ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿಯರಿಗೆ 15 ಗಂಟೆ ಕಾಯುವ ಶಿಕ್ಷೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ನವೆಂಬರ್ 10: ವೈದ್ಯರು ಅಂದರೆ ದೇವರ ಸಮಾನ ಎನ್ನುತ್ತಾರೆ. ಆದರೆ ವೈದ್ಯರೊಬ್ಬರು ಗರ್ಭಿಣಿ ಮಹಿಳೆಯರನ್ನು 15 ಘಂಟೆಯವರೆಗೆ ಆಸ್ಪತ್ರೆಯ ಆಪರೇಶನ್ ಥೇಟರಿನಲ್ಲಿ ಕಾಯಿಸಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

5 ಜನ ಗರ್ಭಿಣಿ ಮಹಿಳೆಯರಿಗೆ ಸಿಜೇರಿಯನ್ ಮಾಡುವುದಾಗಿ ಹೇಳಿ ಹೋದ ವೈದ್ಯಾಧಿಕಾರಿ ಎಸ್.ಎಸ್. ಗಡೆದ ಬೆಳಗ್ಗೆ ಹೋದವರು ಮತ್ತೆ ಆಸ್ಪತ್ರೆ ಕಡೆ ಮುಖ ಹಾಕಿ ನೋಡಿಲ್ಲ.

5 pregnant woman made to wait for more than 15 hours in Chikodi hospital

ಬೆಳಿಗ್ಗೆಯಿಂದ ಆಸ್ಪತ್ರೆಯಲ್ಲಿ ಕಾದು ಕಾದು ಸುಸ್ತಾದ ತುಂಬು ಗರ್ಭಿಣಿಯರ ಸಂಬಂಧಿಕರು ಆಸ್ಪತ್ರೆಯಲ್ಲಿ ಗಲಾಟೆ ಮಾಡುತ್ತಿದ್ದರು. ಹೀಗಿದ್ದೂ ವೈದ್ಯ ಗಡೆದ ಆಸ್ಪತ್ರೆಗೆ ಬಂದಿಲ್ಲ.

ಗರ್ಭಿಣಿಯರಾದ ಮಾಯಾ ಹೆಗಡೆ, ಅಶ್ವಿನಿ ಸಾವಂತ, ಸವಿತಾ ಪೂಜಾರಿ, ಪಕಿಜಾ ನದಾಫ ಇವರುಗಳನ್ನು ಆಸ್ಪತ್ರೆಯಲ್ಲಿ ಕುಳಿತುಕೊಳ್ಳಲು ಹೇಳಿ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಸಿಜೇರಿಯನ್ ಮಾಡಲು ಹೋಗಿದ್ದರು ಎಂಬ ಆರೋಪ ಸಂಬಂಧಿಕರಿಂದ ಕೇಳಿ ಬಂದಿದೆ.

ಒಂದೊಮ್ಮೆ ಈ ತುಂಬು ಗರ್ಭಿಣಿಯರಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಜತೆಗೆ ಈ ರೀತಿ ಬೇಜವಾಬ್ದಾರಿ ನಡವಳಿಕೆ ತೋರಿದ ವೈದ್ಯರ ಮೇಲೆ ಕ್ರಮ ಜರುಗಿಸಬೇಕಿದೆ.

English summary
Five pregnant women admitted in a Chikodi hospital for delivery claim they were made to wait for over 15 hours in the absence of any doctor in Belagavi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X