ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಮೇಶ್ ಕತ್ತಿಗೆ ಡಿಸಿಎಂ ಸ್ಥಾನ? ಪ್ರಶ್ನೆಗೆ ಬಿಎಸ್ ವೈ ನೀಡಿದ ಉತ್ತರವೇನು?

|
Google Oneindia Kannada News

ಬೆಳಗಾವಿ, ಅಕ್ಟೋಬರ್ 15: ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವ ಶಾಸಕ ಉಮೇಶ್ ಕತ್ತಿ ಅವರನ್ನು ಬೆಳಗಾವಿಯಲ್ಲಿಂದು ಭೇಟಿ ಮಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೆಲವು ಕಾಲ ಅವರೊಂದಿಗೆ ಚರ್ಚೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಹಲವು ಅನುಮಾನ ಎಬ್ಬಿಸಿದೆ.

ಬೆಳಗಾವಿಯ ಯುಕೆ 27 ಹೊಟೆಲ್ ನಲ್ಲಿ ಶಾಸಕ ಉಮೇಶ್ ಕತ್ತಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕತ್ತಿ ಮುನಿಸು ಶಮನಕ್ಕೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಶ್ರೀರಾಮುಲು ನಿವೃತ್ತಿ ಹೇಳಿಕೆ ಬಳಿಕ ಡಿಸಿಎಂ ಹುದ್ದೆ ಚರ್ಚೆ ಮತ್ತೆ ಶುರುಶ್ರೀರಾಮುಲು ನಿವೃತ್ತಿ ಹೇಳಿಕೆ ಬಳಿಕ ಡಿಸಿಎಂ ಹುದ್ದೆ ಚರ್ಚೆ ಮತ್ತೆ ಶುರು

ಭೇಟಿಯ ನಂತರ ಮಾತನಾಡಿದ ಯಡಿಯೂರಪ್ಪ, ರಮೇಶ್ ಜತ್ತು ಅವರಿಗೆ ಒಳ್ಳೆಯ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.

ಡಿಸಿಎಂ ಹುದ್ದೆ?

ಡಿಸಿಎಂ ಹುದ್ದೆ?

ಉಮೇಶ್ ಕತ್ತಿಯವರಿಗೆ ಮಂತ್ರಿ ಸ್ಥಾನ ನೀಡುತ್ತೀರಾ? ಅಥವಾ ಉಪಮುಖ್ಹಯಮಂತ್ರಿ ಹುದ್ದೆಯನ್ನೇ ನೀಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಏನನ್ನೂ ಉತ್ತರಿಸದ ಯಡಿಯೂರಪ್ಪ, ನಗುತ್ತಲೇ ಹೊರಟುಹೋದರು. ಆ ನಗುವಲ್ಲೇ ಉತ್ತರವಿದೆ ಎಂಬುದು ಸ್ಪಷ್ಟವಾಗಿತ್ತು!

ಡಿಸೆಂಬರ್ ವರೆಗೆ ಕಾಯಿರಿ

ಡಿಸೆಂಬರ್ ವರೆಗೆ ಕಾಯಿರಿ

ಡಿಸೆಂಬರ್ ವರೆಗೆ ಕಾದರೆ ಕತ್ತಿಗೆ ಒಳ್ಳೆಯ ಸ್ಥಾನ ಸಿಕ್ಕೇ ಸಿಗುತ್ತದೆ. ಆ ನಂಬಿಕೆ ನನಗಿದೆ. ಕತ್ತಿ ಅವರಿಗೆ ಪಕ್ಷದ ಮೇಲೆ ಯಾವುದೇ ಮಿನಿಸಿಲ್ಲ. ಭಿನ್ನಾಭಿಪ್ರಾಯವೂ ಇಲ್ಲ ಎಂಮದು ಬಿ ಎಸ್ ಯಡಿಯೂರಪ್ಪ ಪತ್ರಕರ್ತರಿಗೆ ಹೇಳಿದರು.

ಅದೃಷ್ಟ ಖುಲಾಯಿಸಿದ್ರೆ ನಾನೇ ಸಿಎಂ ಆಗ್ತೀನಿ; ಉಮೇಶ್ ಕತ್ತಿಅದೃಷ್ಟ ಖುಲಾಯಿಸಿದ್ರೆ ನಾನೇ ಸಿಎಂ ಆಗ್ತೀನಿ; ಉಮೇಶ್ ಕತ್ತಿ

ಪುಗಸಟ್ಟೆ ಕಾಫಿ!

ಪುಗಸಟ್ಟೆ ಕಾಫಿ!

ನನಗೆ ಪುಗಸಟ್ಟೆ ಕಾಫಿ ಕುಡೀಬೇಕು ಅನ್ನಿಸಿದ್ರೆ ಕತ್ತಿ ಹೊಟೆಲ್ ಗೆ ಬರುತ್ತೇನೆ ಎಂದ ಬಿ ಎಸ್ ಯಡಿಯೂರಪ್ಪ, ಬೆಳಗಾವಿಯ UK 27 ಹೋಟೆಲನಲ್ಲಿ ಕತ್ತಿ ಜೊತೆಗೆ ಬಿಎಸವೈ ಸಮಾಲೋಚನೆ ನಡೆಸಿದರು.

ಉಮೇಶ್ ಕತ್ತಿ ಹೇಳಿದ್ದೇನು?

ಉಮೇಶ್ ಕತ್ತಿ ಹೇಳಿದ್ದೇನು?

ಸಚಿವ ಸ್ಥಾನ ಸಿಗದ ಕಾರಣಕ್ಕೆ ನಾನು ಬಿಜೆಪಿ ತೊರೆಯುತ್ತೇನೆ ಎಂಬ ವದಂತಿ ಹಬ್ಬಿದೆ. ಅವೆಲ್ಲ ಸತ್ಯವಲ್ಲ. ನಾನು ಎಂದಿಗೂ ಬಿಜೆಪಿಯನ್ನು ತೊರೆಯುವುದಿಲ್ಲ. ಹಣೆಬರಹ ಚೆನ್ನಾಗಿದ್ದರೆ ಮಂತ್ರಿಸ್ಥಾನ ಸಿಗುತ್ತದೆ ಅಷ್ಟೆ ಎಂದರು.

English summary
Will Umesh Katti Get Ministerial Berth? Here Is BS Yediyurappa's Answer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X