ಬೆಳಗಾವಿ : 10 ದಿನದ ಅಧಿವೇಶನಕ್ಕೆ 30 ಕೋಟಿ ಖರ್ಚು

Posted By:
Subscribe to Oneindia Kannada
   ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ | 10 ದಿನಕ್ಕೆ ಬರೋಬ್ಬರಿ 30 ಕೋಟಿ ಖರ್ಚು | Oneindia Kannada

   ಬೆಳಗಾವಿ, ನವೆಂಬರ್ 24 : 10 ದಿನ ನಡೆದ ಚಳಿಗಾಲದ ಅಧಿವೇಶನದ ಒಟ್ಟು ಖರ್ಚು ಕೇಳಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಹೌಹಾರಿಬಿಟ್ಟರು. ಕಳೆದ ಬಾರಿಯ ಅಧಿವೇಶನಕ್ಕೆ ಹೋಲಿಸಿದರೆ ಈ ಬಾರಿಯ ಖರ್ಚು ದ್ವಿಗುಣಗೊಂಡಿದೆ. ಇದು ಸಿದ್ದರಾಮಯ್ಯ ಅವರ ಅನುಮಾನಕ್ಕೆ ಕಾರಣವಾಗಿದೆ.

   ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಹೆಚ್ಚು ಚರ್ಚೆಯಾಗಿಲ್ಲ

   ಒಟ್ಟಾರೆ ಅಧಿವೇಶನದ ಖರ್ಚಿನ ಲೆಕ್ಕ ಕೊಟ್ಟಿರುವ ವಿಧಾನಸೌಧದ ಸಚಿವಾಲಯ 30 ಕೋಟಿ ರೂಪಾಯಿ ಬಿಲ್ ಅನ್ನು ಸರ್ಕಾರಕ್ಕೆ ನೀಡಿದೆ. ಖರ್ಚು ನೋಡಿ ಹೌಹಾರಿದ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

   30 crore expenditure cost for 10 days winter session

   ಕಳೆದ ಬಾರಿ 18.75 ಕೋಟಿ ಖರ್ಚಾಗಿತ್ತು ಆದರೆ ಈಗ ಯಾಕೆ 30 ಕೋಟಿ ಖರ್ಚಾಗಿದೆ ಯಾವ ಯಾವದಕ್ಕೆ ಎಷ್ಟು ಖರ್ಚು ಮಾಡಿದಿರಿ ಲೆಕ್ಕ ತೋರಿಸಿ ಎಂದು ಸಿದ್ದರಾಮಯ್ಯ ಅವರು ಅಧಿಕಾರಿಗಳ ಮೇಲೆ ಹರಿಹಾಯ್ದರು.

   ಒಂದು ಊಟಕ್ಕೆ ಎಷ್ಟು ಲೆಕ್ಕ ಹಾಕಿದ್ದೀರಾ? ವಸತಿಗೆಷ್ಟು, ವಾಹನಕ್ಕೆಷ್ಟು, ಎಲ್ಲ ಲೆಕ್ಕ ಕೊಡಿ ಎಂದು ಸಿದ್ದರಾಮಯ್ಯ ಸೂಚಿಸಿದರು. ಇದರಿಂದ ಅವಕ್ಕಾದ ಅಧಿಕಾರಿಗಳು ಒಂದು ಊಟಕ್ಕೆ 475 ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಿದರು.

   30 crore expenditure cost for 10 days winter session

   ಖರ್ಚು ವೆಚ್ಚದ ಕಡತದಲ್ಲಿ 30 ಕೋಟಿ ಹಣಕ್ಕೆ 5 ಕೋಟಿ ಜಿ.ಎಸ್.ಟಿ ಇದ್ದದ್ದು ಕಂಡ ಸಿದ್ದರಾಮಯ್ಯ ಯಾವ ಯಾವುದಕ್ಕೆ ಎಷ್ಟೆಷ್ಟು ಜಿ.ಎಸ್.ಟಿ ವಿವರಾಗಿ ನಮೂದು ಮಾಡಿ, ಇಲ್ಲವಾದರೆ ಕಡತಕ್ಕೆ ಸಹಿ ಮಾಡುವುದಿಲ್ಲ ಎಂದು ಸಚಿವಾಲಯದ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

   ಒಟ್ಟಿನಲ್ಲಿ ಸಚಿವಾಲಯ ಅಧಿಕಾರಿಗಳ "ಬಿಲ್ವಿದ್ಯೆಗೆ' ಅವಕ್ಕಾದ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಪರಾಮರ್ಶಿಸಿ ಸವಿವರವಾದ ಖರ್ಚು ವೆಚ್ಚದ ಕಡತ ಕೊಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Ten days winter session at Suvarna Vidhana Soudha in Belagavi has cost state exchequer hopping Rs. 30 crores! Chief minister Siddaramaiah was stun by the bill presented by secretariat. Siddaramaiah has asked them to provide complete details of the expenditure.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ