13 ಎಂಇಎಸ್ ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ.

A complaint has been filed against 13 people who was involved in the Mahamelav at Belagavi

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ವಿರೋಧಿಸಿ, ಮಹಾರಾಷ್ಟ್ರ ಏಕೀಕರಣ ಸಮಿತಿ ಮಹಾಮೇಳಾವ್ ಏರ್ಪಡಿಸಿದ್ದು, ಮಹಾರಾಷ್ಟ್ರ ಪ್ರತಿನಿಧಿಗಳು ಭಾಗವಹಿಸದಂತೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿ ಮಾಡಿದ್ದರು.

ನಿರ್ಬಂಧದ ನಡುವೆಯೂ ಗಡಿಯಲ್ಲಿ ಪೊಲೀಸರ ಕಣ್ತಪ್ಪಿಸಿ ಧನಂಜಯ ಮಹಾಡಿಕ್, ಸಂಧ್ಯಾ ಕುಪ್ಪೇಕರ್, ಜಯಂತರಾವ್ ಪಾಟೀಲ್ ಸೇರಿ ಹಲವರು ಭಾಗವಹಿಸಿದ್ದರು.ಈ ಹಿನ್ನೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A complaint has been filed against 13 people, including Dhananjaya Mahadik of Kolhapur MP, who was involved in the Mahamelav organized by the Maharashtra unification committee despite a ban on winter assembly session in Belagavi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ