ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುವರ್ಣಸೌಧದಲ್ಲಿ ಶಾವಿಗೆ ಒಣಹಾಕಿದ ಮಹಿಳೆ ಕೆಲಸದಿಂದ ವಜಾ!

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜೂನ್ 2: ಬೆಳಗಾವಿಯ ಸುವರ್ಣ ಸೌಧದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಶಾವಿಗೆ ಒಣಹಾಕಿರುವ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಹಪ್ಪಳ, ಸಂಡಿಗೆ ಶಾವಿಗೆ ಒಣಗಿಸೋಕೆ ಸುವರ್ಣ ಸೌಧ ಬಳಕೆಯಾಗುತ್ತಿದೆಯೇ ಎಂದು ಅಸಮಾಧಾನವ್ಯಕ್ತವಾಗಿದೆ.

ಬೆಳಗಾವಿ ತಾಲೂಕಿನ ಹಲಗಾ ಮತ್ತು ಬಸ್ತವಾಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಲೆಂಬ ಕಾರಣಕ್ಕೆ 400ಕ್ಕೂ ಹೆಚ್ಚು ಕೋಟಿ ರೂಪಾಯಿ ಖರ್ಚು ಮಾಡಿ ಸುವರ್ಣ ಸೌಧ ನಿರ್ಮಾಣ ಮಾಡಲಾಗಿದೆ. ಆದರೆ, ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಅಂತಾ ಸುವರ್ಣ ಸೌಧವನ್ನು ಕಟ್ಟಲಾಗಿದೆ. ಆದರೆ, ಇಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲಾಗಿ ಶಾವಿಗೆ, ಹಪ್ಪಳ, ಸಂಡಿಗೆ ಒಣಗಿಸೋಕೆ ಈ ಸುವರ್ಣ ಸೌಧ ಬಳಕೆಯಾಗುತ್ತಿದೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ಸಾರ್ವಜನಿಕ

ಕರ್ನಾಟಕದಲ್ಲಿ ಕನ್ನಡಿಗರಿಗೆ ತೊಂದರೆ ನೀಡಿದರೆ ಉಗ್ರ ಕ್ರಮ: ಎಂಇಎಸ್‌ಗೆ ಸಿಎಂ ಎಚ್ಚರಿಕೆಕರ್ನಾಟಕದಲ್ಲಿ ಕನ್ನಡಿಗರಿಗೆ ತೊಂದರೆ ನೀಡಿದರೆ ಉಗ್ರ ಕ್ರಮ: ಎಂಇಎಸ್‌ಗೆ ಸಿಎಂ ಎಚ್ಚರಿಕೆ

ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಈ ವಿಚಾರವನ್ನು ಹಂಚಿಕೊಂಡಿದ್ದು, ಸರ್ಕಾರ ಮತ್ತು ಜಿಲ್ಲಾಡಳಿತಗಳ ದಿವ್ಯ ನಿರ್ಲಕ್ಷಕ್ಕೆ ಎತ್ತಿ ತೋರಿಸಿದೆ. ಈ ಫೋಟೊಗಳು ಸಾಮಾಜಿಕ ಜಾಲಾತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಇದರ ನಿರ್ವಣೆಯ ಹೊಣೆ ಹೊತ್ತಿರುವ ಪಿಡಬ್ಲೂಡಿ ಅಧಿಕಾರಿಗಳು ಸುವರ್ಣ ಸೌಧದ ಕಡೆಗೆ ತಿರುಗಿ ನೋಡುತ್ತಿಲ್ಲ. ಇನ್ನು ಈ ಕಟ್ಟಡದ ಭದ್ರತೆಯ ಜವಾಬ್ದಾರಿಯನ್ನು ಹೊತ್ತಿರುವ ಕೈಗಾರಿಕಾ ಭದ್ರತಾ ಪೊಲೀಸ್ ಸರಿಯಾಗಿ ಕರ್ತವ್ಯ ಮಾಡದ ಹಿನ್ನೆಲೆ ಅವಾಂತರಕ್ಕೆ ಕಾರಣವಾಗಿದೆ.

ಶಾವಿಗೆ ಒಣಹಾಕಿದ್ದ ಮಹಿಳೆ ಕೆಲಸದಿಂದ ವಜಾ

ಶಾವಿಗೆ ಒಣಹಾಕಿದ್ದ ಮಹಿಳೆ ಕೆಲಸದಿಂದ ವಜಾ

ಸಾಮಾಜಿಕ ಜಾಲಾತಾಣದಲ್ಲಿ ಸುವರ್ಣ ವಿಧಾನಸೌಧ ಮುಂದೆ ಶಾವಿಗೆ ಒಣಹಾಕಿದ್ದ ಫೋಟೋಗಳು ವೈರಲ್ ಆಗುತ್ತಿದ್ದಂತೆ ಗುತ್ತಿಗೆದಾರ ಮಹಿಳೆಯನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಆದರೆ ಈ ಅತಾಚುರ್ಯದಲ್ಲಿ ಸುವರ್ಣ ಸೌಧಕ್ಕೆ ಭದ್ರತೆ ಒದಗಿಸಿದ್ದ ಪೊಲೀಸರ ವೈಫಲ್ಯ ಮೇಲುನೋಟಕ್ಕೆ ಕಂಡುಬಂದಿದ್ದರೂ ಅಧಿಕಾರಿಗಳು ಮಾತ್ರ ದಿನಗೂಲಿ ಕಾರ್ಮಿಕ ಮಹಿಳೆಯನ್ನ ಕೆಲಸದಿಂದ ವಜಾ ಮಾಡಿರುವುದನ್ನು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.

ಗುತ್ತಿಗೆದಾರಿನಿಗೆ ನೋಟಿಸ್‌

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುತ್ತಿಗೆದಾರ ಕಾರ್ಮಿಕ ಮಹಿಳೆಯ ಅಚಾತುರ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಹಾಗಾಗಿ ಆ ಮಹಿಳೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಇಂತಹ ಘಟನೆ ಮುಂದೆ ಮರುಕಳಿಸಿದಂತೆ ನೋಡಿಕೊಳ್ಳುತ್ತೇವೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಲೋಕೋಪಯೋಗ ಇಲಾಖೆ ತಿಳಿಸಿದೆ.

ಗುಬ್ಬಿಮೇಲೆ ಬ್ರಹ್ಮಾಸ್ತ್ರ

ಗುಬ್ಬಿಮೇಲೆ ಬ್ರಹ್ಮಾಸ್ತ್ರ

ಬೆಳಗಾವಿಯ ಸುವರ್ಣಸೌಧ ಹೆಚ್ಚೆಂದರೆ ವರ್ಷಕ್ಕೆ ಹತ್ತು ದಿನಬಳಕೆಯಾಗಬಹುದು. ಶಾವಿಗೆ ಒಣ ಹಾಕಿದ್ದು ಸುವರ್ಣ ಸೌಧದ ಭದ್ರತೆ ವಹಿಸಿಕೊಂಡಿರುವ ಪೊಲೀಸರ ನಿರ್ಲಕ್ಷ್ಯದಿಂದ. ಆದರೆ ದಿನಗೂಲಿ ನೌಕರೆಯಾಗಿದ್ದ ಮಹಿಳೆಯನ್ನು ವಜಾ ಮಾಡಿರುವ ಗುತ್ತಿಗೆದಾರ‌ರ ನಿರ್ಧಾರ ಖಂಡನೀಯ ಎಂದು ಆಕ್ರೋಶ ಸಾರ್ವಜನಿಕರು ಆಸಮಾಧಾನ ಹೊರಹಾಕಿದ್ದಾರೆ. ಮಲವ್ವಳಂತೆ ಭದ್ರತೆಗಿದ್ದ ಪೊಲೀಸರ ವಿರುದ್ಧವೂ ನಗರ‌ ಪೊಲೀಸ್ ಆಯುಕ್ತರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.

ಜಿಲ್ಲಾಧಿಕಾರಿ ಭೇಟಿ

ಜಿಲ್ಲಾಧಿಕಾರಿ ಭೇಟಿ

ಸುವರ್ಣಸೌಧದದಲ್ಲಿ ಶಾವಿಗೆ ಒಣಹಾಕಿದ್ದ ಸುದ್ದಿ ರಾಜ್ಯಾದ್ಯಂತ ವೈರಲ್ ಆದ ನಂತರ ಸ್ವತಃ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ್‌ ಸುವರ್ಣಸೌಧಕ್ಕೆ ಭೇಟಿ ನೀಡಿದ್ದಾರೆ. ಸೌಧದ ಘನತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿ ಎಂದು ಭದ್ರತೆ ಮತ್ತು ಸ್ವಚ್ಛತೆ ನಿರ್ವಹಣೆಯನ್ನು ಮಾರ್ಗಸೂಚಿಯಂತೆ ಪಾಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿಯೊಬ್ಬರನ್ನು ಕಡ್ಡಾಯವಾಗಿ ತಪಾಸಣೆ ನಡೆಸಿ, ಗುರುತಿನ ಚೀಟಿ ಪರಿಶೀಲಿಸಿ ಪ್ರವೇಶ ಕಲ್ಪಿಸಬೇಕು. ಯಾವುದೇ ರೀತಿಯ ಕೆಲಸಗಳನ್ನು ‌ಮಾಡುವಾಗ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಲಹೆ-ಸೂಚನೆ ಪಾಲಿಸಬೇಕು. ಯಾವುದೇ ರೀತಿಯ ಅಚಾತುರ್ಯ ಉಂಟಾದರೆ ಅವರನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

Recommended Video

ಏನಿದು!! ಪ್ರಧಾನಿ ಮೋದಿ ಈ ರೀತಿ ಯಾರಿಗೆ ಆಟೋಗ್ರಾಫ್ ಕೊಡುತ್ತಿದ್ದಾರೆ ಗೊತ್ತಾ?? | Oneindia Kannada

English summary
After Pictures of shavige being dried on the steps went viral on social media, officials dismissed woman worker who used drying shavige in Suvarna Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X