ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಮೊಟ್ಟಮೊದಲ ಮಹಿಳಾ ಸೇನಾ ಭರ್ತಿ ರ್‍ಯಾಲಿ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಆಗಸ್ಟ್ 2: ದೇಶದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಸೇನಾ ಭರ್ತಿ ರ್‍ಯಾಲಿ ಆಯೋಜಿಸಲಾಗಿದ್ದು, ಗುರುವಾರ ಮರಾಠಾ ಲಘು ಪದಾತಿ ದಳ ಶಿವಾಜಿ ಕ್ರೀಡಾಂಗಣದಲ್ಲಿ ರ್‍ಯಾಲಿ ಆರಂಭವಾಗಿದೆ. ಸೈನ್ಯಕ್ಕೆ ಸೇರಬೇಕೆಂಬ ಆಸೆಯೊಂದಿಗೆ ನೂರಾರು ಯುವತಿಯರು ಕುಂದಾನಗರಿ ಬೆಳಗಾವಿಗೆ ಆಗಮಿಸಿದ್ದಾರೆ.

ನೆನ್ನೆ ಬೆಳಗ್ಗೆಯಿಂದಲೇ ಯುವತಿಯರ ದೈಹಿಕ ಸಾಮರ್ಥ್ಯದ ಪರೀಕ್ಷೆ ನಡೆಯಿತು. ರನ್ನಿಂಗ್, ಹೈಜಂಪ್, ಸದೃಢತೆ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಯಿತು. ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿ 5 ರಾಜ್ಯಗಳ ಅನೇಕ ಯುವತಿಯರು ಪಾಲ್ಗೊಂಡಿದ್ದರು. ಮೊದಲ ದಿನ ಕರ್ನಾಟಕ ಹಾಗೂ ಕೇರಳದ 800 ಮಂದಿ ದೈಹಿಕ ಪರೀಕ್ಷೆಗೆ ಹಾಜರಾದರು.

 ಜಮ್ಮು ಕಾಶ್ಮೀರದಲ್ಲಿ ಒಂದೇ ವಾರದಲ್ಲಿ ಮತ್ತೆ 25 ಸಾವಿರ ಸೈನಿಕರ ನಿಯೋಜನೆ ಜಮ್ಮು ಕಾಶ್ಮೀರದಲ್ಲಿ ಒಂದೇ ವಾರದಲ್ಲಿ ಮತ್ತೆ 25 ಸಾವಿರ ಸೈನಿಕರ ನಿಯೋಜನೆ

"ಮನೆಯಲ್ಲಿ ಅಣ್ಣ, ಅಪ್ಪ ದೇಶ ಸೇವೆಗೆ ಹೋಗಲು ಆಗಿಲ್ಲ. ಆದ್ದರಿಂದ ನಾನು ಪ್ರಯತ್ನ ಪಡುತ್ತಿದ್ದೇನೆ" ಎಂದು ಸಂತಸ ವ್ಯಕ್ತಪಡಿಸಿದರು ಮಹಿಳಾ ರ್‍ಯಾಲಿಗೆ ಬಂದಿದ್ದ ಸಂಗೀತಾ ಎಂಬ ಯುವತಿ.

Women Army Filling Event

ಆದರೆ ದೇಶದಲ್ಲಿಯೇ ಮೊದಲ ಬಾರಿಗೆ ಮಹಿಳಾ ಸೇನಾ ಭರ್ತಿ ರ್‍ಯಾಲಿ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರ್‍ಯಾಲಿ ಆಗಸ್ಟ್‌ 5ರವರೆಗೆ ಮುಂದುವರಿಯಲಿದೆ.

 ಪೊಲೀಸ್ ಪೇದೆಯಾಗಿದ್ದ ಕಾರ್ಗಿಲ್ ವೀರನನ್ನು ಕೊನೆಗೂ ಗುರುತಿಸಿದ ಸರ್ಕಾರ ಪೊಲೀಸ್ ಪೇದೆಯಾಗಿದ್ದ ಕಾರ್ಗಿಲ್ ವೀರನನ್ನು ಕೊನೆಗೂ ಗುರುತಿಸಿದ ಸರ್ಕಾರ

ಪ್ರವೇಶ ನಿರಾಕರಣೆಗೆ ಆಕ್ರೋಶ: ಮಹಿಳಾ ಸೇನಾ ಭರ್ತಿ ರ್‍ಯಾಲಿ ಬಗ್ಗೆ ಮಾಹಿತಿ ಪಡೆದ ಸಾವಿರಾರು ಯುವತಿಯರು ನೇರವಾಗಿ ಎಂಎಲ್ಆರ್ ಸಿ ಬಂದಿದ್ದಾರೆ. ಆದರೆ ಇಲ್ಲಿನ ಸೇನಾ ಅಧಿಕಾರಿಗಳು ಆನ್ ಲೈನ್ ಮೂಲಕ ಹೆಸರು ನೋಂದಾಯಿಸಿದ್ದ ಅಭ್ಯರ್ಥಿಗಳ ಪೈಕಿ ಮೆಟ್ರಿಕ್ಯುಲೇಷನ್ ಆಧಾರದ ಮೇಲೆ ಯುವತಿಯರ ದೈಹಿಕ ಪರೀಕ್ಷೆ ಆರಂಭಿಸಿ ಉಳಿದವರನ್ನು ವಾಪಸ್ ಕಳುಹಿಸಿದ್ದಾರೆ. ಇದರಿಂದ ನಿರಾಶೆಗೊಂಡವರು ಶಿವಾಜಿ ಕ್ರೀಡಾಂಗಣದ ಹೊರಗೆ ಉಳಿದು ತಮಗೂ ಅವಕಾಶಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
For the first time in the country, the women's army rally was organized at the maratha laghu padati dala Shivaji Stadium on Thursday. Hundreds of young women participated in rally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X