ಬೆಳಗಾವಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರೂ.4 ಕೋಟಿ ವಶ

Posted By:
Subscribe to Oneindia Kannada

ಬೆಳಗಾವಿ, ಏಪ್ರಿಲ್ 13: ಚಿಕ್ಕೋಡಿ ಸಮೀಪ ಬೈರಾಫುರ ಚೆಕ್‌ಪೋಸ್ಟ್‌ನಲ್ಲಿ ಕಾರೊಂದರಲ್ಲಿ ಸಾಗಿಸಲಾಗುತ್ತಿದ್ದ ರೂ.4 ಕೋಟಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಣವನ್ನು ಸಮರ್ಪಕ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಲಾಗುತ್ತಿತ್ತು ಹಾಗಾಗಿ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಹಣ ಜಪ್ತು ಮಾಡಿದ್ದಾರೆ.

7 ಕೇಜಿ ಚಿನ್ನ, 11 ಲಕ್ಷದಷ್ಟು ಬೆಳ್ಳಿ, 4 ಕೋಟಿ ನಗದು ವಶಕ್ಕೆ

ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಹಣ ಸಾಗಿಸಲಾಗುತ್ತಿತ್ತು ಎಂದು ಶಂಕಿಸಲಾಗಿದೆ. ಆದರೆ ಕಾರಿನಲ್ಲಿದ್ದವರು ವಿಚಾರಣೆ ವೇಳೆ ಬೇರೆಯದೇ ಕಾರಣ ನೀಡಿದ್ದಾರೆ.

4 crore rupees sized in Belgavi by police

ಹಣವು ಮಹಾರಾಷ್ಟ್ರದ ಕೊಲ್ಲಾಪುರದ ಡಿಸಿಸಿ ಬ್ಯಾಂಕ್‌ಗೆ ಸೇರಿದ್ದು ಎಂದು ಕಾರಿನಲ್ಲಿದ್ದವರು ಹೇಳಿದ್ದಾರೆ. ಹಣವನ್ನು ಮಹಾರಾಷ್ಟ್ರದ ಹಡಹಿಂಗ್ಲಂಜ್‌ನ ಡಿಸಿಸಿ ಬ್ಯಾಂಕ್‌ ಎಪಿಎಂಸಿ ಬ್ರಾಂಚ್‌ಗೆ ಸಾಗಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ದಾಖಲೆ ಇಲ್ಲದ ಹಣ ಸಾಗಣೆ ಮಿತಿ 50,000 ರೂ.: ಚುನಾವಣಾ ಆಯುಕ್ತರು

ಹಣಕ್ಕೆ ಸೂಕ್ತ ದಾಖಲೆಗಳನ್ನು ನೀಡಿದ ಬಳಿಕ ಹಣವನ್ನು ವಾಪಾಸ್ ಮಾಡುವುದಾಗಿ ಚುನಾವಣಾಧಿಕಾರಿಗಳು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ahed of elections 4 crore rupees sized in Belgavi's Chikkodi. money was transporting in a car without needful documents. But the people with the money said money belongs to Kolhapur DCC bank.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ