ಬೆಳಗಾವಿ: ಬಾವಿಯಲ್ಲಿ ಮುಳುಗಿ ಮೂವರು ಕಂದಮ್ಮಗಳು ಸಾವು

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ಅಕ್ಟೋಬರ್ 30: ಬಾವಿಯಲ್ಲಿ ಮುಳುಗಿ ಮೂವರು ಬಾಲಕಿಯರು ದಾರೂಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಗಟ್ಟಿ ಬಳಿಯ ಗೂಳಿಬಸವೇಶ್ವರ ದೇವಸ್ಥಾನದ ಹತ್ತಿರ ನಡೆದಿದೆ.

6 ವರ್ಷದ ಪೂಜಾ ಶಿವಾನಂದ ಹಸಬಿ, ಪುಸ್ಪಾ ಶಿವಾನಂದ ಹಸಬಿ(4) ಮತ್ತು ಎರಡು ವರ್ಷದ ಚೇತನಾ ಶಿವಾನಂದ ಹಸಬಿ (2) ಮೃತ ಬಾಲಕಿಯರಾಗಿದ್ದಾರೆ. ಭಾನುವಾರ ಸಂಜೆಯ ಹೊತ್ತಿಗೆ ಬಾವಿಯ ಪಕ್ಕ ಆಟವಾಡಲು ತೆರಳಿದ್ದಾಗ ಈ ಮೂವರು ಬಾಲಕಿಯರು ಕಾಲು ಜಾರಿ ಬಾವಿಯೊಳಗೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

3 children drowned to death in a well at Balagavi district

ಇನ್ನು ಮಕ್ಕಳು ಮನೆ ಬಾರದಿದ್ದಾಗ ಮಕ್ಕಳನ್ನ ಪಾಲಕು ಹುಡುಕಲು ಶುರುಮಾಡಿದ್ದಾರೆ. ಬಾವಿ ಹತ್ತಿರ ಹೋಗಿ ನೋಡಿದಾಗ ಚೇತನಾ ಎಂಬ ಬಾಲಕಿಯ ಶವ ಬಾವಿಯಲ್ಲಿ ತೇಲಾಡುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.

ಇನ್ನೂ ಇಬ್ಬರ ಬಾಲಕಿಯರ ಮೃತ ದೇಹದ ಪತ್ತೆಗಾಗಿ ಗ್ರಾಮಸ್ಥರು ಶೋಧ ಕಾರ್ಯ ನಡೆಸಿದ್ದಾರೆ. ವಿಷಯ ತಿಳಿದ ತಕ್ಷಣ ಮುರಗೋಡ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The three children died after drowned in a well in Yaragatti village Savadatti taluk Belagavi district on Oct 29.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ