ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧಿವೇಶನ : ಬೆಳಗಾವಿಯಲ್ಲಿ ಸಿದ್ಧತೆ ಪರಿಶೀಲನೆ

By ನಮ್ಮ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಅಕ್ಟೋಬರ್ 15 : ನವೆಂಬರ್ 14ರಿಂದ ಹತ್ತು ದಿನಗಳ ಕಾಲ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಮತ್ತು ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ, ನಂತರ ಪತ್ರಿಕಾಗೋಷ್ಠಿ ನಡೆಸಿದರು. ಕೆ.ಬಿ.ಕೋಳಿವಾಡ ಅವರು ಮಾತನಾಡಿ, 'ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ನಾನು ಸ್ಪೀಕರ್ ಆಗಿದ್ದಾಗಿನಿಂದ ಉತ್ತರ ಕರ್ನಾಟಕದಲ್ಲಿ 20 ದಿನ ಅಧಿವೇಶನ ನಡೆಯಬೇಕು. ಇಲ್ಲಿ ಹಲವು ಇಲಾಖೆಗಳು ಕಾರ್ಯನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದ್ದೆ ಆದರೆ, ಸರ್ಕಾರ ಅದನ್ನು ಮಾಡಿಲ್ಲ' ಎಂದರು.

ಕೆಂಗಲ್ ಹನುಮಂತಯ್ಯ ಅವರ ಕೂಸು, ವಿಧಾನಸೌಧಕ್ಕೀಗ ಅರುವತ್ತುಕೆಂಗಲ್ ಹನುಮಂತಯ್ಯ ಅವರ ಕೂಸು, ವಿಧಾನಸೌಧಕ್ಕೀಗ ಅರುವತ್ತು

Winter session in Belagavi Suvarna Vidhana Soudha from November 14, 2017

'ನವೆಂಬರ್ 14 ರಿಂದ ಹತ್ತು ದಿನಗಳ ಕಾಲ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ರಾಜ್ಯಪಾಲರಿಗೆ ಪತ್ರವನ್ನು ಸಹ ಬರೆಯಲಾಗಿದೆ. ಅಧಿವೇಶನಕ್ಕೆ ಬರುವ ಶಾಸಕರು, ಸಚಿವರ ವಸತಿ-ಊಟ, ಭದ್ರತೆ, ಸದನದ ಅಗತ್ಯಗಳು ಸೇರಿದಂತೆ ಎಲ್ಲಾ ವಿಚಾರದ ಬಗ್ಗೆ ಚರ್ಚೆ ನಡೆಸಲಾಗಿದೆ'.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮತ್ತು ಸಂಪುಟ ಸಭೆಯ ಇತರ ತೀರ್ಮಾನಗಳುಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮತ್ತು ಸಂಪುಟ ಸಭೆಯ ಇತರ ತೀರ್ಮಾನಗಳು

'ನಾನು ಒಬ್ಬ ಉತ್ತರ ಕರ್ನಾಟಕದವನಾಗಿ ಬೆಳಗಾವಿ ಸುವರ್ಣಸೌಧ ವರ್ಷ ಪೂರ್ತಿ ಕೆಲಸ ಮಾಡಬೇಕು ಎಂಬ ನಿಲುವು ನನ್ನದು. ಬೆಳಗಾವಿ ಸುವರ್ಣಸೌಧಕ್ಕೆ ಪ್ರಮುಖ ಕಚೇರಿಗಳು ಸ್ಥಳಾಂತರ ಆಗಬೇಕು. ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಿಸಬೇಕು ಎಂಬ ಬೇಡಿಕೆಗಳು ನನ್ನದು. ಇದನ್ನು ಅನುಷ್ಠಾನಗೊಳಿಸುವ ಅಧಿಕಾರ ಸರ್ಕಾರಕ್ಕಿದೆ' ಎಂದರು.

English summary
The winter session of the state legislature will be held in Belagavi Suvarna Vidhana Soudha from November 14, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X