ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಉಪ ಚುನಾವಣೆ; ಪ್ರಕಾಶ್ ಹುಕ್ಕೇರಿ ಅಚ್ಚರಿಯ ಹೇಳಿಕೆ!

|
Google Oneindia Kannada News

ಬೆಳಗಾವಿ, ಅಕ್ಟೋಬರ್ 25 : "ಸುರೇಶ್ ಅಂಗಡಿ ಕುಟುಂಬದ ಯಾರಿಗಾದರೂ ಟಿಕೆಟ್ ನೀಡಿದರೆ ಅವರನ್ನು ಗೆಲ್ಲಿಸಲು ಶ್ರಮಿಸುವೆ" ಎಂದು ಚಿಕ್ಕೋಡಿಯ ಮಾಜಿ ಸಂಸದ, ಕಾಂಗ್ರೆಸ್ ನಾಯಕ ಪ್ರಕಾಶ್ ಹುಕ್ಕೇರಿ ಹೇಳಿದರು.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದರಾಗಿದ್ದ ಸುರೇಶ್ ಅಂಗಡಿ ಕೋವಿಡ್‌ ಸೋಂಕಿನಿಂದಾಗಿ ನಿಧನ ಹೊಂದಿದ್ದಾರೆ. ಈಗ ಬೆಳಗಾವಿ ಕ್ಷೇತ್ರದ ಉಪ ಚುನಾವಣೆ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಅದರಲ್ಲೂ ಬಿಜೆಪಿ ಅಭ್ಯರ್ಥಿ ಯಾರು? ಎಂಬ ಚರ್ಚೆಗಳು ಜೋರಾಗಿದೆ.

ಬೆಳಗಾವಿ ಉಪ ಚುನಾವಣೆ; ಜಾರಕಿಹೊಳಿ ಕುಟುಂಬದ ಸ್ಪಷ್ಟನೆ ಬೆಳಗಾವಿ ಉಪ ಚುನಾವಣೆ; ಜಾರಕಿಹೊಳಿ ಕುಟುಂಬದ ಸ್ಪಷ್ಟನೆ

ಭಾನುವಾರ ಚಿಕ್ಕೋಡಿಯಲ್ಲಿ ಮಾತನಾಡಿದ ಪ್ರಕಾಶ್ ಹುಕ್ಕೇರಿ, "ಹಳ್ಳಿ ಹಳ್ಳಿಗಳಲ್ಲೂ ಪ್ರಚಾರ ಮಾಡಿ ಸುರೇಶ್ ಅಂಗಡಿ ಕುಟುಂಬ ಸದಸ್ಯರನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ" ಎಂದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮೇಲೆ ಪ್ರಭಾಕರ್ ಕೋರೆ ಕಣ್ಣು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮೇಲೆ ಪ್ರಭಾಕರ್ ಕೋರೆ ಕಣ್ಣು

Will Work For Suresh Angadi Family Members Win Says Prakash Hukkeri

"ಪಕ್ಷ ಬೇರೆ-ಬೇರೆಯಾಗಿದ್ದರೂ ನಾನು ಮತ್ತು ಸುರೇಶ್ ಅಂಗಡಿ ಆತ್ಮೀಯ ಸ್ನೇಹಿತರಾಗಿದ್ದೆವು. ಅವರು ನಮ್ಮೊಂದಿಗೆ ಇಲ್ಲದಿರುವುದು ದುಃಖದ ಸಂಗತಿ" ಎಂದು ಪ್ರಕಾಶ್ ಹುಕ್ಕೇರಿ ಬೇಸರ ವ್ಯಕ್ತಪಡಿಸಿದರು.

ಎರಡು ಕ್ಷೇತ್ರಗಳ ಉಪ ಚುನಾವಣೆ; ಹೆಚ್ಚಿದ ಜೆಡಿಎಸ್ ಶಕ್ತಿಎರಡು ಕ್ಷೇತ್ರಗಳ ಉಪ ಚುನಾವಣೆ; ಹೆಚ್ಚಿದ ಜೆಡಿಎಸ್ ಶಕ್ತಿ

"ಸುರೇಶ್ ಕುಟುಂಬದವರು ಸ್ಪರ್ಧೆ ಮಾಡಿದರೆ ಪಕ್ಷ ನೋಡುವುದಿಲ್ಲ. ನನ್ನ ಮಗನ ಚುನಾವಣೆ ಹೇಗೆ ಮಾಡಿದ್ದೇನೋ, ಅದೇ ರೀತಿ ಅವರಿಗೂ ನೆರವಾಗುತ್ತೇನೆ" ಎಂದು ಪ್ರಕಾಶ್ ಹುಕ್ಕೇರಿ ಸ್ಪಷ್ಟಪಡಿಸಿದರು.

"ನಮ್ಮ ಪಕ್ಷ, ಹೈಕಮಾಂಡ್ ಅದೇನು ಕ್ರಮ ಕೈಗೊಳ್ಳುತ್ತದೆಯೋ ತೆಗೆದುಕೊಳ್ಳಲಿ, ನನಗೇನು ಅಭ್ಯಂತರವಿಲ್ಲ. ಅವರ ಕುಟುಂಬದ ಗೆಲುವಿಗಾಗಿ ಕೆಲಸ ಮಾಡುವೆ" ಎಂದು ಹೇಳಿದರು.

ಸ್ಪಷ್ಟನೆ ನೀಡಿದ್ದ ಜಾರಕಿಹೊಳಿ : ಬೆಳಗಾವಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ ಜಾರಕಿಹೊಳಿ ಬಿಜೆಪಿಯಿಂದ ಉಪ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಅಮರನಾಥ ಜಾರಕಿಹೊಳಿ ಈ ಸುದ್ದಿಗಳಿಗೆ ಸ್ಪಷ್ಟನೆ ಕೊಟ್ಟಿದ್ದರು.

English summary
I will work for win of Suresh Angadi family members in Belagavi loksabha by elections said Prakash Babanna Hukkeri Congress leader and former Chikkodi MP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X